ಕಬ್ಬಿಣದ ಕಡಾಯಿಯಲ್ಲಿ ಈ ಖಾದ್ಯಗಳನ್ನು ಮಾಡಲೇಬಾರದು..!
ಹುಳಿ ಮತ್ತು ಆಸಿಡಿಕ್ ಅಂಶ ಹೆಚ್ಚಿರುವ ವಸ್ತುಗಳ ಖಾದ್ಯವನ್ನು ಕಬ್ಬಿಣದ ಕಡಾಯಿಯಲ್ಲಿ ಮಾಡಬೇಡಿ. ಯಾಕೆಂದೆರೆ, ಇವು ಕಬ್ಬಿಣದ ಕಡಾಯಿಯಲ್ಲಿ ರಿಯಾಕ್ಟ್ ಮಾಡುತ್ತವೆ. ಉದಾಹರಣೆಗೆ ಲಿಂಬೆ , ಟೊಮ್ಯಾಟೊ ಅಥವಾ ವಿನೆಗರ್ ಹಾಕಿ ಕಬ್ಬಿಣದ ಕಡಾಯಿಯಲ್ಲಿ ಅಡುಗೆ ಮಾಡಲು ಹೋಗಬೇಡಿ.
ನವದೆಹಲಿ : ಲೋಹದ ಕಡಾಯಿಯಲ್ಲಿ ಖಾದ್ಯ ಮಾಡುವುದು ಆರೋಗ್ಯಕ್ಕೆ ಹಿತಕಾರಿ. ಯಾಕೆಂದರೆ, ಲೋಹದ ಕಡಾಯಿಯಲ್ಲಿ (Iron Kadhai) ಖಾದ್ಯ ಮಾಡಿದಾಗ, ಆ ಕಡಾಯಿಯಲ್ಲಿರುವ ಕಬ್ಬಿಣದ ಅಂಶ ನಮ್ಮ ದೇಹ ಸೇರುತ್ತದೆ. ನಮ್ಮ ದೇಹಕ್ಕೆ ಬೇಕಾಗುವಷ್ಟು ಕಬ್ಬಿಣದ ಅಂಶ ಅದರಲ್ಲಿ ಸಿಗುತ್ತದೆ. ಅನಿಮಿಯ ಇರುವವರು ಕಬ್ಬಿಣದ ಕಡಾಯಿಯಲ್ಲಿ ಖಾದ್ಯ ಬೇಯಿಸಿದರೆ ತುಂಬಾ ಒಳ್ಳೆಯದು. ಆದರೆ, ಕಬ್ಬಿಣದ ಕಡಾಯಿಯಲ್ಲಿ ಅಡುಗೆ ಮಾಡುವಾಗ ಕೆಲವೊಂದು ಎಚ್ಚರಿಕೆ ವಹಿಸಬೇಕು. ಕಬ್ಬಿಣದ ಕಡಾಯಿಯಲ್ಲಿ ಕೆಲವೊಂದು ಖಾದ್ಯಗಳನ್ನು ಮಾಡಲೇಬಾರದು.
1. ಹುಳಿ ಹೆಚ್ಚಿರುವ ಖಾದ್ಯಗಳನ್ನು ಕಬ್ಬಿಣದ ಕಡಾಯಿಯಲ್ಲಿ ಮಾಡಬಾರದು:
ಹುಳಿ ಮತ್ತು ಆಸಿಡಿಕ್ (Accid) ಅಂಶ ಹೆಚ್ಚಿರುವ ವಸ್ತುಗಳ ಖಾದ್ಯವನ್ನು ಕಬ್ಬಿಣದ ಕಡಾಯಿಯಲ್ಲಿ ಮಾಡಬೇಡಿ. ಯಾಕೆಂದೆರೆ, ಇವು ಕಬ್ಬಿಣದ ಕಡಾಯಿಯಲ್ಲಿ ರಿಯಾಕ್ಟ್ ಮಾಡುತ್ತವೆ. ಉದಾಹರಣೆಗೆ ಲಿಂಬೆ (Lemon) , ಟೊಮ್ಯಾಟೊ ಅಥವಾ ವಿನೆಗರ್ ಹಾಕಿ ಕಬ್ಬಿಣದ ಕಡಾಯಿಯಲ್ಲಿ ಅಡುಗೆ ಮಾಡಲು ಹೋಗಬೇಡಿ. ನಿಮ್ಮ ಅಡುಗೆ ಮೆಟಲ್ ವಾಸನೆ ಬರುತ್ತದೆ. ಹಾಗಾಗಿ, ಸಾಂಬಾರ್, ರಸಂ, ಅಥವಾ ಟೊಮ್ಯಾಟೋ (Tomato) ಹಾಕಿ ಮಾಡುವ ಯಾವುದೇ ಖಾದ್ಯವನ್ನು ಕಬ್ಬಿಣದ ಕಡಾಯಿಯಲ್ಲಿ ಮಾಡಲು ಹೋಗಬೇಡಿ.
