ಬೆಂಗಳೂರು: ಇಂದಿನ ಹೆಲ್ಪ್ ಟಿಪ್ಸ್ ನಲ್ಲಿ (Health Tips) ನಾವು ಹೇಳ ಹೊರಟಿರುವುದು ತೆಂಗಿನ ಕಾಯಿಯ ವಿಶೇಷ ಗುಣಗಳ ಬಗ್ಗೆ. ತೆಂಗಿನ ಕಾಯಿ (Coconut)ಅಂದ ಕೂಡಲೇ ಸಾಮಾನ್ಯವಾಗಿ ಚಟ್ನಿ, ಪಲ್ಯ, ಸಾಂಬಾರ್ ಅಥವಾ ಕೊಬ್ಬರಿ ಮಿಟಾಯಿ ಅಂತ ಬಳಸ್ತಾರೆ. ಈ ತೆಂಗಿನ ಕಾಯಿ ಅಡುಗೆಯ ರುಚಿ ಹೆಚ್ಚಿಸುತ್ತದೆ ಎನ್ನುವುದಷ್ಟೇ ನಮಗೆ ತಿಳಿದಿರುವ ಅಂಶ.  ಕಾಯಿಯ ಅದ್ಬುತ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ತೆಂಗಿನ ಕಾಯಿ ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬೇಸಿಗೆ (Summer) ಸಮಯದಲ್ಲಿ ತೆಂಗಿನ ಕಾಯಿ ಬಳಕೆ ಆರೋಗ್ಯಕ್ಕೆ (Good for Health) ಇನ್ನೂ ಉಪಕಾರಿ. ಇದು ಅತ್ಯಂತ ಪೌಷ್ಠಿಕಾಂಶಗಳಿಂದ  ಕೂಡಿದೆ. ತೆಂಗಿನಕಾಯಿ ಸಾಕಷ್ಟು ಪ್ರಮಾಣದ ಮಿನರಲ್ಸ್ ಮತ್ತು ವಿಟಮಿನ್ ಗಳಿಂದ ಕೂಡಿದೆ. 
 
ದೇಹವನ್ನು ತಣ್ಣಗಿರಿಸುತ್ತದೆ : 
ಬೇಸಿಗೆ (Summer) ಶುರುವಾಗಿಯೇ ಬಿಟ್ಟಿದೆ. ಬೇಸಿಗೆ ಕಾಲದಲ್ಲಿ ದೇಹದ ಶಾಖವೂ ಕೂಡಾ ಹೆಚ್ಚುತ್ತದೆ.   ಈ ಸಮಯದಲ್ಲಿ ತೆಂಗಿನ ಕಾಯಿ (Coconut) ಸೇವನೆ ನಮ್ಮ ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ. ತೆಂಗಿನಕಾಯಿ ದೇಹದಲ್ಲಿ ನೀರಿನ (water) ಅಂಶ ಕಡಿಮೆಯಾಗುವುದನ್ನು ತಪ್ಪಿಸುತ್ತದೆ. ಈ ಕಾರಣದಿಂದಲೇ ಬೇಸಿಗೆಯಲ್ಲಿ ಹೆಚ್ಚು ಎಳನಿರು ಸೇವಿಸುವಂತೆ ಸೂಚಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Vitamin C ಸಮೃದ್ಧವಾಗಿರುವ ಈ 5 ಆಹಾರಗಳನ್ನು ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿ


ಕೊಲೆಸ್ಟ್ರಾಲ್ ನಿಯಂತ್ರಣ ಮಾಡುತ್ತದೆ : 
ಸ್ಯಾಚುರೇಟೆಡ್ ಕೊಬ್ಬು ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ.  ಆದ್ದರಿಂದ ಪ್ರತಿದಿನ ಸ್ವಲ್ಪ ತೆಂಗಿನಕಾಯಿ ಸೇವಿಸಿದರೆ ಕೊಲೆಸ್ಟ್ರಾಲ್ (Cholesterol) ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.  ತೆಂಗಿನಕಾಯಿ ಅಂದರೆ ಒಣಗಿರುವ ಕಾಯಿಯನ್ನಾದರೂ ಸೇವಿಸಬಹುದು ಅಥವಾ ಹಸಿ ಕಾಯಿಯಾದರೂ ಸರಿ. ಅದರಲ್ಲಿ ಹೇರಳವಾದ ವಿಟಮಿನ್ ಮಿನರಲ್ ಅಂಶ ಇರುತ್ತದೆ. 


ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ : 
ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಅಂಶಗಳು ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ತೆಂಗಿನಕಾಯಿ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ (immunity) ಅಧಿಕವಾಗುತ್ತದೆ.  ತೆಂಗಿನ ಕಾಯಿಯ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಮೂಳೆಗಳು ಬಲಿಷ್ಟವಾಗುತ್ತದೆ. 


ಇದನ್ನೂ ಓದಿ : Health Tips : ಏಳು ಮಹಾರೋಗಕ್ಕೆ ರಾಮಬಾಣ ಈ ನುಗ್ಗೆ ಸೊಪ್ಪು..!


ಮಲಬದ್ದತೆ ಮತ್ತು ವಾಯುವಿನ ಸಮಸ್ಯೆಯನ್ನು ಕೂಡಾ ನಿವಾರಿಸುತ್ತದೆ : 
ಸಾಮಾನ್ಯವಾಗಿ ಬಹುತೇಕ ಮಂದಿ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ. ಮಲಬದ್ಧತೆ (Constipation) ನಿವಾರಣೆಗೆ ತೆಂಗಿನ ಕಾಯಿ ಹೇಳಿ ಮಾಡಿಸಿರುವಂಥದ್ದು. ತೆಂಗಿನ ಕಾಯಿಯಲ್ಲಿ ಅಧಿಕ ಪ್ರಮಾಣದ ನಾರಿನ ಅಂಶ (Fiber) ಇರುತ್ತದೆ. ಹಾಗಾಗಿ ಇದು ಮಲಬದ್ದತೆ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಪ್ರತಿದಿನ ತೆಂಗಿನ ಕಾಯಿ ಸೇವಿಸುವುದರಿಂದ ಹೊಟ್ಟೆ ಶುಚಿಯಾಗುತ್ತದೆ. ಅಲ್ಲದೆ ವಾಯುವಿನ ಸಮಸ್ಯೆಗೆ ಕೂಡಾ ತೆಂಗಿನ ಕಾಯಿ ರಾಮಬಾಣ. 


ದೇಹ ತೂಕ ಇಳಿಸಲು ಸಹಕಾರಿ : 
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಾಯಿಯಿಂದ ಕೇಳಿಬರುವ ಮಾತು ಅಂದರೆ ಟೈಂ ಇಲ್ಲ ಎನ್ನುವುದು. ನಿರಂತರ ಕೆಲಸದ ನಡುವೆ ಆರೋಗ್ಯದತ್ತ ಗಮನ ಹರಿಸಲು ಸಮಯವಿರುವುದಿಲ್ಲ. ಹೆಚ್ಚಾಗಿ ಕುಳಿತಲ್ಲೇ ಕೆಲಸ ಮಾಡುವವರಿಗಂತೂ ವ್ಯಾಯಾಮಕ್ಕೆ (exercise) ಸಮಯ ಸಿಗದಿದ್ದರೆ ದೇಹ ತೂಕ ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ. ಇಂಥದ್ದರಲ್ಲಿ  ದೇಹ ತೂಕ ಕಡಿಮೆ ಮಾಡಲು (weight loss) ತೆಂಗಿನಕಾಯಿ ಬಹಳ ಸಹಕಾರಿಯಾಗಿದೆ. ತೆಂಗಿನಕಾಯಿ ಸೇವನೆಯು ದೇಹದ ಚಯಾಪಚಯವನ್ನು ನಿಯಂತ್ರಣದಲ್ಲಿಡುತ್ತದೆ.  ಇದು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹಾಗಾಗಿ ದೇಹದ ತೂಕ ಹೆಚ್ಚುವುದಿಲ್ಲ.  


ಇದನ್ನೂ ಓದಿ : ಈ ಆಹಾರ ಸೇವಿಸುವುದರಿಂದ ಕ್ಷಣದಲ್ಲಿ ನಿವಾರಣೆಯಾಗುತ್ತೆ ನಿಮ್ಮ Acidity ಸಮಸ್ಯೆ


ತೆಂಗಿನಕಾಯಿಯನ್ನು ಪೂಜೆಗೆ ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ.  ಹಾಗೆಯೇ ತೆಂಗಿನ ಕಾಯಿಯ ಸೇವನೆ ಕೂಡಾ ನಮ್ಮ ದೇಹಕ್ಕೆ ಅತ್ಯಂತ ಸಹಕಾರಿಯಾಗಿದೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


Moringa leaves