Assembly Election Results 2023: ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಇಂದು(ಮಾರ್ಚ್ 2) ಪ್ರಕಟವಾಗಲಿದೆ. ಗುರುವಾರ ಬೆಳಗ್ಗೆ 8ರಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. 5ರಿಂದ 8 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಮತದಾರರ ಒಲವು ಯಾರ ಕಡೆಗಿದೆ ಅನ್ನೋದು ಇಂದು ಮಧ್ಯಾಹ್ನದ ವೇಳೆ ಸ್ಪಷ್ಟವಾಗಿ ತಿಳಿದುಬರಲಿದೆ.


COMMERCIAL BREAK
SCROLL TO CONTINUE READING

ತ್ರಿಪುರಾ ಮತ್ತು ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಮುನ್ನಡೆ


ಸದ್ಯದ ಮಾಹಿತಿ ಪ್ರಕಾರ 60 ವಿಧಾನಸಭಾ ಕ್ಷೇತ್ರಗಳ ತ್ರಿಪುರಾದಲ್ಲಿ ಬಿಜೆಪಿ+ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅದೇ ರೀತಿ ಎಡಪಕ್ಷಗಳು+ 19 ಕ್ಷೇತ್ರಗಳಲ್ಲಿ TIPRA 9 ಮತ್ತು ಇತರರು 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅದೇ ರೀತಿ 60 ವಿಧಾನಸಭಾ ಕ್ಷೇತ್ರಗಳ ನಾಗಾಲ್ಯಾಂಡ್‍ನಲ್ಲಿ ಬಿಜೆಪಿ+ 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, NCP 4, NPF 3, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.


Monkey Video : ಸಖತ್‌ ಸ್ಟೈಲಾಗಿ ಸಿಗರೇಟ್‌ ಸೇದುವ ಕೋತಿ.. ನಶೆಯಲ್ಲಿ ತೇಲಾಡಿದ ಮಂಗಣ್ಣ


ಇನ್ನು 59 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮೇಘಾಲಯದಲ್ಲಿ NPP 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅದೇ ರೀತಿ ಬಿಜೆಪಿ 8, ಕಾಂಗ್ರೆಸ್ 6, ಟಿಎಂಸಿ 9 ಮತ್ತು ಇತರರು 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.


ತ್ರಿಪುರಾದ 60 ವಿಧಾನಸಭಾ ಕ್ಷೇತ್ರಗಳಿಗೆ ಫೆ.16ರಂದು ಚುನಾವಣೆ ನಡೆದಿದ್ದು, ಶೇ.89.98ರಷ್ಟು ಮತದಾನವಾಗಿತ್ತು. ನಾಗಾಲ್ಯಾಂಡ್‍ನ 60 ಮತ್ತು ಮೇಘಾಲಯದ 59 ಕ್ಷೇತ್ರಗಳಿಗೆ ಫೆ.27ರಂದು ನಡೆದ ಚುನಾವಣೆಯಲ್ಲಿ ಕ್ರಮವಾಗಿ ಶೇ.84.66 ಮತ್ತು ಶೇ.76.66ರಷ್ಟು ಮತದಾನವಾಗಿತ್ತು.


ಇದನ್ನೂ ಓದಿ: ಗಡ್ಡ ಮೀಸೆ ಟ್ರಿಮ್ ಮಾಡಿಸಿಕೊಂಡು ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.