Tender Coconut: ನಿತ್ಯ ಸಂಜೀವಿನಿ ಈ ಎಳನೀರು.! ಈ ಹತ್ತು ಅದ್ಭುತ ಲಾಭ ನೋಡಿ.!

ಎಳನೀರು ಆರೋಗ್ಯಕ್ಕೆ ಚೇತೋಹಾರಿ ಅನ್ನೋದು ಎಲ್ಲರಿಗೂ ಗೊತ್ತು. ಅದರೆ, ಅದು ಹೇಗೆ ಅನ್ನೋದನ್ನ ತಿಳಿಯುವುದು ಬಹಳ ಮುಖ್ಯ.  

Written by - Ranjitha R K | Last Updated : Mar 4, 2021, 01:32 PM IST
  • ತೆಂಗಿನಮರದ ಪ್ರಯೋಜನ ಒಂದೆರಡಲ್ಲ. ಇದೇ ಕಾರಣಕ್ಕೆ ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನಲಾಗುತ್ತದೆ.
  • ಅದರ ಪ್ರತಿಯೊಂದು ಅಂಗವೂ ಪ್ರಯೋಜನಕಾರಿ.
  • ಇವತ್ತು ಎಳನೀರಿನ 10 ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
Tender Coconut: ನಿತ್ಯ ಸಂಜೀವಿನಿ ಈ ಎಳನೀರು.! ಈ ಹತ್ತು ಅದ್ಭುತ ಲಾಭ ನೋಡಿ.! title=
ಎಳನೀರಿನ 10 ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. (file photo)

ಬೆಂಗಳೂರು : ತೆಂಗಿನಮರದ ಪ್ರಯೋಜನ ಒಂದೆರಡಲ್ಲ. ಇದೇ ಕಾರಣಕ್ಕೆ ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನಲಾಗುತ್ತದೆ. ಅದರ ಪ್ರತಿಯೊಂದು ಅಂಗವೂ ಪ್ರಯೋಜನಕಾರಿ. ಇವತ್ತು ಎಳನೀರಿನ (Tender Coconut) ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ಎಳನೀರು ಆರೋಗ್ಯಕ್ಕೆ ಚೇತೋಹಾರಿ ಅನ್ನೋದು ಎಲ್ಲರಿಗೂ ಗೊತ್ತು. ಅದರೆ, ಅದು ಹೇಗೆ ಅನ್ನೋದನ್ನ ತಿಳಿಯುವುದು ಬಹಳ ಮುಖ್ಯ. ದಿನಕ್ಕೊಂದು ಎಳನೀರು ಕುಡಿದು ನೋಡಿ. ನಿಮ್ಮ ಆರೋಗ್ಯದಲ್ಲಿ (Health Tips) ಬಹಳಷ್ಟು ಬದಲಾವಣೆ ಆಗುತ್ತದೆ ನೋಡಿ. 

ಎಳನೀರಿನ ಪ್ರಯೋಜನಗಳಿವು..!
1. ನೈಸರ್ಗಿಕ ಪೇಯ (Natural Drink)
ನಿಮಗೆ ಗೊತ್ತಿದೆ ಮಾರುಕಟ್ಟೆಯಲ್ಲಿ (Market) ಸಿಗುವ ಪೇಯಗಳಲ್ಲಿ ಸಾಕಷ್ಟು ಹಾನಿಕಾರಕ ಕೆಮಿಕಲ್ ಗಳು (Chemical) ಬೆರೆತಿರುತ್ತವೆ. ಆದರೆ, ಎಳನೀರು ನೈಸರ್ಗಿಕ ಪೇಯ. ಇದರಲ್ಲಿ ಯಾವುದೇ ಅಡ್ಡ ಪರಿಣಾಮ (Side effects) ಇರೋದಿಲ್ಲ. ಕಲಬೆರಕೆ ಇರಲು ಸಾಧ್ಯವೇ ಇಲ್ಲ. ಹಾನಿಕಾರಕ ಕೆಮಿಕಲ್ ಇರೋದು ಅಸಾಧ್ಯ.

ಇದನ್ನೂ ಓದಿ : ಪುರುಷರು ಬೇಸಿಗೆಯಲ್ಲಿ ತಪ್ಪದೇ ಈ Fruit ಸೇವಿಸಿದರೆ ಸಿಗುತ್ತೆ ಹಲವು ಪ್ರಯೋಜನ
 
2.  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: 
ಎಳನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಸಿಗುತ್ತದೆ. ಹಾಗಾಗಿ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ. 

3. ಹೃದಯಕ್ಕೆ ಒಳ್ಳೆಯದು :
ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಪ್ರಮಾಣವನ್ನು ನಿಗ್ರಹಿಸುತ್ತದೆ.  ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೃದಯದ ಆರೋಗ್ಯಕ್ಕೆ (Health of heart) ಎಳನೀರು ಬೆಸ್ಟ್.

4. ಸಕ್ಕರೆ ಕಾಯಿಲೆಗೆ ರಾಮಬಾಣ :
ಎಳನೀರಿನಲ್ಲಿ ಮಗ್ನೇಶಿಯಂ (Magnesium) ಪ್ರಮಾಣ ಹೇರಳವಾಗಿರುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿಸುತ್ತದೆ. ಜೊತೆಗೆ ಸಕ್ಕರೆ ಪ್ರಮಾಣ (Sugar Level) ಕಡಿಮೆ ಮಾಡುತ್ತದೆ. ತತ್ಪರಿಣಾಮ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ.

