Home remedies for Hair Fall: ಕೂದಲಿನ ಆರೋಗ್ಯವನ್ನು ಹೆಚ್ಚಿಸುವ ಗುಣವಿರುವ ಅದ್ಭುತ ಗಿಡಮೂಲಿಕೆಗಳು ನಮ್ಮ ಪ್ರಕೃತಿಯಲ್ಲಿ ದೊರೆಯುತ್ತವೆ. ಅದರಲ್ಲಿ ಸೀಗೆಕಾಯಿ ಒಂದು. ಈ ಸೀಗೆ ಕಾಯಿಯನ್ನು ಸಾವಿರಾರು ವರ್ಷಗಳಿಂದ ನಿಯಮಿತವಾಗಿ ಬಳಸಲಾಗುತ್ತಿದೆ. ಅಲ್ಲದೇ ಆಯರ್ವೇದದಲ್ಲಿ ಈ ಬಗ್ಗೆ ಉಲ್ಲೇಖವೂ ಇದೆ. ಹಾಗಾದರೆ ಈ ಸೀಗೆಕಾಯಿಂದ ಹೇಗೆಲ್ಲಾ ನಮ್ಮ ಕೂದಲನ್ನು ಆರೈಕೆ ಮಾಡಬಹುದು ಎನ್ನುವುದನ್ನು ತಿಳಿಯೋಣ.
ತಲೆಹೊಟ್ಟನ್ನು ನಿವಾರಿಸುತ್ತದೆ
ಹಲವಾರು ವರ್ಷಗಳಿಂದ ಈ ತಲೆಹೊಟ್ಟನ್ನು ತೊಲಗಿಸಲು ಸೀಗೆಕಾಯಿಯನ್ನು ಬಳಸಲಾಗುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮತ್ತು ಅಗತ್ಯ ಪೋಷಕಾಂಶಗಳು ನೆತ್ತಿಗೆ ಆರೈಕೆ ಮಾಡುತ್ತದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
ಇದನ್ನೂ ಓದಿ-ಜೀವನದಲ್ಲಿ ಎಂತಹ ಪರಿಸ್ಥಿತಿಯೇ ಎದುರಾಗಲಿ ಈ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!
ಕೂದಲು ಬೆಳೆಯಲು ಸಹಕಾರಿ
ಸೀಗೆಕಾಯಿ ನೆತ್ತಿಯ ಕ್ಷಾರೀಯ ಮಟ್ಟವನ್ನು ಸಮತೋಲನದಲ್ಲಿಟ್ಟು ಕೂದಲು ಬೆಳವಣಿಗೆಯಾಗುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸೀಗೆಕಾಯಿ ನೆತ್ತಿಯಲ್ಲಿನ ಸೋಂಕುಗಳ ವಿರುದ್ಧ ಹೋರಾಡಿ ನೆತ್ತಿಯನ್ನು ಸ್ವಚ್ಚವಾಗಿಡುತ್ತದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗಿ ಕೂದಲು ದಪ್ಪವಾಗಿ ಬೆಳೆಯುವುದು.
ಸೀಗೆಕಾಯಿ ಕಂಡೀಶನಿಂಗ್ ರೀತಿಯಲ್ಲಿ ಕೆಲಸ ಮಾಡುತ್ತದೆ
ನಮ್ಮ ನೆತ್ತಿಯ ಭಾಗದಲ್ಲಿನ ಕೂದಲಿನ ಬುಡದಲ್ಲಿ ಸೋಂಕು ಆವರಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗಾಗಿ ನೆತ್ತಿಯನ್ನು ಸ್ವಚ್ಚವಾಗಿಡುವುದು ಅವಶ್ಯ. ಅದರಲ್ಲೂ ನೈಸರ್ಗಿಕ ವಿಧಾನಗಳಿಂದ ನೆತ್ತಿಯನ್ನು ಆರೈಕೆ ಮಾಡುವುದು ಇನ್ನು ಒಳಿತು.
ಕೂದಲು ಹೊಳೆಯುತ್ತವೆ
ಕೂದಲಿಗೆ ಸೀಗೆಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ಹೊಳೆಯುವ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿ ಸೀಗೆಕಾಯಿ ಪಡಿಯನ್ನು ದಪ್ಪ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ.
ಇದನ್ನೂ ಓದಿ-ಮನೆಯಲ್ಲಿಯೇ ಬಾಳೆಹಣ್ಣಿನ ಚಿಪ್ಸ್‌ನ್ನು ತಯಾರಿಸಬಹುದು..! ಹೇಗೆ ಗೊತ್ತಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