COVID Vaccine ತೆಗೆದುಕೊಳ್ಳುವ ಬಗ್ಗೆ ಜನ ಏನೇಳುತ್ತಾರೆ ಗೊತ್ತಾ?
ಲೋಕಲ್ ಸರ್ಕಲ್ಸ್ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡುವ ಬಗ್ಗೆ ಭಾರತದಲ್ಲಿ ಕೋವಿಡ್ -19 ಪ್ರಯೋಗಗಳನ್ನು ನಡೆಸಲು ಕೇಂದ್ರ ಸರ್ಕಾರವು ಫಿಜರ್ ಮತ್ತು ಮಾಡ್ರೆನಾ ಕಂಪನಿಗಳಿಗೂ ಅವಕಾಶ ನೀಡುವ ಬಗ್ಗೆಯೂ ಸಮೀಕ್ಷೆಯಲ್ಲಿ ನಡೆಸಿದೆ. ಈ ಸಮೀಕ್ಷೆಗಳಲ್ಲೂ ಆಶ್ಚರ್ಯಕರವಾದ ಅಭಿಪ್ರಾಯಗಳೇ ಲಭ್ಯವಾಗಿವೆ.
ನವದೆಹಲಿ: ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (Drug Controller General of India) ಭಾರತ್ ಬಯೋಟೆಕ್‌ನ ಕೊವಾಕ್ಸಿನ್ (Covaxin)
ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ (Covishield) ಲಸಿಕೆಗಳನ್ನು ಬಳಸಲು ಅನುಮೋದನೆ ನೀಡಿದೆ. ಆದರೆ ಈಗ ಎಷ್ಟು ಭಾರತೀಯರು ಈ ಲಸಿಕೆಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ? ಎಂಬದು.
ಆನ್‌ಲೈನ್ ಪ್ಲಾಟ್‌ಫಾರ್ಮ್ ಲೋಕಲ್ ಸರ್ಕಲ್ಸ್ (Local Circles) ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡಾ 69 ರಷ್ಟು ಜನ ಕೊರೋನಾ ವೈರಸ್ (Coronavirus) ವಿರುದ್ಧ ಲಸಿಕೆ ತೆಗೆದುಕೊಳ್ಳಲು ಯಾವುದೇ ಅವಸರದಲ್ಲಿಲ್ಲ ಎಂದು ಹೇಳಿದ್ದಾರೆ. ಕೇವಲ 26 ಪ್ರತಿಶತದಷ್ಟು ಜನ ಲಸಿಕೆ ಲಭ್ಯವಾದ ತಕ್ಷಣ ಅದನ್ನು ಪಡೆಯುತ್ತೇವೆ ಎಂದು ಹೇಳಿದ್ದಾರೆ. ಈ ಬಗ್ಗೆ 8,723 ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ.
ಅಕ್ಟೋಬರ್ 2020 ರಿಂದ ಲೋಕಲ್ ಸರ್ಕಲ್ಸ್ ಕೋವಿಡ್ -19 ಲಸಿಕೆ ತೆಗೆದುಕೊಳ್ಳುವ ಬಗ್ಗೆ ಜನರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ಆದರೆ ಆ ಸಮೀಕ್ಷೆಯಲ್ಲಿ ಲಸಿಕೆ ತೆಗೆದುಕೊಳ್ಳು ಹಿಂಜರಿಯುತ್ತಿರುವವರ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಅಕ್ಟೋಬರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಕೋವಿಡ್ -19 ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುವ ಭಾರತೀಯರ ಸಂಖ್ಯೆ ಶೇಕಡಾ 61 ರಷ್ಟಿತ್ತು. ಲಸಿಕೆ ತಯಾರಕರಾದ ಫಿಜರ್ (Pfizer) ಮತ್ತು ಮೊಡ್ರೆನಾ (Modrena) ಪರಿಣಾಮಕಾರಿತ್ವದ ಫಲಿತಾಂಶಗಳಲ್ಲಿ ಯಶಸ್ಸು ಸಾಧಿಸಿದ ಬಳಿಕ ನವೆಂಬರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿರುವ ಸಂಖ್ಯೆ ಶೇಕಡಾ 59ಕ್ಕೆ ಇಳಿದಿದೆ.
