Elections 2023 : ನಾಗಾಲ್ಯಾಂಡ್-ಮೇಘಾಲಯದ 118 ಸ್ಥಾನಗಳಿಗೆ ಇಂದು ಮತದಾನ, ಈ ಪಕ್ಷಗಳ ನಡುವೆ ತೀವ್ರ ಪೈಪೋಟಿ!

Meghalaya : ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಇಂದು ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಗಿ ಭದ್ರತೆಯ ನಡುವೆ ಮತದಾನ ನಡೆಯಲಿದೆ.

Written by - Channabasava A Kashinakunti | Last Updated : Feb 27, 2023, 07:13 AM IST
  • ಈ ಪಕ್ಷಗಳು ಮೇಘಾಲಯದಲ್ಲಿ ಹೋರಾಡಲಿವೆ
  • ನಾಗಾಲ್ಯಾಂಡ್‌ನಲ್ಲಿ 183 ಅಭ್ಯರ್ಥಿಗಳು ಕಣದಲ್ಲಿ
  • ಮತದಾನಕ್ಕೂ ಮುನ್ನ ಅಪಘಾತ
Elections 2023 : ನಾಗಾಲ್ಯಾಂಡ್-ಮೇಘಾಲಯದ 118 ಸ್ಥಾನಗಳಿಗೆ ಇಂದು ಮತದಾನ, ಈ ಪಕ್ಷಗಳ ನಡುವೆ ತೀವ್ರ ಪೈಪೋಟಿ! title=

Meghalaya Assembly Elections 2023 : ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಇಂದು ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಗಿ ಭದ್ರತೆಯ ನಡುವೆ ಮತದಾನ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ 60-60 ವಿಧಾನಸಭಾ ಸ್ಥಾನಗಳಿದ್ದು, 59-59 ಸ್ಥಾನಗಳಿಗೆ ಮಾತ್ರ ಮತದಾನ ನಡೆಯಲಿದೆ. ಮಾರ್ಚ್ 2 ರಂದು ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ 369 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 21,75,236 ಮತದಾರರು ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇವರಲ್ಲಿ 10.99 ಲಕ್ಷ ಮಹಿಳೆಯರು ಮತ್ತು 10.68 ಲಕ್ಷ ಪುರುಷ ಮತದಾರರಿದ್ದಾರೆ. ಮತದಾನಕ್ಕಾಗಿ 3,419 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕೇಂದ್ರೀಯ ಪಡೆಯ 119 ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಈ ಪಕ್ಷಗಳು ಮೇಘಾಲಯದಲ್ಲಿ ಹೋರಾಡಲಿವೆ

ಮತದಾನಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಗಡಿಯನ್ನು ಬಂದ್ ಮಾಡಲಾಗಿದೆ. ಈ ಬಾರಿ ಮೇಘಾಲಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಎನ್‌ಪಿಪಿ 57 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಮೇಘಾಲಯದಲ್ಲಿ ಅಧಿಕಾರಕ್ಕಾಗಿ ಮೂರೂ ಪಕ್ಷಗಳ ನಡುವೆ ಯುದ್ಧ ನಡೆಯುವುದನ್ನು ಕಾಣಬಹುದು. ಮಾರ್ಚ್ 2 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಬರಲಿದೆ.

ಇದನ್ನೂ ಓದಿ : Manish Sisodia Arrest: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನ: ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಮಹತ್ವದ ಕ್ರಮ

ನಾಗಾಲ್ಯಾಂಡ್‌ನಲ್ಲಿ 183 ಅಭ್ಯರ್ಥಿಗಳು ಕಣದಲ್ಲಿ

ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ 183 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 13,17,632 ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಇವರಲ್ಲಿ 6,61,489 ಪುರುಷ ಹಾಗೂ 6,56,143 ಮಹಿಳಾ ಮತದಾರರಿದ್ದಾರೆ. ನಾಗಾಲ್ಯಾಂಡ್‌ನಲ್ಲಿ 2,315 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕೇಂದ್ರೀಯ ಪಡೆಯ 50 ತುಕಡಿ ಇಲ್ಲಿ ಬೀಡುಬಿಟ್ಟಿವೆ. ನಾಗಾಲ್ಯಾಂಡ್‌ನಲ್ಲಿ ಮತದಾನಕ್ಕಾಗಿ ಮ್ಯಾನ್ಮಾರ್ ಗಡಿಯನ್ನು ಬಂದ್ ಮಾಡಲಾಗಿದೆ. ತ್ರಿಪುರಾ ಜೊತೆಗೆ ಮೇಘಾಲಯ ಮತ್ತು ನಾಗಾಲ್ಯಾಂಡ್ ಚುನಾವಣಾ ಫಲಿತಾಂಶಗಳು ಮಾರ್ಚ್ 2 ರಂದು ಬರಲಿವೆ.

ಮತದಾನಕ್ಕೂ ಮುನ್ನ ಅಪಘಾತ

ಗಮನಾರ್ಹವೆಂದರೆ, ಮತದಾನ ಪ್ರಾರಂಭವಾಗುವ ಮೊದಲು, ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ಇಲ್ಲಿ ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ : ‘ನಾಟು ನಾಟು’ ಹಾಡಿಗೆ ನಾಚುತ್ತಾ ಕುಣಿದ ಕೊರಿಯಾ ರಾಯಭಾರಿ: ಡ್ಯಾನ್ಸ್ ಕಂಡು ಮೋದಿ ಏನಂದ್ರು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News