ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಪ್ರಧಾನಿ ಮೋದಿಯವರ ಒಂದು ಮನವಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಈ ಬಗ್ಗೆ ಹಿಂದೆ ಹತ್ತು ಹಲವು ಉದಾಹರಣೆಗಳನ್ನು  ನೋಡಿರಬಹುದು. ಇದೀಗ ಅಂತಹದ್ದೇ ಮತ್ತೊಂದು ಉದಾಹರಣೆ ಕಣ್ಮುಂದೆ ಇದೇ.  ಲಾಕ್‌ಡೌನ್‌ನ ಮಧ್ಯೆ ಪ್ರಧಾನಿ ಮೋದಿ ಮಾಡಿದ ಕೇವಲ ಒಂದು ಮನವಿ ವಿಶ್ವದ ಎಲ್ಲಾ ಇಂಟರ್ನೆಟ್ ಕಂಪನಿಗಳನ್ನು ಬೆಚ್ಚಿಬೀಳಿಸಿದೆ. ಆರೋಗ್ಯ ಸೇತು ವಿಶ್ವದ ಅತಿದೊಡ್ಡ ಕಂಪನಿಗಳಾದ ಗೂಗಲ್ (Google), ಫೇಸ್‌ಬುಕ್ (Facebook), ಟಿಕ್ ಟಾಕ್ (Tiktok) ಮತ್ತು ವಾಟ್ಸಾಪ್ (WhatsApp) ಅನ್ನು ಹಿಂದಿಕ್ಕಿದೆ.


COMMERCIAL BREAK
SCROLL TO CONTINUE READING

ಆರೋಗ್ಯ ಸೇತು ಗೂಗಲ್‌ನಲ್ಲಿ ನಂಬರ್ ಒನ್ ಆ್ಯಪ್:
ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ದೇಶದ ಎಲ್ಲ ನಾಗರಿಕರಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮನವಿ ವಿಶ್ವದ ಎಲ್ಲ ದೊಡ್ಡ ಅಂತರ್ಜಾಲ ಕಂಪನಿಗಳಿಗೆ ಹಿನ್ನಡೆಯಾಗಿದೆ ಎಂದು ಸಾಬೀತಾಗಿದೆ. ಮಂಗಳವಾರದಿಂದ ಆರೋಗ್ಯ ಸೇತು (Aarogya Setu) ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿದೆ. ಟಿಕ್ಟಾಕ್, ಜೂಮ್ ಹೊರತುಪಡಿಸಿ, ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಎಲ್ಲಾ ಅಪ್ಲಿಕೇಶನ್‌ಗಳ ಮೇಲೆ ಇದು ಕೆಟ್ಟ ಪರಿಣಾಮ ಬೀರಿವೆ.

ಎಲ್ಲರೂ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ: ಡಾ. ಅಶ್ವತ್ಥನಾರಾಯಣ ಮನವಿ

ಒಂದು ಆ್ಯಪ್ ಅಷ್ಟು ವೇಗವಾಗಿ ನಂಬರ್ ಒನ್ ಸ್ಥಾನ ಪಡೆಯುವುದು ಸಹ ಒಂದು ದಾಖಲೆಯಾಗಿದೆ. ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ App Annie ಅಧಿಕಾರಿಯೊಬ್ಬರ ಪ್ರಕಾರ ಆರೋಗ್ಯ ಸೇತು ಕೇವಲ 15 ದಿನಗಳಲ್ಲಿ ಇಂಟರ್ನೆಟ್ ಇತಿಹಾಸದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಏಪ್ರಿಲ್ 1ರಂದು ಪ್ರಾರಂಭಿಸಲಾದ ಈ ಆ್ಯಪ್ ಅನ್ನು ಇದುವರೆಗೆ ಕೋಟ್ಯಂತರ ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಭಾರತದ ಶೇಕಡಾ 82ಕ್ಕಿಂತ ಹೆಚ್ಚು ಬಳಕೆದಾರರು ಇದಕ್ಕೆ 5 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಈ ಕಾರಣದಿಂದಾಗಿ ಅಮೆರಿಕ ಮತ್ತು ಚೀನಾದ ಎಲ್ಲಾ ಇಂಟರ್ನೆಟ್ ಕಂಪನಿಗಳ ಗಳಿಕೆಯ ಮೇಲೂ ಪರಿಣಾಮ ಬೀರಿದೆ ಎಂದಿದ್ದಾರೆ.


ಆರೋಗ್ಯ ಸೇತು ಅಪ್ಲಿಕೇಶನ್ ಎಂದರೇನು?
ಕರೋನಾ ವೈರಸ್ ಸೋಂಕಿನಿಂದ ನಿಮ್ಮನ್ನು ರಕ್ಷಿಸಲು ಮತ್ತು ನಿಮ್ಮನ್ನು ಅಲರ್ಟ್ ಮಾಡಲು ಕೇಂದ್ರ ಸರ್ಕಾರವು ತಿಂಗಳ ಆರಂಭದಲ್ಲಿ ಆರೋಗ್ಯ ಸೇತು ಆ್ಯಪ್ ಅನ್ನು ಪ್ರಾರಂಭಿಸಿದೆ. ದೇಶದ ನಾಗರಿಕರು ಒಮ್ಮೆ ಈ ಆ್ಯಪ್ ಡೌನ್‌ಲೋಡ್ ಮಾಡಿದರೆ ಶೀಘ್ರದಲ್ಲೇ ಕರೋನಾ ವೈರಸ್ ತೊಡೆದುಹಾಕಲು ಇದು ಸಹಾಯ ಮಾಡುತ್ತದೆ ಎಂದು ಐಟಿ ಸಚಿವಾಲಯದ ಅಧಿಕಾರಿಯೊಬ್ಬರು ಹೇಳುತ್ತಾರೆ. ನಿಮ್ಮನ್ನು ಆರೋಗ್ಯವಾಗಿಡಲು ಈ ಅಪ್ಲಿಕೇಶನ್ ಸಹಕಾರಿಯಾಗಿದೆ. ಅಲ್ಲದೆ ಯಾವುದೇ ಕರೋನಾ ವೈರಸ್ ಶಂಕಿತರು ನಿಮ್ಮ ಹತ್ತಿರವಿದ್ದರೆ ಆರೋಗ್ಯ ಸೇತು ಅಪ್ಲಿಕೇಶನ್ ತಕ್ಷಣ ನಿಮ್ಮನ್ನು ಎಚ್ಚರಿಸುತ್ತದೆ.