ಇದನ್ನೂ ಓದಿ : COVID vaccineನಲ್ಲಿ ಹಂದಿ ಮಾಂಸ : ವದಂತಿಗೆ ತೆರೆಯೆಳೆಯಲು ಮುಂದಾದ ಮುಸ್ಲಿಂ ಸಮುದಾಯ
ಈಗ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute of India) ಮೂಲಕ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ (Oxford-Astrazeneca) ಅಭಿವೃದ್ಧಿಪಡಿಸಿದ ಲಸಿಕೆ ಭಾರತಕ್ಕೆ ಭರವಸೆಯಂತೆ ಬಂದಿದೆ. ಆದರೂ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ ಕೊರೊನಾ ವೈರಸ್ ವಿರುದ್ಧ ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿರುವವರ ಸಂಖ್ಯೆ ನಾಟಕೀಯವಾಗಿ ಶೇಕಡಾ 69 ರಷ್ಟಕ್ಕೆ ಏರಿಕೆಯಾಗಿದೆ.
ಲೋಕಲ್ ಸರ್ಕಲ್ಸ್ ಸದಸ್ಯ ಡಾ. ಅಬ್ದುಲ್ ಗಫೂರ್ ಅವರು ಡಿಸೆಂಬರ್‌ನಲ್ಲಿ ನಡೆಸಿದ ಮತ್ತೊಂದು ಸ್ವತಂತ್ರ ಸಮೀಕ್ಷೆಯು ಕೋವಿಡ್ -19 ಲಸಿಕೆ (Covid 19 Vaccine) ತಕ್ಷಣವೇ ಪಡೆಯುವ ಬಗ್ಗೆ ಹೆಚ್ಚಿನ ಆರೋಗ್ಯ ವೃತ್ತಿಪರರು (ಶೇಕಡಾ 55) ಸಹ ಹಿಂಜರಿಯುತ್ತಿದ್ದಾರೆ. ಸಮೀಕ್ಷೆಯಲ್ಲಿನ ಈ ಬಹುಪಾಲು ವೃತ್ತಿಪರರು ಅವರು ಅಡ್ಡಪರಿಣಾಮಗಳ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಅಥವಾ ಅದರ ಪರಿಣಾಮಕಾರಿತ್ವದ ಬಗ್ಗೆ ಖಚಿತವಾಗಿಲ್ಲ ಎಂದು ಹೇಳಿದ್ದಾರೆ. ಈ ವೃತ್ತಿಪರರಲ್ಲಿ ಸುಮಾರು 60 ಪ್ರತಿಶತದಷ್ಟು ಜನರು ಕೋವಿಡ್ ಸೌಲಭ್ಯದೊಂದಿಗೆ ತೊಡಗಿಸಿಕೊಂಡಿದ್ದಾರೆ.
ಲಸಿಕೆ ತೆಗೆದುಕೊಳ್ಳಲು ಏಕೆ ಹಿಂಜರಿಯುತ್ತಾರೆ?
ಲಸಿಕೆ ಅಡ್ಡಪರಿಣಾಮಗಳು, ಪ್ರಯೋಗಗಳಿಂದ ಪರಿಣಾಮಕಾರಿತ್ವ, ಭಾರತದಲ್ಲಿ ಕ್ಷೀಣಿಸುತ್ತಿರುವ ಕ್ಯಾಸೆಲೋಡ್‌ಗಳ ಜೊತೆಗೆ ಸಾಕಷ್ಟು ಮಾಹಿತಿ ಲಭ್ಯವಿಲ್ಲ ಎಂಬುದು ಜನರು ಕೋವಿಡ್ -19 ಲಸಿಕೆ ತೆಗೆದುಕೊಳ್ಳಲು ಹಿಂಜರಿಯುವುದಕ್ಕೆ ಪ್ರಮುಖ ಕಾರಣಗಳಾಗಿವೆ.
ಅನುಮೋದನೆ ಪ್ರಕ್ರಿಯೆಯ ಬಗ್ಗೆ ಪಾರದರ್ಶಕತೆಯ ಕೊರತೆಯ ಬಗ್ಗೆ ಕೆಲವೇ ತಜ್ಞರು ಎಚ್ಚರಿಸಿದ್ದಾರೆ, 2020ರ ಜನವರಿ 3 ರಂದು ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ (Covaxin) ಅನುಮೋದನೆಯನ್ನು ಘೋಷಿಸುವಾಗ ಡಿಸಿಜಿಐ ಮಾಧ್ಯಮದಿಂದ ಯಾವುದೇ ಪ್ರಶ್ನೆಗಳನ್ನು ತೆಗೆದುಕೊಳ್ಳದಿರುವುದು ಕಳವಳಕಾರಿಯಾಗಿದೆ.
ಇದನ್ನೂ ಓದಿ : Corona Vaccine ನಿಮ್ಮ ಬಳಿ ಹೇಗೆ ತಲುಪಲಿದೆ ಗೊತ್ತೇ?
