ಹೃದ್ರೋಗ ಸಮಸ್ಯೆಯಿಂದ ದೂರವಿರಬೇಕೇ? ಹಾಗಿದ್ದರೆ ಈ ಆಹಾರ ಸೇವಿಸಿ!

ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆಗೊಳಿಸಲು ಕೊಬ್ಬಿದ ಮೀನು ಸೇವನೆ ಸಹಕಾರಿ ಎಂದು ಫಿನ್ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. 

Divyashree K Divyashree K | Updated: Aug 2, 2018 , 07:36 PM IST
ಹೃದ್ರೋಗ ಸಮಸ್ಯೆಯಿಂದ ದೂರವಿರಬೇಕೇ? ಹಾಗಿದ್ದರೆ ಈ ಆಹಾರ ಸೇವಿಸಿ!

ಲಂಡನ್: ಕೊಬ್ಬಿನ ಮೀನುಗಳನ್ನು ವಾರಕ್ಕೆ ನಾಲ್ಕು ಬಾರಿ ಸೇವಿಸುವುದರಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ ಹೃದ್ರೋಗದ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ. 

ಕೊಬ್ಬಿದ ಮೀನಿನಲ್ಲಿರುವ ಹೈ-ಡೆನ್ಸಿಟಿ ಲಿಪೊಪ್ರೋಟೀನ್ (ಎಚ್ಡಿಎಲ್) ಕಣಗಳ ಗಾತ್ರ ಮತ್ತು ಲಿಪಿಡ್ ಸಂಯೋಜನೆಯು ಮಾನವ ದೇಹದ ಉತ್ತಮ ಕೊಲೆಸ್ಟ್ರಾಲ್ ಅಂಶ ಹೆಚ್ಚಿಸುವುದಲ್ಲದೆ, ದುರ್ಬಲ ಗ್ಲೂಕೋಸ್ ಚಯಾಪಚಯ ಕ್ರಿಯೆಯನ್ನೂ ಸರಿಪಡಿಸುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. 

ಇದಲ್ಲದೆ, ಅಗತ್ಯವಾದ ಒಮೆಗಾ -3 ಕೊಬ್ಬಿನಾಮ್ಲ ಹೊಂದಲು, ಹೆಚ್ಚು ಅಲ್ಫಾ-ಲಿನೋಲೆನಿಕ್ ಆಸಿಡ್ ಇರುವ ಕ್ಯಾಮೆಲಿನಾ ಎಣ್ಣೆಯನ್ನು ಪ್ರತಿನಿತ್ಯ 30 ಮಿ.ಲೀ. ಬಳಸುವುದರಿಂದ ದೇಹದಲ್ಲಿನ ಹಾನಿಕಾರಕ ಮಧ್ಯ-ಸಾಂದ್ರತೆಯ ಲಿಪೊಪ್ರೋಟೀನ್ (ಐಡಿಎಲ್) ಕಣಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

ಮೀನುಗಳಲ್ಲಿ ಕಂಡುಬರುವ ಒಮೆಗಾ -3 ಕೊಬ್ಬಿನಾಮ್ಲಗಳು ಲಿಪೊಪ್ರೋಟೀನ್ ಗಾತ್ರ ಮತ್ತು ಸಂಯೋಜನೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತವೆ. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಫಿನ್ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.