Weight loss : ಹೆರಿಗೆ ನಂತರ ದೇಹ ತೂಕ ಇಳಿಸಲು ಹೀಗೆ ಮಾಡಿ
ಹೆರಿಗೆ ನಂತರ ಹೆಚ್ಚಾಗುವ ದೇಹ ತೂಕ ಸಾಮಾನ್ಯವಾಗಿ ಬಹುತೇಕ ಮಹಿಳೆಯರ ಸಮಸ್ಯೆಯಾಗಿರುತ್ತದೆ. ಹೆರಿಗೆ ನಂತರ ಕಂಡುಬರುವ ದೇಹ ತೂಕವನ್ನು ನೈಸರ್ಗಿಕವಾಗಿ ಇಳಿಸಲು ಕೆಲ ಉಪಾಯಗಳಿವೆ.
ನವದೆಹಲಿ : ಹೆರಿಗೆ ನಂತರ ಹೆಚ್ಚಾಗುವ ದೇಹ ತೂಕ ಸಾಮಾನ್ಯವಾಗಿ ಬಹುತೇಕ ಮಹಿಳೆಯರ ಸಮಸ್ಯೆಯಾಗಿರುತ್ತದೆ. ಹೆರಿಗೆ (Delivery) ನಂತರ ಕಂಡುಬರುವ ದೇಹ ತೂಕವನ್ನು ನೈಸರ್ಗಿಕವಾಗಿ ಇಳಿಸಲು ಕೆಲ ಉಪಾಯಗಳಿವೆ. ಹೆರಿಗೆ ನಂತರ ದೇಹ ತೂಕ ಹೆಚ್ಚಾಗಲೇ ಬೇಕು ಎಂದೆನಿಲ್ಲ. ನಿಯಮಿತ ವ್ಯಾಯಾಮ, ಕ್ರಮಬದ್ಧ ದಿನಚರಿಯನ್ನು ಅನುಸರಿಸಿಕೊಂಡು ಬಂದರೆ ದೇಹ ತೂಕ ಇಳಿಸಿವುದು (Weight loss) ಸಾಧ್ಯವಲ್ಲದ ಮಾತಲ್ಲ. ದೇಹ ತೂಕ ಇಳಿಸುವ ಕೆಲ ಸುಲಭ ಮಾರ್ಗಗಳು ಇಲ್ಲಿವೆ.
ಸರಳ ಯೋಗಾಸನಗಳನ್ನು(Yoga) ಮಾಡುವುದರಿಂದ ದೇಹ ತೂಕವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು:
ಶವಾಸನ ದೇಹ ತೂಕ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಶವಾಸಾನ ಮಾಡುವ ವೇಳೆ ಉಸಿರಿನ ಮೇಲೆ ಗಮನ ಇಟ್ಟುಕೊಳ್ಳಬೇಕು. ಶವಾಸನ ನಮ್ಮ ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ ಉಷ್ಟ್ರಾಸನ ಕೂಡಾ ಹೊಟ್ಟೆ ಭಾಗದ ಕೊಬ್ಬು ಕರಗಿಸಲು ಸಹಕಾರಿಯಾಗುತ್ತದೆ. ಈ ಆಸನದಿಂದ ದೇಹದ ರಕ್ತ ಸಂಚಲನ ಉತ್ತಮಗೊಳ್ಳುತ್ತದೆ. ಈ ಆಸನವನ್ನು ದಿನಕ್ಕೆ 8ರಿಂದ 10 ಬಾರಿ ಮಾಡುವುದರಿಂದ ಅತ್ಯಂತ ಪ್ರಯೋಜನಕಾರಿಯಾಗಿರುತ್ತದೆ. ನೌಕಾಸನ ಮಾಡುವುದರಿಂದಲೂ ಹೊಟ್ಟೆ ಭಾಗದ ತೂಕವನ್ನು ಇಳಿಸಬಹುದು.
