ನವದೆಹಲಿ : ಹಿಮೋಗ್ಲೋಬಿನ್ (himoglobin) ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿದೆ ಎಂದು ಡಾಕ್ಟರ್ ಹೇಳುವುದನ್ನು ನೀವು ಕೇಳಿರಬಹುದು. ಹಾಗಾದರೆ ಹಿಮೋಗ್ಲೋಬಿನ್ ಅಂದರೇನು..? ಹಿಮೋಗ್ಲೋಬಿನ್ ಕೊರತೆ (Low himoglobin) ಉಂಟಾದರೆ ಏನಾಗುತ್ತದೆ.  ಹಿಮೋಗ್ಲೋಬಿನ್ ಕೊರತೆ ಉಂಟಾಗದಂತೆ ಏನು ಮಾಡಬೇಕು.?  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡು ಹುಡುಕುವ ಪ್ರಯತ್ನ ಮಾಡೋಣ. ಶರೀರದಲ್ಲಿ ಆಮ್ಲಜನಕ ಪಸರಿಸುವ ಕೆಲಸ ಮಾಡುತ್ತದೆ ಹಿಮೋಗ್ಲೋಬಿನ್.  ದೇಹದಲ್ಲಿ ಹಿಮೊಗ್ಲೋಬಿನ್ ಕಡಿಮೆಯಾದರೆ, ಹಲವಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ.  ದೇಹದಲ್ಲಿ ಕಬ್ಬಿಣದಾಂಶ ಕಡಿಮೆ ಆದಾಗ ಹಿಮೋಗ್ಲೋಬಿನ್ ಕೊರತೆ ಕಾಣಿಸಿಕೊಳ್ಳುತ್ತದೆ. ಹಿಮೋಗ್ಲೋಬಿನ್ ಕೊರತೆ ಸಮಸ್ಯೆ ಸಾಮಾನ್ಯವಾಗಿ ಮಹಿಳೆಯರಲ್ಲಿ ಅಧಿಕವಾಗಿ ಕಾಣಿಸಿಕೊಳ್ಳುತ್ತದೆ.  ಕೆಲವು ಹಿಮೋಗ್ಲೋಬಿನ್ ಕಡಿಮೆ ಆಗದಂತೆ ನೋಡಿಕೊಳ್ಳಲು ಔಷಧಗಳನ್ನು ತೆಗೆದುಕೊಳ್ಳುತ್ತಾರೆ.  ಇದರಿಂದ ಹಲವು ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಊಟ-ತಿಂಡಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ನೀವು ಹೀಮೋಗ್ಲೋಬಿನ್ ಕೊರತೆ ಸಮಸ್ಯೆಯಿಂದ ಪಾರಾಗಬಹುದು.


COMMERCIAL BREAK
SCROLL TO CONTINUE READING

ಊಟ-ತಿಂಡಿಯಲ್ಲಿ ಏನೇನಿರಬೇಕು..?
1.  ಹಸಿರು ಸೊಪ್ಪು ತರಕಾರಿ
ನೀವು ಶಾಖಾಹಾರಿಗಳಾಗಿದ್ದರೆ, ನಿಮ್ಮ ಊಟ-ತಿಂಡಿಯಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು (green Veg) ಸಾಕಷ್ಟು ಸೇರಿಸಿ. ಹಸಿರು ತರಕಾರಿಗಳಲ್ಲಿ ಸಾಕಷ್ಟು ಕಬ್ಬಿಣದಾಂಶ ಇರುತ್ತದೆ. ಇವು ಆರೋಗ್ಯಕ್ಕೂ ಲಾಭದಾಯಕ. ಊಟದಲ್ಲಿ ತಾಜಾ ಸೊಪ್ಪು, ತರಕಾರಿ ತಿಂದರೆ ದೇಹದಲ್ಲಿ ಹಿಮೋಗ್ಲೋಬಿನ್ (himoglobin) ಕೊರತೆ ಉಂಟಾಗುವುದಿಲ್ಲ. 


ಇದನ್ನೂ ಓದಿ : Cracked Heels Care: ಬಿರುಕು ಬಿಟ್ಟ ಹಿಮ್ಮಡಿಯನ್ನು ಸರಿಪಡಿಸಲು ಸುಲಭ ಮನೆ ಮದ್ದು


2. ದ್ವಿದಳ ಧಾನ್ಯ
ದ್ವಿದಳ ಧಾನ್ಯಗಳು ಆರೋಗ್ಯಕ್ಕೆ ಸಾಕಷ್ಟು ಲಾಭದಾಯಕವಾಗಿರುತ್ತದೆ. ಅವುಗಳಲ್ಲಿ ಕಬ್ಬಿಣದಾಂಶ, ಪ್ರೊಟೀನ್, ಫೈಬರ್ ಮತ್ತು ವಿಟಮಿನ್ ಭರ್ಜರಿಯಾಗಿ ಸಿಗುತ್ತದೆ.  ಬೀನ್ಸ್, ಬಟಾಣಿ (green peace) ಮುಂತಾದ ದ್ವಿದಳ ದಾಣ್ಯಗಳಲ್ಲಿ ಸಾಕಷ್ಟು ಕಬ್ಬಿಣದಂಶ ಸಿಗುತ್ತದೆ. ಇದು ಯಾವತ್ತಿಗೂ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದಿಲ್ಲ. 


3. ಡ್ರೈ ಫ್ರುಟ್ಸ್ :
ದಿನವೂ ಒಂದು ಮುಷ್ಟಿ ಖರ್ಜೂರ, ಅಕ್ರೋಟು, ಬಾದಾಮಿ ಮತ್ತು ಒಣದ್ರಾಕ್ಷಿ ತಿನ್ನಿ. ಹಿಮೋಗ್ಲೋಬಿನ್ ಕೊರತೆ ಉಂಟಾಗುವುದಿಲ್ಲ. ಡ್ರೈ ಫ್ರುಟ್ಸ್ ನಲ್ಲಿ (dry fruits) ಕಬ್ಬಿಣದಾಂಶ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ಕೆಂಪು ರಕ್ತ ಕಣಗಳು (Red blood cell) ಹೆಚ್ಚಾಗಲು ಕಾರಣವಾಗುತ್ತವೆ. 


4. ಬೀಜಗಳು:
ಬೀಜಗಳಲ್ಲಿ ಸಾಕಷ್ಟು ಕಬ್ಬಿಣದಾಂಶಗಳಿರುತ್ತವೆ. ಕುಂಬಳಕಾಯಿ ಬೀಜ, ಅಲಸಂಡೆ ಬೀಜ, ಬೀನ್ಸ್ ಮೊದಲಾದ ಬೀಜಗಳಲ್ಲಿ ಸಾಕಷ್ಟು ಕಬ್ಬಿಣದಾಂಶ ಇರುತ್ತದೆ. ಊಟದಲ್ಲಿ ಈ ಬೀಜಗಳಿದ್ದರೆ ನಿಮಗೆ ಎಂದಿಗೂ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದಿಲ್ಲ.


ಇದನ್ನೂ ಓದಿ : ಕಣ್ಣಿನ ಸುತ್ತ ಮೂಡುವ ಬ್ಲ್ಯಾಕ್ ಸರ್ಕಲ್ ತಡೆಯುವ ಉಪಾಯ ಯಾವುದು..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