Computer Vision Syndrome - ಅತಿಯಾದ ಗ್ಯಾಜೆಟ್ ಗಳ ಬಳಕೆಈ ಕಾಯಿಲೆಗೆ ಕಾರಣ
Computer Vision Syndrome - ಗ್ಯಾಜೆಟ್‌ಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ, ಹೆಚ್ಚಿನ ಸಂಖ್ಯೆಯ ಜನರು ಕಂಪ್ಯೂಟರ್ ವಿಷನ್ ಸಿಂಡ್ರೋಮ್ನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಲಕ್ಷಣಗಳು ಯಾವುವು ಮತ್ತು ಈ ರೋಗಕ್ಕೆ ಕಾರಣವೇನು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
ನವದೆಹಲಿ: ಕಂಪ್ಯೂಟರ್ ವಿಷನ್ ಸಿಂಡ್ರೋಮ್ (Computer Vision Syndrome) - ಹೆಸರನ್ನು ಕೇಳಿದಾಗ, ಇದು ಕಂಪ್ಯೂಟರ್‌ನಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಉಂಟಾಗುವ ಕಣ್ಣಿನ ಅಥವಾ ದೃಷ್ಟಿಗೆ ಸಂಬಂಧಿಸಿದ ಕಾಯಿಲೆಯಂತೆ (Myopia) ತೋರಬಹುದ. ಆದರೆ, ಇದರಿಂದ ನಿಮ್ಮ ದೇಹ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಇನ್ನೂ ಹಲವು ಸಮಸ್ಯೆಗಳು ಶಾಮೀಲಾಗಿವೆ ಹಾಗೂ ನೀವು ಸಮಯ ಇರುವ ಹಾಗೆ ಚಿಕಿತ್ಸೆ ಪಡೆದುಕೊಳ್ಳದೆ ಹೋದರೆ ಸಮಸ್ಯೆಗಳು ಉಲ್ಭಣಿಸುವ ಸಾಧ್ಯತೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಕೊರೊನಾವೈರಸ್ ಕಾರಣ, ಮಕ್ಕಳ ಶಾಲೆ, ಹಿರಿಯರ ಕಚೇರಿ ಎಲ್ಲವೂ ಮನೆಯಿಂದಲೇ ಸಾಗುತ್ತಿದೆ ಮತ್ತು ಈ ಕಾರಣದಿಂದಾಗಿ ಜನರ ಪರದೆಯ ಸಮಯ ದಲ್ಲಿ (Screen Time) ಗಮನಾರ್ಹವಾಗಿ ಹೆಚ್ಚಳ ಕಂಡುಬರುತ್ತಿದೆ. 2020 ರ ಅಂಕಿಅಂಶಗಳ ಪ್ರಕಾರ, ಭಾರತದ ಪ್ರತಿಯೊಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ 7 ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‌ಗಳಂತಹ ಗ್ಯಾಜೆಟ್‌ಗಳನ್ನು ಬಳಸುತ್ತಿದ್ದಾರೆ.
ಡಿಜಿಟಲ್ ಸ್ಕ್ರೀನ್ ಗಳ ಅತಿಯಾದ ಬಳಕೆಯಿಂದ CVS ಅಪಾಯ
ಕಂಪ್ಯೂಟರ್ ವಿಶನ್ ಸಿಂಡ್ರೋಮ್ ಅನ್ನು ಡಿಜಿಟಲ್ ಆಯ್ ಸ್ಟ್ರೇನ್ (Digital Eye Strain) ಎಂದೂ ಕೂಡ ಕರೆಯಲಾಗುತ್ತದೆ. ಏಕೆಂದರೆ ಈ ಕಾಯಿಲೆಯಲ್ಲಿ ಕಣ್ಣುಗಳ ಮೇಲೆ ಅತ್ಯಧಿಕ ಒತ್ತಡ ಬೀಳುತ್ತದೆ. ಇದಲ್ಲದೆ ತಲೆನೋವು, ಕುತ್ತಿಗೆ ನೋವು, ಹೆಗಲ ನೋವುಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಮೇರಿಕನ ಆಪ್ಟೋಮ್ಯಾಟಿಕ್ ಅಸ್ಸೋಸಿಯೇಶನ್ ಹೇಳಿಕೆಯನ್ನು ನಂಬುವುದಾದರೆ. ಒಂದು ವೇಳೆ ಯಾವುದೇ ಓರ್ವ ವ್ಯಕ್ತಿ ದಿನಕ್ಕೆ ಸತತವಾಗಿ ಎರಡು ಗಂಟೆಗಳ ಕಾಲ ಕಂಪ್ಯೂಟರ್ ಅಥವಾ ಡಿಜಿಟಲ್ ಸ್ಕ್ರೀನ್ ಬಳಸಿದರ, ಆ ವ್ಯಕ್ತಿಗೆ ಡಿಜಿಟಲ್ ಆಯ್ ಸ್ಟ್ರೇನ್ ಅಥವಾ CVS ಬರುವ ಸಾಧ್ಯತೆ ಹೆಚ್ಚಾಗಿದೆ.