ಇದನ್ನೂ ಓದಿ : Viral video : ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ವಿಧಾನ ತಿಳಿಯಿರಿ
2. ಹಸಿರು ತರಕಾರಿ:
ಹಸಿರು ತರಕಾರಿಯ ಪಲ್ಯವನ್ನು (Green Veg) ಕಬ್ಬಿಣದ ಕಡಾಯಿಯಲ್ಲಿ ಮಾಡಿದರೆ ಅದರ ಬಣ್ಣ ಕಪ್ಪಾಗಿಬಿಡುತ್ತದೆ. ಇದಕ್ಕೆ ಕಾರಣ, ಹಸಿರು ತರಕಾರಿಗಳಲ್ಲಿ ಕಬ್ಬಿಣದಾಂಶ ಸಾಕಷ್ಟಿರುತ್ತದೆ. ಇವನ್ನು ಕಬ್ಬಿಣದ ಕಡಾಯಿಯಲ್ಲಿ ಬೇಯಿಸಿದಾಗ, ಅವು ಕಪ್ಪಾಗಿ ಬಿಡುತ್ತವೆ. ಒಂದೇ ಕಬ್ಬಿಣದ ಕಡಾಯಿಯಲ್ಲಿ ಹಸಿರು ತರಕಾರಿ ಬೇಯಿಸಬೇಡಿ. ಅಥವಾ ಅಡುಗೆ ಮುಗಿದಾಕ್ಷಣ ಖಾದ್ಯವನ್ನು ಇನ್ನೊಂದು ಪಾತ್ರೆಗೆ ವರ್ಗಾಯಿಸಿಬಿಡಿ.
3. ಮೀನು, ಮೊಟ್ಟೆ, ಅಮ್ಲೇಟ್:
ಕಬ್ಬಿಣದ ಕಡಾಯಿಯಲ್ಲಿ ನೀವು ಎಷ್ಟು ಎಣ್ಣೆ(Oil) , ಬೆಣ್ಣೆ (Butter) ಹಾಕಿದರೂ ಮೀನು, ಮೊಟ್ಟೆ, ಆಮ್ಲೇಟ್ (Omlet) ಮುಂತಾದ ಖಾದ್ಯಗಳು ಕಡಾಯಿಗೆ ಅಂಟಿಕೊಳ್ಳುತ್ತವೆ. ಎಷ್ಟು ಪ್ರಯತ್ನ ಮಾಡಿದರೂ ಅವು ಸರಿಯಾದ ಆಕಾರದಲ್ಲಿ ನಿಮಗೆ ಸಿಗುವುದಿಲ್ಲ. ಅದರ ಸ್ವಾದ ಕೂಡಾ ಕೆಡುತ್ತದೆ.
ಇದನ್ನೂ ಓದಿ : Benefits of Clove : ಪುರುಷರು ಈ ಸಮಯದಲ್ಲಿ 4 ಲವಂಗ ಸೇವಿಸಿ! ನಂತ್ರ ಅದರ ಪ್ರಯೋಜನ ನೋಡಿ
4. ಸಿಹಿ ಖಾದ್ಯ.!
ಚೆನ್ನಾಗಿ ತೊಳೆದ ಮೇಲೂ ಕಬ್ಬಿಣದ ಕಡಾಯಿಯಲ್ಲಿ ಮಾಡಿದ ಸಿಹಿ ವಸ್ತುವಿನ ವಾಸನೆ ಹೋಗುವುದಿಲ್ಲ. ಕಬ್ಬಿಣದ ಕಡಾಯಿಯಲ್ಲಿ ಸಿಹಿ ವಸ್ತು ಮಾಡಿದರೆ ಒಂದು ವಿಚಿತ್ರ ವಾಸನೆ ಬರುತ್ತದೆ. ರುಚಿ ಕೂಡಾ ಕೆಟ್ಟದಾಗಿರುತ್ತದೆ.
ಕಬ್ಬಿಣದ ಕಡಾಯಿಯಲ್ಲಿ ಅಡುಗೆ ಮಾಡುವಾಗ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ.
1. ಕಬ್ಬಿಣದ ಪಾತ್ರೆಯಲ್ಲಿ ದಿನವೂ ಅಡುಗೆ ಮಾಡಬೇಡಿ. ವಾರಕ್ಕೆ ಒಂದೆರಡು ದಿನ ಒಕೆ
2. ಕಬ್ಬಿಣದ ಕಡಾಯಿ ತೊಳೆಯುವಾಗ ಸ್ವಲ್ಪ ಡಿಟರ್ಜಂಟ್ ಬಳಸಿ
3. ಅದನ್ನು ತೊಳೆಯಲು ಸ್ಕೃಬರ್ (Scruber) ಬಳಸಬೇಡಿ.
4. ಕಬ್ಬಿಣದ ಕಡಾಯಿ ತೊಳೆದ ತಕ್ಷಣ ಬಟ್ಟೆಯಿಂದ ಅದನ್ನು ಒರೆಸಿ
5. ತೊಳೆದು, ಒರೆಸಿದ ತಕ್ಷಣ ಎಣ್ಣೆ (Oil) ಹಾಕಿ ಒರೆಸಿ. ಇದರಿಂದ ತುಕ್ಕು ಹಿಡಿಯುವುದಿಲ್ಲ
6. ಕಬ್ಬಿಣದ ಪಾತ್ರೆಗಳನ್ನು ಸ್ವಚ್ಛ ಮತ್ತು ಬೆಚ್ಚಗೆ ಇರುವ ಜಾಗದಲ್ಲಿಡಿ.
ಇದನ್ನೂ ಓದಿ : ಸೋಂಪು ನೀರು ಕುಡಿಯುವುದರಿಂದ ಆಗುವ ಅದ್ಬುತ ಆರೋಗ್ಯ ಲಾಭ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.