Health Tips : ಏಳು ಮಹಾರೋಗಕ್ಕೆ ರಾಮಬಾಣ ಈ ನುಗ್ಗೆ ಸೊಪ್ಪು..!
ನುಗ್ಗೆ ಸೊಪ್ಪಿನಲ್ಲಿ ಪಾಲಕ್ ಸೊಪ್ಪಿಗಿಂತಲೂ ಆರು ಪಟ್ಟು ಹೆಚ್ಚು ಕಬ್ಬಿಣದ ಅಂಶ ಇದೆ. ಹಾಗಾಗಿ ಇದು ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.
ಬೆಂಗಳೂರು : ಆರೋಗ್ಯದ ವಿಚಾರದಲ್ಲಿ (Health tips) ನುಗ್ಗೆ ಕಾಯಿಯ ಮಹತ್ವ ನಿಮಗೆ ಗೊತ್ತಿರಬಹುದು. ಆದರೆ, ನಿಮಗೆ ತಿಳಿದಿರಲಿ, ನುಗ್ಗೆ ಕಾಯಿ ಅಷ್ಟೇ ಅಲ್ಲ. ನುಗ್ಗೆ ಸೊಪ್ಪು ಕೂಡಾ ಆರೋಗ್ಯ ವಿಚಾರದಲ್ಲಿ ಸಂಜೀವಿನಿ. ನುಗ್ಗೆ ಸೊಪ್ಪಿನ (Moringa leaves) ಮಹತ್ವವನ್ನು ಒಮ್ಮೆ ಓದಿ. ನುಗ್ಗೆ ಕಾಯಿಗಿಂತ ನುಗ್ಗೆ ಸೊಪ್ಪು ನಿಮಗಿಷ್ಟ ವಾಗುತ್ತದೆ.
1. ಮಧುಮೇಹಕ್ಕೆ ರಾಮಬಾಣ.!
ಮಧುಮೇಹ (Diabetic) ಇದ್ದಾಗ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆ ಆಗುತ್ತದೆ. ಆದರೆ, ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಡಿ (Vitamin D)ಅಂಶ ಹೇರಳವಾಗಿರುತ್ತದೆ. ಇದು, ಮನುಷ್ಯನ ದೇಹದಲ್ಲಿ ಹೇರಳವಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ.
2. ಹೃದಯದ ಮಿತ್ರ ಈ ನುಗ್ಗೆ ಸೊಪ್ಪು.!
ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ (Cholesterol) ಇರಬೇಕು. ಆದರೆ ಕೆಟ್ಟ ಕೊಲೆಸ್ಟ್ರಾಲ್ ಇರಬಾರದು. ನಮ್ಮ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾದಾಗ ಹೃದಯದ ಕೋಶಗಳಿಗೆ ಹಾನಿಯಾಗುತ್ತದೆ. ಇದು ಮುಂದೆ ಹೃದಯಾಘಾತಕ್ಕೆ (Heart Attack) ಕಾರಣವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಎಂದೇ ಗುರುತಿಸಲಾಗಿರುವ ಎಲ್ ಡಿಎಲ್ ವಿರುದ್ಧ ನುಗ್ಗೆ ಸೊಪ್ಪು (Moringa leaves) ಹೋರಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಒಮೆಗಾ-3 ಫ್ಯಾಟಿ ಆಮ್ಲ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ದೇಹದಿಂದ ಹೀರಿಕೊಳ್ಳುತ್ತದೆ. ಇದರಿಂದ ರಕ್ತನಾಳ ಬ್ಲಾಕ್ ಆಗುವುದಿಲ್ಲ. ರಕ್ತ ಸರಾಗವಾಗಿ ಹರಿಯುತ್ತದೆ. ನುಗ್ಗೆ ಸೊಪ್ಪಿನ ಸಾರು ತಿಂದರೆ ಕೆಟ್ಟ ಕೊಲೆಸ್ಟ್ರಾಲ್ನಿಂದ ಹೃದಯವನ್ನು ರಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ : ಮಾರ್ಚ್ 1 ರಿಂದ Corona Vaccination ಎರಡನೇ ಹಂತ ಆರಂಭ, ಯಾರಿಗೆ ಸಿಗಲಿದೆ ಲಸಿಕೆ?
3. ರಕ್ತ ಹೀನತೆ ನಿವಾರಿಸುತ್ತದೆ:
ಗೊತ್ತಿರಲಿ, ನುಗ್ಗೆ ಸೊಪ್ಪಿನಲ್ಲಿ ಪಾಲಕ್ ಸೊಪ್ಪಿಗಿಂತಲೂ ಆರು ಪಟ್ಟು ಹೆಚ್ಚು ಕಬ್ಬಿಣದ ಅಂಶ ಇದೆ. ಹಾಗಾಗಿ ಇದು ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ. ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ರಕ್ತ ಶುದ್ಧವಾಗುತ್ತದೆ.