ಈ ಮೊದಲು ಸೀರಮ್ ಇನ್ಸ್ಟಿಟ್ಯೂಟ್ ಕೋವಿಶೀಲ್ಡ್ ಪ್ರಯೋಗಗಳನ್ನು ನಡೆಸುತ್ತಿದ್ದಾಗ ವಿಚಾರಣೆಯನ್ನು ಕೈಗೊಂಡ ಪಾಲ್ಗೊಳ್ಳುವವರು ಲಸಿಕೆ ತನಗೆ ನರವೈಜ್ಞಾನಿಕ ಮತ್ತು ಮಾನಸಿಕ ಎರಡೂ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿದೆ ಎಂದು ಆರೋಪಿಸಿದ್ದರು. ಸೀರಮ್ ಇನ್ಸ್ಟಿಟ್ಯೂಟ್ ಈ ಅಭಿಪ್ರಾಯಗಳನ್ನು "ಓರೆಯಾದ ಹಣದ ಉದ್ದೇಶ" ಎಂದು ಹೇಳಿ ತಳ್ಳಿಹಾಕಿತ್ತು.
69% ಭಾರತೀಯರಿಗೆ ಲಸಿಕೆ ಬೇಕಾಗಿಲ್ಲ :
ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯು ಕೋವಿಡ್ -19 (Covid 19) ವಿರುದ್ಧ ಲಸಿಕೆ ತೆಗೆದುಕೊಳ್ಳಲು ಭಾರತೀಯರು ಹಿಂಜರಿಯುತ್ತಿರುವುದು 2020 ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಬದಲಾಗದೆ ಉಳಿದಿದೆ ಎಂದು ತೀರ್ಮಾನಿಸಿದೆ. ಶೇಕಡಾ 69ರಷ್ಟು ಜನರು ಅದನ್ನು ತೆಗೆದುಕೊಳ್ಳಲು ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಔಷಧ ನಿಯಂತ್ರಕ ಸಂಸ್ಥೆಯು ಬಯೋಟೆಕ್‌ನ ಕೊವಾಕ್ಸಿನ್ ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಬಗ್ಗೆ ಲೋಕಲ್ ಸರ್ಕಲ್ಸ್ “ಕೋವಿಡ್ -19 ಲಸಿಕೆ ಶಾಲಾ ಮಕ್ಕಳಿಗೆ ಲಭ್ಯವಾದರೆ ನಿಮ್ಮ ಮಗುವಿಗೆ ಅಥವಾ ಮೊಮ್ಮಕ್ಕಳಿಗೆ ನೀಡಲು ಯೋಚಿಸುತ್ತೀರಾ?" ಎಂದು ಪೋಷಕರನ್ನು ಕೇಳಿದಾಗ ಶೇಕಡಾ 26 ರಷ್ಟು ಪೋಷಕರು ಮಾತ್ರ ಅನುಮೋದಿಸಿದ್ದಾರೆ. ಶೇಕಡಾ 56ರಷ್ಟು ಪೋಷಕರು "3 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾಯುತ್ತೇವೆ' ಎಂದಿದ್ದಾರೆ. ಶೇಕಡಾ 12ರಷ್ಟು ಜನ "ಇಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ : COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಲಸಿಕೆ ರೇಸ್ :
ಭಾರತದಲ್ಲಿ ಕೋವಿಡ್ -19 ಪ್ರಯೋಗಗಳನ್ನು ನಡೆಸಲು ಕೇಂದ್ರ ಸರ್ಕಾರವು ಫಿಜರ್ ಮತ್ತು ಮಾಡ್ರೆನಾ ಕಂಪನಿಗಳಿಗೂ ಅವಕಾಶ ನೀಡಬೇಕಂದು ಶೇಕಡಾ 61 ರಷ್ಟು ಜನ ಬಯಸುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಹೆಚ್ಚು ಪರಿಣಾಮಕಾರಿಯಾದ ಕೋವಿಡ್ -19 ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಓಟದಲ್ಲಿ ಫಿಜರ್, ಬಯೋಎನ್‌ಟೆಕ್ ಮತ್ತು ಮಾಡ್ರೆನಾ ಕಂಪನಿಗಳ ಲಸಿಕೆಗಳು 95 ಪ್ರತಿಶತದಷ್ಟು ಪರಿಣಾಮಕಾರಿತ್ವ ಹೊಂದಿವೆ ಎಂಬ ವರದಿಗಳ ಆಧಾರದ ಮೇಲೆ ಆ ಸಂಸ್ಥೆಗಳ ಬಗ್ಗೆ ಜನ ನಿರೀಕ್ಷೆ ಇಟ್ಟುಕೊಂಡಿರುವುದು ಕೂಡ ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.