Car Sales: ಈ ಏಕೈಕ ಅಗ್ಗದ ಕಾರು ಎಲ್ಲಾ SUVಗಳಿಗೆ ಸ್ಪರ್ಧೆ ನೀಡುತ್ತಿದೆ!
Car Sales in India: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರು ಎಸ್‌ಯುವಿಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಹೀಗಾಗಿ ದೇಶದಲ್ಲಿ SUV ವಿಭಾಗದ ಕಾರುಗಳ ಮಾರಾಟವೂ ಹೆಚ್ಚಾಗಿದೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರು ಎಸ್‌ಯುವಿಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ SUV ವಿಭಾಗದ ಮಾರಾಟವೂ ಹೆಚ್ಚಾಗಿದೆ. 2022ರ ನವೆಂಬರ್‍ನಲ್ಲಿ ಮಾರಾಟವಾದ ಕಾರುಗಳ ಪಟ್ಟಿ ನೋಡಿದ್ರೆ ಹೆಚ್ಚಿನ ವಾಹನಗಳು SUVಗಳಾಗಿವೆ. ಈ ಪೈಕಿ 12 ಎಸ್‌ಯುವಿಗಳು, 9 ಹ್ಯಾಚ್‌ಬ್ಯಾಕ್‌ಗಳು, 2 ಎಂಪಿವಿಗಳು, 1 ಸೆಡಾನ್ ಮತ್ತು 1 ವ್ಯಾನ್ ಸೇರಿವೆ.
SUVಗಳು ಈ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದ್ದು, ಸೆಡಾನ್‌ಗಳ ಮಾರಾಟ ಬಹುತೇಕ ಇಳಿಕೆಯಾಗಿದೆ. ಎಲ್ಲಾ SUVಗಳು ಮತ್ತು ಹ್ಯಾಚ್‌ಬ್ಯಾಕ್‌ಗಳಲ್ಲಿ ತನ್ನ ಸ್ಥಾನ ಉಳಿಸಿಕೊಂಡಿರುವ ಒಂದೇ ಒಂದು ಸೆಡಾನ್ ಕಾರು ಇದೆ. ಅದುವೇ ಮಾರುತಿ ಸುಜುಕಿ ಡಿಜೈರ್ ಆಗಿದೆ. ಇದು ಸೆಡಾನ್‌ಗಳನ್ನು ತಯಾರಿಸಿ ಮಾರಾಟ ಮಾಡುವ ಟಾಟಾದಿಂದ ಹೋಂಡಾವರೆಗಿನ ಎಲ್ಲಾ ಕಾರು ತಯಾರಕ ಕಂಪನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಇದನ್ನೂ ಓದಿ: Pragya Thakur: ‘ಲವ್ ಜಿಹಾದ್’ ಬಗ್ಗೆ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ವಿವಾದಾತ್ಮಕ ಹೇಳಿಕೆ!
ನವೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ಡಿಜೈರ್ ಮಾರಾಟದ ವಿಷಯದಲ್ಲಿ 6ನೇ ಸ್ಥಾನದಲ್ಲಿದ್ದು, ಒಟ್ಟು 14456 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ವ್ಯಾಗನ್ಆರ್ (14720 ಯುನಿಟ್ ಮಾರಾಟ) 5ನೇ ಸ್ಥಾನ, ಮಾರುತಿ ಸ್ವಿಫ್ಟ್ 4ನೇ(15152 ಯುನಿಟ್ ಮಾರಾಟ)ಸ್ಥಾನ, ಮಾರುತಿ ಆಲ್ಟೊ 3ನೇ(15663 ಯುನಿಟ್ ಮಾರಾಟ) ಸ್ಥಾನ, ಟಾಟಾ ನೆಕ್ಸನ್ 2ನೇ (15871 ಯುನಿಟ್ ಮಾರಾಟ) ಸ್ಥಾನ ಮತ್ತು ಮಾರುತಿ Baleno ಅಗ್ರಸ್ಥಾನ (20945 ಯುನಿಟ್ ಮಾರಾಟ)ದಲ್ಲಿದೆ.
ಮಾರುತಿ ಸುಜುಕಿ ಡಿಜೈರ್
ಇದರ ಬೆಲೆ 6.24ರಿಂದ 9.18 ಲಕ್ಷ (ಎಕ್ಸ್ ಶೋ ರೂಂ) ರೂ.ವರೆಗೆ ಇದೆ. ಇದು ಪೆಟ್ರೋಲ್ ಮತ್ತು CNG ಇಂಧನ ಆಯ್ಕೆ ಹೊಂದಿದೆ. ಇದು 5 ಆಸನಗಳ ಸೆಡಾನ್ ಆಗಿದೆ. ಡಿಜೈರ್ 1.2-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ (90 PS/113 Nm) ನೊಂದಿಗೆ ಬರುತ್ತದೆ, ಜೊತೆಗೆ CNG ಕಿಟ್ ಸಹ ನೀಡಲಾಗುತ್ತದೆ. CNGನಲ್ಲಿ 77 PS ಮತ್ತು 98.5 Nm ಪವರ್ ಔಟ್‌ಪುಟ್ ಲಭ್ಯವಿದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ, ಆದರೆ 5-ಸ್ಪೀಡ್ AMT ಐಚ್ಛಿಕವಾಗಿರುತ್ತದೆ. ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 24.12 ಕಿಮೀ ಮೈಲೇಜ್ ನೀಡಿದರೆ, ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 31.12 ಕಿಮೀ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ: Corona ಭೀತಿಯೇ? ಫುಡ್ ಎಂಜಾಯ್ ಮಾಡಲು ಈತನ ಮಾಸ್ಟರ್ ಪ್ಲ್ಯಾನ್ ನೋಡಿ! ನೀವೂ ಬೇಕಿದ್ರೆ ಟ್ರೈ ಮಾಡಿ
ಇದು ಆಂಡ್ರಾಯ್ಡ್ ಆಟೋ ಮತ್ತು Apple CarPlay ಸಂಪರ್ಕದೊಂದಿಗೆ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4.2-ಇಂಚಿನ ಬಹು-ಬಣ್ಣದ MID ಡಿಸ್ಪ್ಲೇ, ಸ್ವಯಂಚಾಲಿತ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಆಟೋ ಫೋಲ್ಡಿಂಗ್ ORVMಗಳು, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಎಂಜಿನ್ ಸ್ಟಾರ್ಟ್-ಸ್ಟಾಪ್, ರಿಯರ್ ಎಸಿ ವೆಂಟ್‌ಗಳು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ. ಜೊತೆಗೆ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ಹಿಂಭಾಗದ ವೈಶಿಷ್ಟ್ಯಗಳು ಬರುತ್ತವೆ. ಆದರೆ, ರಿಯರ್ ವ್ಯೂ ಕ್ಯಾಮೆರಾ ಮತ್ತು ರಿಯರ್ ಡಿಫಾಗರ್ ಅನ್ನು ಉನ್ನತ ಮಾದರಿಯ ಕಾರುಗಳಲ್ಲಿ ನೀಡಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.