ಲಕ್ಷಣಗಳು ಕೆಳಗಿನಂತಿವೆ
- ಕಣ್ಣುಗಳ ಮೇಲೆ ಒತ್ತಡ
- ಕಣ್ಣುಗಳಲ್ಲಿ ತುರಿಕೆ
- ಒಣ ಕಣ್ಣುಗಳು
- ಮಸುಕು ಕಾಣುವುದು
ಇದನ್ನೂ ಓದಿ-Garlic: ತಿಳಿಯಿರಿ ಪುರುಷರಲ್ಲಿ ಒಂದು ಎಸಳು ಬೆಳ್ಳುಳ್ಳಿಯ ಪ್ರಯೋಜನ.!
- ಡಬಲ್ ದೃಷ್ಟಿ (ಎಲ್ಲದರ ಎರಡು ದೃಷ್ಟಿ)
- ಕೇಂದ್ರೀಕರಿಸುವಲ್ಲಿ ತೊಂದರೆ
- ಸಮೀಪದೃಷ್ಟಿ ದೋಷ ಅಥವಾ ಸಮೀಪದೃಷ್ಟಿ
- ತಲೆನೋವು (Headache)
- ಕುತ್ತಿಗೆ ನೋವು ಅಥವಾ ಸಿಲುಕಿಕೊಂಡಿರುವಭಾವನೆ (Neck Pain)
- ಭುಜದ ನೋವು
- ಬೆನ್ನು ನೋವು
ಇದನ್ನೂ ಓದಿ- Tender Coconut: ನಿತ್ಯ ಸಂಜೀವಿನಿ ಈ ಎಳನೀರು.! ಈ ಹತ್ತು ಅದ್ಭುತ ಲಾಭ ನೋಡಿ.!
ಈ ಕಾರಣಗಳಿಂದ ಈ ಸಮಸ್ಯೆ ತಲೆದೂರುತ್ತದೆ
- ಡಿಜಿಟಲ್ ಸ್ಕ್ರೀನ್ ಬಳಕೆಯ ಸಂದರ್ಭದಲ್ಲಿ ಸರಿಯಾದ ಪ್ರಮಾಣದಲ್ಲಿ ಬೆಳಕು ಇಲ್ಲದೆ ಇರುವುದು.
- ಸ್ಕ್ರೀನ್ ಮೇಲೆ ಅತಿಯಾದ ಬೆಳಕು ಬಿದ್ದು, ಸ್ಕ್ರೀನ್ ಹೊಳೆಯುವುದು.
- ಕಣ್ಣುಗಳಿಂದ ಸ್ಕ್ರೀನ್ ಎಷ್ಟು ಅಂತರದಲ್ಲಿರಬೇಕು ಅದಕ್ಕಿಂತ ಕಡಿಮೆ ಅಂತರ ಇರುವುದು.
- ಗ್ಯಾಜೆಟ್ ಅಥವಾ ಡಿಜಿಟಲ್ ಸ್ಕ್ರೀನ್ ಉಪಯೋಗಿಸುವ ವೇಳೆ ಕುಳಿತುಕೊಳ್ಳುವ ಭಂಗಿ ಸರಿಯಾಗಿರದಿರುವುದು.
- ಯಾವುದೇ ಬ್ರೇಕ್ ಇಲ್ಲದೆ ಸತತವಾಗಿ ಸ್ಕ್ರೀನ್ ಕಡೆಗೆ ನೋಡುವುದು ಇತ್ಯಾದಿಗಳು ಇದಕ್ಕೆ ಕಾರಣ.
ಇದನ್ನೂ ಓದಿ-ಪುರುಷರು ಬೇಸಿಗೆಯಲ್ಲಿ ತಪ್ಪದೇ ಈ Fruit ಸೇವಿಸಿದರೆ ಸಿಗುತ್ತೆ ಹಲವು ಪ್ರಯೋಜನ
(ಸೂಚನೆ - ಯಾವುದೇ ಉಪಾಯಗಳನ್ನು ಅನುಸರಿಸುವ ಮೊದಲು ನುರಿತ ತಜ್ಞರ ಸಲಹೆ ಪಡೆಯಿರಿ. ZEE HINDUSTAAN KANNADA ಈ ಮಾಹಿತಿಯ ಸತ್ಯಾಸತ್ಯತೆಯ ಜವಾಬ್ದಾರಿ ಹೊರುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.