5. ರಕ್ತದೊತ್ತಡ ಕಡಿಮೆ ಮಾಡುತ್ತದೆ :
ಎಳನೀರಿನಲ್ಲಿ ಸಾಕಷ್ಟು ಪೊಟ್ಯಾಶಿಯಂ ಅಂಶ ಸಿಗುತ್ತದೆ. ಇದು ರಕ್ತದೊತ್ತಡ (Blood Pressure) ಕಡಿಮೆ ಮಾಡುತ್ತದೆ. ಜೊತೆಗೆ ರಕ್ತಹೆಪ್ಪುಗಟ್ಟುವುದನ್ನು ತಪ್ಪಿಸುತ್ತದೆ. 

ಇದನ್ನೂ ಓದಿ : Health Tips: ನೂರು ವರ್ಷ ಚೆನ್ನಾಗಿರಿ..! ಮನೆಯಲ್ಲೇ ರಾಗಿ ರೊಟ್ಟಿ ಮಾಡಿ ತಿನ್ನಿ.!

6. ಕಿಡ್ನಿ ಸ್ಟೋನ್  ಕಂಟ್ರೋಲ್ ಮಾಡುತ್ತದೆ:
ಎಳನೀರು ಮೂತ್ರ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹೀಗಾಗಿ, ಮೂತ್ರದಲ್ಲಿರುವ ಸಣ್ಣ ಸಣ್ಣ ಹರಳುಗಳು ಮೂತ್ರಕೋಶದಲ್ಲಿ ಸಂಗ್ರಹವಾಗದೇ ದೇಹದಿಂದ ಹೊರಗೆ ಹೋಗುತ್ತವೆ. ಇದರಿಂದ ಕಿಡ್ನಿಯಲ್ಲಿ ಸ್ಟೋನ್ (Kidney Stone) ಸಮಸ್ಯೆ ಉಂಟಾಗುವುದು ತಪ್ಪುತ್ತದೆ

7. ದೇಹಾಯಾಸ ನೀಗಿಸುತ್ತದೆ :
ಎಳನೀರಿನಲ್ಲಿ ಗ್ಲುಕೋಸ್ ಪ್ರಮಾಣ ಹೇರಳವಾಗಿರುತ್ತದೆ. ಇದು ದೇಹಾಯಾಸವನ್ನು ಕ್ಷಣ ಮಾತ್ರದಲ್ಲಿ ನಿವಾರಿಸುತ್ತದೆ. ಜೊತೆಗೆ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ. ಡಿಹೈಡ್ರೇಶನ್ ಕೂಡಾ ಕಡಿಮೆ ಮಾಡುತ್ತದೆ.

8. ಬೊಜ್ಜು (obesity) ಇಳಿಕೆಗೆ ಸಹಕಾರಿ :
ಎಳನೀರಿನಲ್ಲಿ ಫೈಬರ್ (Fiber) ಅಂಶ ಜಾಸ್ತಿ, ಕೊಬ್ಬಿನಾಂಶ ಕಡಿಮೆ ಇರುತ್ತದೆ. ಫೈಬರ್ ಜೀರ್ಣ ಕ್ರಿಯೆಯನ್ನು ನಿಧಾನಿಸುತ್ತದೆ. ಹಸಿವು ಕಡಿಮೆ ಆಗುತ್ತದೆ. ತತ್ಪರಿಣಾಮ ಬೊಜ್ಜು ಬೆಳೆಯುವುದಿಲ್ಲ.

ಇದನ್ನೂ ಓದಿ : Milk Benefits: ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು ಉತ್ತಮ ಆರೋಗ್ಯ ನಿಮ್ಮದಾಗಿಸಿ

9. ಚರ್ಮದ ದೋಸ್ತ್ : 
ಎಳನೀರು ಚರ್ಮಕ್ಕೆ ಕಾಂತಿ ನೀಡುತ್ತದೆ. ಚರ್ಮದಲ್ಲಿನ ಹೆಚ್ಚಿನ ಎಣ್ಣೆಯ ಅಂಶ ಕಡಿಮೆ ಮಾಡುತ್ತದೆ. ಮುಖದಲ್ಲಿ ಮೊಡವೆಕಾರಕ ರಾಡಿಕಲ್ ಗಳನ್ನು  ನಿವಾರಿಸುತ್ತದೆ. ಮುಖ್ಯವಾಗಿ ಮುಖದ ಸುಕ್ಕು ಕಡಿಮೆ ಮಾಡುತ್ತದೆ. ವಯಸ್ಸಾಗಿದ್ದು ಗೊತ್ತೇ ಆಗಲ್ಲ.

10. ಗರ್ಭಿಣಿಯರಿಗೆ ಅಮೃತ :
ಎಳನೀರಿನಲ್ಲಿ ಒಮೆಗಾ 3  ಹೇರಳವಾಗಿ ಸಿಗುತ್ತದೆ. ಗರ್ಭದಲ್ಲಿನ ಮಗುವಿನ ಮೆದುಳಿನ ಬೆಳವಣಿಗೆ ಚುರುಕಾಗಲು ಒಮೆಗಾ 3 ಬೇಕೇ ಬೇಕು. ಹಾಗಾಗಿ ಗರ್ಭಿಣಿಯರು ಎಳನೀರು ಕುಡಿದಷ್ಟು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News