ವಿಶ್ವಕಪ್ ಆರಂಭಕ್ಕೆ ನಾಲ್ಕೇ ದಿನ ಬಾಕಿ ಇರುವಾಗ ICC ಮುಂದೆ ಈ ಬೇಡಿಕೆ ಇಟ್ಟ ಪಾಕ್

ICC ODI World Cup 2023: ವಿಶ್ವಕಪ್‌’ಗೆ ಪ್ರಯಾಣಿಸಲು ಬಯಸುವ ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ಪತ್ರ ಬರೆದಿದೆ.

Written by - Bhavishya Shetty | Last Updated : Oct 1, 2023, 09:52 AM IST
    • ಪಾಕಿಸ್ತಾನ ಕ್ರಿಕೆಟ್ ತಂಡವು 7 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದೆ
    • ಕ್ರಿಕೆಟ್ ಮಂಡಳಿಯ ಮುಂದೆ ಬೇಡಿಕೆಯಿಟ್ಟ ಪಾಕ್
    • ಪಾಕಿಸ್ತಾನದ ಮಾಧ್ಯಮಗಳಿಗೆ ವೀಸಾ ಅರ್ಜಿಗಳನ್ನು ಸುಗಮಗೊಳಿಸಲಾಗುತ್ತಿದೆ ಎಂದ ಮೂಲ
ವಿಶ್ವಕಪ್ ಆರಂಭಕ್ಕೆ ನಾಲ್ಕೇ ದಿನ ಬಾಕಿ ಇರುವಾಗ ICC ಮುಂದೆ ಈ ಬೇಡಿಕೆ ಇಟ್ಟ ಪಾಕ್  title=
world cup 2023

ICC ODI World Cup 2023: ODI ವಿಶ್ವಕಪ್‌’ನಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ತಂಡವು 7 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದೆ. ಆದರೆ 2023ರ ವಿಶ್ವಕಪ್‌’ಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಂದೆ ಬೇಡಿಕೆಯೊಂದನ್ನು ಇಟ್ಟಿದೆ.

ಇದನ್ನೂ ಓದಿ: 13 ವರ್ಷಗಳ ಕ್ರಿಕೆಟ್ ಬದುಕು ಅಂತ್ಯ… 37ರ ಹರೆಯದ ಭಾರತದ ಸ್ಟಾರ್ ಬಲಗೈ ಸ್ಪಿನ್ನರ್ ನಿವೃತ್ತಿ ಘೋಷಣೆ

ವಿಶ್ವಕಪ್‌’ಗೆ ಪ್ರಯಾಣಿಸಲು ಬಯಸುವ ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ಪತ್ರ ಬರೆದಿದೆ. ಪಾಕಿಸ್ತಾನವು ಅಕ್ಟೋಬರ್ 6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಟೂರ್ನಿಯ ಮೊದಲ ಪಂದ್ಯವನ್ನು ಆಡಲಿದೆ. ಪಿಸಿಬಿ ಈ ತಿಂಗಳ ಆರಂಭದಲ್ಲಿ ಆಟಗಾರರಿಗೆ ವೀಸಾ ವಿಳಂಬದ ಕುರಿತು ಐಸಿಸಿಗೆ ಪತ್ರ ಬರೆದಿತ್ತು.

ಇನ್ನು 50 ಓವರ್‌’ಗಳ ಈವೆಂಟ್ ಅನ್ನು ವರದಿ ಮಾಡಲು ಬಯಸುವ ಪತ್ರಕರ್ತರ ಹೆಸರನ್ನು ವಿದೇಶಾಂಗ ಸಚಿವಾಲಯವು ಪರಿಗಣಿಸುತ್ತಿದೆ ಎಂದು ಪಂದ್ಯಾವಳಿಯ ಆತಿಥೇಯ ಬಿಸಿಸಿಐನ ಮೂಲಗಳು ತಿಳಿಸಿವೆ. ಪಾಕಿಸ್ತಾನವು ಭಾರತದ ಪೂರ್ವ ಉಲ್ಲೇಖಿತ ಪಟ್ಟಿಯಲ್ಲಿ (PRC) ಇರುವುದರಿಂದ ಅರ್ಜಿಗಳಿಗೆ ವಿದೇಶಾಂಗ, ಗೃಹ ಮತ್ತು ಕ್ರೀಡಾ ಸಚಿವಾಲಯಗಳ ಅನುಮೋದನೆ ಅಗತ್ಯವಿರುತ್ತದೆ.

ಇನ್ನು ಬಿಸಿಸಿಐ ಮೂಲವೊಂದು ನೀಡಿದ ಮಾಹಿತಿ ಪ್ರಕಾರ ಪಾಕಿಸ್ತಾನದ ಮಾಧ್ಯಮಗಳಿಗೆ ವೀಸಾ ಅರ್ಜಿಗಳನ್ನು ಸುಗಮಗೊಳಿಸಲಾಗುತ್ತಿದೆ.

ಇದನ್ನೂ ಓದಿ: ಅಕ್ಟೋಬರ್ ಆರಂಭದಲ್ಲೇ ಕಹಿ! ಭಾರೀ ಏರಿಕೆ ಕಂಡ ಸಿಲಿಂಡರ್ ಬೆಲೆ… ಎಷ್ಟಾಗಿದೆ ನೋಡಿ

ಮತ್ತೊಂದೆಡೆ, ಪಿಸಿಬಿ ಮೂಲವೊಂದು ಹೇಳಿಕೆ ನೀಡಿದ್ದು, 'ವೀಸಾ ನೀತಿಯ ಬಗ್ಗೆ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ಇನ್ನೂ ತಿಳಿಸದಿರುವುದು ಆತಂಕಕಾರಿಯಾಗಿದೆ. ಏಕೆಂದರೆ ಪಾಕಿಸ್ತಾನ ಈಗಾಗಲೇ ಎರಡು ಅಭ್ಯಾಸ ಪಂದ್ಯಗಳನ್ನ ಆಡಿದೆ ಮತ್ತು ಆರು ದಿನಗಳಲ್ಲಿ ತನ್ನ ಮೊದಲ ವಿಶ್ವಕಪ್ ಅನ್ನು ಎದುರಿಸಲಿದೆ” ಎಂದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News