ALSO READ: Weight Loss: ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ಅಭ್ಯಾಸಗಳನ್ನು ಇಂದೇ ಬಿಡಿ
ಡಯೆಟ್ ಪಾಲಿಸುವುದು ಬಹಳ ಮುಖ್ಯ:
ಇದರೊಂದಿಗೆ ನಿಯಮಿತ ಡಯೆಟ್ (Diet) ಅನುಸರಿಸಿಕೊಂಡು ಬರುವುದು ಬಹಳ ಮುಖ್ಯವಾಗಿರುತ್ತದೆ. ಗರ್ಭಿಣಿಯಾಗಿರುವಾಗ ಯಾವ ರೀತಿ ತಮ್ಮ ಊಟ ತಿಂಡಿ ಬಗ್ಗೆ ಕಾಳಜಿ ವಹಿಸುತ್ತೇವೆಯೋ ಅದೇ ರೀತಿ ಹೆರಿಗೆಯ ನಂತರವೂ ಕಾಳಜಿ ವಹಿಸಬೆಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಹೊಂದಿರುವಂಥಹ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಎದೆಹಾಲು ಆಗಬೇಕಾದರೆ ತಾಯಿಯ ದೇಹದಿಂದ 500 ಕ್ಯಾಲರಿ ಖರ್ಚಾಗುತ್ತದೆ. ಹಾಗಾಗಿ ತಾಯಿಯ ದೇಹಕ್ಕೆ ದಿನಕ್ಕೆ 2500 ಕ್ಯಾಲರಿ ಬೇಕಾಗುತ್ತದೆ.
ಮಸಾಜ್ ಮಾಡಿಕೊಳ್ಳುವುದು:
ಬೆವರಿಳಿಸದೆ ಹೊಟ್ಟೆ ಭಾಗದ ತೂಕ ಇಳಿಸುವ ಸುಲಭ ಉಪಾಯವೆಂದರೆ ಮಸಾಜ್. ಮಸಾಜ್ (Massage) ಮಾಡುವುದರಿಂದ ಹೊಟ್ಟೆ ಭಾಗದ ಕೊಬ್ಬು ಕರಗಲು ಸಹಕಾರಿಯಾಗುತ್ತದೆ. ನಿಯಮಿತ ಮಸಾಜ್ ನಿಂದ ಹೊಟ್ಟೆ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
ALSO READ: ನಿಮ್ಮ ಮನೆಯಲ್ಲಿ ಈ ಒಂದು ಸಸ್ಯಯಿದ್ದರೆ ಸಾಕು ಸಾವಿರ ಸಮಸ್ಯೆಗೆ ಪರಿಹಾರ: ಸೌಂದರ್ಯವರ್ಧಕದ ಅಗತ್ಯವಿಲ್ಲ
ತೂಕ ಇಳಿಸಲು ಮನೆಮದ್ದು (Home remedy):
ಇನ್ನು ಅಡುಗೆ ಮನೆಯಲ್ಲೇ ಸುಲಭವಾಗಿ ಸಿಗುವ ಕೆಲ ವಸ್ತುಗಳಿಂದಲೂ ದೇಹ ತೂಕ ಇಳಿಸಿಕೊಳ್ಳಬಹುದು. ಅವುಗಳಲ್ಲಿ ಮುಖ್ಯವಾದವು ಗ್ರೀನ್ ಟೀ. ಗ್ರೀನ್ ಟೀ (Green Tea) ಸೇವನೆ ಮಾಡುವುದರಿಂದ ದೇಹ ತೂಕ ಇಳಿಯುತ್ತದೆ, (Weight loss) ಮಾತ್ರವಲ್ಲ ಮೆಟಬಾಲಿಸಂ ಹೆಚ್ಚಲು ಕೂಡಾ ಇದು ಸಹಾಯ ಮಾಡುತ್ತದೆ.
ಹೆರಿಗೆ ನಂತರ ಒಮಕಾಳಿನ ನೀರನ್ನು ಸೇವಿಸುವುದು ಬಹಳ ಮುಖ್ಯ. ಒಮಕಾಳು ತೂಕ ಇಳಿಸಲು ಸಹಕರಿಸುವುದಲ್ಲದೆ, ಗಾಯ ವಾಸಿಯಾಗಲು ಕೂಡಾ ಸಹಕಾರಿಯಾಗುತ್ತದೆ.
ಇನ್ನು ಚಕ್ಕೆ (Cinnamon) ನೀರು ಕೂಡಾಬಹಳ ಉಪಯುಕ್ತ ಎನ್ನಲಾಗಿದೆ. ಒಂದು ಲೋಟ ಬಿಸಿ ನೀರಿನಲ್ಲಿ ಚಕ್ಕೆಪುಡಿಯನ್ನು ಬೆರೆಸಿ ನಂತರ ಬಸಿದು ಸೇವಿಸಿದರೆ ತೂಕ ಇಳಿಯಲು ಪರಿಣಾಮಕಾರಿಯಾಗಿರುತ್ತದೆ.
ನೆನಪಿಡಿ ಇದನ್ನು ಪ್ರಯತ್ನಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಸಿ ಸೆಕ್ಶನ್ ಮೂಲಕ ಹೆರಿಗೆಯಾಗಿದ್ದರೆ ವೈದ್ಯರ ಸಲಹೆ ಪಡೆದು ಪ್ರಯತ್ನಿಸುವುದು ಒಳಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.