ಗಡ್ಡ ಮೀಸೆ ಟ್ರಿಮ್ ಮಾಡಿಸಿಕೊಂಡು ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ !

Rahul Gandhi New Look:ಇದೀಗ ರಾಹುಲ್ ಗಾಂಧಿ ಲುಕ್ ಬದಲಾಗಿದೆ. 7 ದಿನಗಳ ಯುಕೆ ಪ್ರವಾಸಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಅವರ ಹೊಸ ಲುಕ್ ನ ಫೋಟೋ ಇದೀಗ ವೈರಲ್ ಆಗುತ್ತಿದೆ. 

Written by - Ranjitha R K | Last Updated : Mar 1, 2023, 10:28 AM IST
  • ರಾಹುಲ್ ಗಾಂಧಿ ಗಡ್ಡ ಮೀಸೆ ಟ್ರಿಮ್
  • ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ನಾಯಕ
  • ವೈರಲ್ ಆಯಿತು ರಾಹುಲ್ ಗಾಂಧಿ ಫೋಟೋ
ಗಡ್ಡ ಮೀಸೆ ಟ್ರಿಮ್ ಮಾಡಿಸಿಕೊಂಡು ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ ! title=

Rahul Gandhi New Look : ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಡ್ಡವನ್ನು ಬೆಳೆಸಿದ್ದರು. ಮಾತ್ರವಲ್ಲ ಯಾತ್ರೆಯುದ್ದಕ್ಕೂ ಬಿಳಿ ಬಣ್ಣದ ಟಿ-ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಇದೀಗ ರಾಹುಲ್ ಗಾಂಧಿ ಲುಕ್ ಬದಲಾಗಿದೆ.  ಗಡ್ಡ ಮೀಸೆ ಟ್ರಿಮ್ ಮಾಡಿಕೊಂಡು, ಟೀ ಶರ್ಟ್ ಬದಿಗಿಟ್ಟು ಕೋಟ್ ಟೈಗೆ ರಾಹುಲ್ ಮೈಯೊಡ್ಡಿದ್ದಾರೆ. 7 ದಿನಗಳ ಯುಕೆ ಪ್ರವಾಸಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಅವರ ಹೊಸ ಲುಕ್ ನ ಫೋಟೋ ಇದೀಗ ವೈರಲ್ ಆಗುತ್ತಿದೆ. 

ಕೋಟ್ ಮತ್ತು ಟೈಯಲ್ಲಿ ಮಿಂಚಿದ ರಾಹುಲ್ : 
ಬ್ರಿಟನ್ ತಲುಪುವ ಮುನ್ನ ರಾಹುಲ್ ಗಾಂಧಿ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.  ಬ್ರಿಟನ್ ತಲುಪಿದ ನಂತರದ ಫೋಟೋದಲ್ಲಿ, ರಾಹುಲ್ ಗಾಂಧಿ ಕೋಟ್-ಟೈ ಇರುವ ಜಾಕೆಟ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.  ಸುಪ್ರಿಯಾ ಭಾರದ್ವಾಜ್ ಎಂಬವರು ರಾಹುಲ್ ಗಾಂಧಿ ಅವರೊಂದಿಗಿನ ಫೋಟೋವನ್ನು  ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ರಾಹುಲ್ ಹೊಸ ಲುಕ್ ನೋಡಬಹುದಾಗಿದೆ.  

ಇದನ್ನೂ ಓದಿ : ಎಕ್ಸಿಟ್ ಪೋಲ್‌ ಭವಿಷ್ಯ: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವು- ಮೇಘಾಲಯದಲ್ಲಿ ಮತ್ತೆ ಜಿದ್ದಾಜಿದ್ದಿನ ಪೈಪೋಟಿ!

 

 ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲಿರುವ ರಾಹುಲ್ ಗಾಂಧಿ : 
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಒಂದು ವಾರದ ಮಟ್ಟಿಗೆ ಬ್ರಿಟನ್‌ ಪ್ರವಾಸದಲ್ಲಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಉಪನ್ಯಾಸ ನೀಡಲಿದ್ದಾರೆ. ರಾಹುಲ್ ಗಾಂಧಿ ಭಾರತೀಯ ವಲಸಿಗ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ. ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ರಾಹುಲ್ ಗಾಂಧಿ  '21 ನೇ ಶತಮಾನದಲ್ಲಿ ಕೇಳುವುದು  ಮತ್ತು ಕಲಿಯುವುದು' ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿರುವ ಕೇಂಬ್ರಿಡ್ಜ್ ಜೆಬಿಎಸ್ 'ನಮ್ಮ ಕೇಂಬ್ರಿಡ್ಜ್ ಎಂಬಿಎ ಕಾರ್ಯಕ್ರಮಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Elections 2023 : ನಾಗಾಲ್ಯಾಂಡ್-ಮೇಘಾಲಯದ 118 ಸ್ಥಾನಗಳಿಗೆ ಇಂದು ಮತದಾನ, ಈ ಪಕ್ಷಗಳ ನಡುವೆ ತೀವ್ರ ಪೈಪೋಟಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News