4. ಮೂಳೆಗಳನ್ನು ಬಲಗೊಳಿಸುತ್ತದೆ :
ಹಾಲಿಗಿಂತಲೂ 4 ಪಟ್ಟು ಅಧಿಕ ಕ್ಯಾಲ್ಸಿಯಂ (Calcium) ನುಗ್ಗೆ ಸೊಪ್ಪಿನಲ್ಲಿದೆ. ಹಾಗಾಗಿ ನುಗ್ಗೆ ಸೊಪ್ಪು ನಿಮ್ಮ ಮೂಳೆಯನ್ನು ಸ್ಟ್ರಾಂಗ್ ಆಗಿಡುತ್ತದೆ. ಒಂದು ಲೋಟ ಹಾಲಿಗೆ 1 ರಿಂದ 9 ಚಮಚ ನುಗ್ಗೆ ಸೊಪ್ಪಿನ ರಸ ಸೇರಿಸಿ ಕುಡಿಯಿರಿ. ನಿಮ್ಮ ಮೂಳೆಯೂ ಸ್ಟ್ರಾಂಗ್ ಆಗುತ್ತದೆ.
ಇದನ್ನೂ ಓದಿ : ಈ ಆಹಾರ ಸೇವಿಸುವುದರಿಂದ ಕ್ಷಣದಲ್ಲಿ ನಿವಾರಣೆಯಾಗುತ್ತೆ ನಿಮ್ಮ Acidity ಸಮಸ್ಯೆ
5. ದೃಷ್ಟಿ ದೋಷ ನಿವಾರಿಸುತ್ತದೆ :
ಕಣ್ಣಿನ (Eye) ಆರೋಗ್ಯ ಚೆನ್ನಾಗಿರಲಿ ಎಂದು ಕೊಂಡು ನೀವು ಕ್ಯಾರೆಟ್ ತಿನ್ನುತ್ತೀರಿ. ಕ್ಯಾರೆಟ್ನಲ್ಲಿ (Carrot) ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಎ ಸಿಗುತ್ತದೆ. ಆದರೆ, ನಿಮಗಿದು ತಿಳಿದಿರಲಿ. ಕ್ಯಾರೆಟ್ ಗಿಂತ ನಾಲ್ಕು ಪಟ್ಟು ಅಧಿಕ ಪ್ರಮಾಣದ ವಿಟಮಿನ್ ಎ ನುಗ್ಗೆ ಸೊಪ್ಪಿನಲ್ಲಿ ಸಿಗುತ್ತದೆ. ಹಾಗಾಗಿ, ನುಗ್ಗೆ ಸೊಪ್ಪು ಕಣ್ಣಿಗೆ ತುಂಬಾ ಒಳ್ಳೆಯದು.
6. ಕ್ಯಾನ್ಸರ್ ತಡೆಗಟ್ಟುತ್ತದೆ..!
ನಿಮಗೆ ಗೊತ್ತು. ಕ್ಯಾನ್ಸರ್ (Cancer) ಕೋಶಗಳನ್ನು ಶಾಶ್ವತವಾಗಿ ತೆಗೆಯಲು ಸಾಧ್ಯವಿಲ್ಲ. ಆದರೆ, ಈ ತಾಕತ್ತು ನುಗ್ಗೆ ಸೊಪ್ಪಿಗಿದೆ. ನುಗ್ಗೆ ಸೊಪ್ಪಿನಲ್ಲಿ ಹೇರಳ ಪ್ರಮಾಣದಲ್ಲಿ ಅಂಟಿ ಒಕ್ಸಿಡೆಂಟ್ ಗಳಿವೆ. ಪೋಷಕಾಂಶಗಳೂ ಚೆನ್ನಾಗಿರುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ಕಾರಕ ಪ್ರೀ ರಾಡಿಕಲ್ಸ್ ಗಳ ವಿರುದ್ಧ ಮೂಲದಲ್ಲೇ ಹೋರಾಟಕ್ಕೆ ಇಳಿಯುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ಕಾರಕ ಕೋಶಗಳನ್ನು ಬೆಳೆಯಲು ಬಿಡುವುದಿಲ್ಲ. ಕ್ಯಾನ್ಸರ್ ವಿರುದ್ಧ ಒಂದು ರಕ್ಷಾ ಕವಚ ಸೃಷ್ಟಿಸುತ್ತದೆ.
ಇದನ್ನೂ ಓದಿ : Health Tips : ಹಣ್ಣು, ಮೊಟ್ಟೆ, ಬ್ರೆಡ್, ಪನೀರ್ ಫ್ರಿಜ್ ನಲ್ಲಿ ಇಟ್ಟು ಬಳಿಕ ತಿನ್ನಬಹುದೇ..?
7. ರಕ್ತದೊತ್ತಡ ನಿವಾರಕ..!
ನುಗ್ಗೆ ಸೊಪ್ಪು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ. ನುಗ್ಗೆ ಸೊಪ್ಪಿನಲ್ಲಿ ಪೈಥೋಕೆಮಿಕಲ್ ಅಂಶ ಇದೆ. ಇದು ರಕ್ತದೊತ್ತಡ (Blood pressure) ನಿವಾರಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.