Pragya Thakur: ‘ಲವ್ ಜಿಹಾದ್’ ಬಗ್ಗೆ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ವಿವಾದಾತ್ಮಕ ಹೇಳಿಕೆ!

ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೈದಿಕ ದಕ್ಷಿಣ ಪ್ರಾಂತದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ‘ಲವ್ ಜಿಹಾದ್’ ಕುರಿತು ಪ್ರಚೋಧನಕಾರಿ ಹೇಳಿಕೆ ನೀಡಿದ್ದಾರೆ.

Written by - Puttaraj K Alur | Last Updated : Dec 26, 2022, 04:49 PM IST
  • ‘ಲವ್ ಜಿಹಾದ್’ ಬಗ್ಗೆ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ವಿವಾದಾತ್ಮಕ ಹೇಳಿಕೆ
  • ನಮಗೆ ಜೀವ ನೀಡುವುದೂ ಗೊತ್ತು, ಜೀವ ತೆಗೆಯುವುದೂ ಗೊತ್ತು ಎಂದ ಬಿಜೆಪಿ ಸಂಸದೆ
  • ಪ್ರತಿಯೊಬ್ಬ ಹಿಂದೂಗಳು ತಮ್ಮ ತಮ್ಮ ಮನೆಗಳಲ್ಲಿ ಆಯುಧಗಳನ್ನು ಇಟ್ಟುಕೊಳ್ಳಿ ಎಂದು ಸಲಹೆ
Pragya Thakur: ‘ಲವ್ ಜಿಹಾದ್’ ಬಗ್ಗೆ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ವಿವಾದಾತ್ಮಕ ಹೇಳಿಕೆ! title=
‘ಲವ್ ಜಿಹಾದ್’ ಬಗ್ಗೆ ಪ್ರಜ್ಞಾ ಹೇಳಿದ್ದೇನು?

ನವದೆಹಲಿ: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ತಮ್ಮ ಹೇಳಿಕೆಗಳಿಂದಾಗಿ ಆಗಾಗ ಚರ್ಚೆಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂಗಳು ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತೆ ಸಾಧ್ವಿ ಪ್ರಜ್ಞಾ ಸಲಹೆ ನೀಡಿದ್ದಾರೆ. ‘ಲವ್ ಜಿಹಾದ್’ ಬಗ್ಗೆ ಮಾತನಾಡಿರುವ ಅವರು, ‘ನಮಗೆ ಜೀವ ನೀಡುವುದೂ ಗೊತ್ತು, ಜೀವ ತೆಗೆಯುವುದೂ ಗೊತ್ತು’ ಅಂತಾ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಧ್ವಿ ಪ್ರಜ್ಞಾ ಠಾಕೂರ್, ‘ಹಿಂದೂಗಳು ತಮ್ಮ ಘನತೆಯ ಮೇಲೆ ದಾಳಿ ಮಾಡುವವರಿಗೆ ತಕ್ಕ ಉತ್ತರ ನೀಡುವ ಹಕ್ಕು ಹೊಂದಿದ್ದಾರೆ. ನಿಮ್ಮ ಮನೆಗಳಲ್ಲಿ ಆಯುಧಗಳನ್ನು ಇರಿಸಿಕೊಳ್ಳಿ. ಒಂದು ವೇಳೆ ಅಯುಧಗಳಿಲ್ಲದಿದ್ದರೆ ಕನಿಷ್ಠ ತರಕಾರಿಗಳನ್ನು ಕತ್ತರಿಸಲು ಚಾಕುವನ್ನಾದರೂ ಇಟ್ಟುಕೊಳ್ಳಿ. ಮುಂದೆ ಯಾವಾಗ ಯಾವ ಪರಿಸ್ಥಿತಿ ಬರುತ್ತೋ ಗೊತ್ತಿಲ್ಲ. ಪ್ರತಿಯೊಬ್ಬರಿಗೂ ಆತ್ಮರಕ್ಷಣೆಯ ಹಕ್ಕಿದೆ. ಯಾರಾದರೂ ನಮ್ಮ ಮನೆಗೆ ನುಗ್ಗಿ ದಾಳಿ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡುವುದು ನಮ್ಮ ಹಕ್ಕಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡೇಟಾದ ಟೆನ್ಷನ್‍ಗೆ ಹೇಳಿ ಗುಡ್‍ಬೈ! ಒಮ್ಮೆ ರೀಚಾರ್ಜ್ ಮಾಡಿದ್ರೆ ವರ್ಷಪೂರ್ತಿ ಪ್ರಯೋಜನ!

 ‘ಲವ್ ಜಿಹಾದ್’ ಬಗ್ಗೆ ಪ್ರಜ್ಞಾ ಹೇಳಿದ್ದೇನು?

ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೈದಿಕ ದಕ್ಷಿಣ ಪ್ರಾಂತದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ‘ಲವ್ ಜಿಹಾದ್’ ಕುರಿತು ಪ್ರಚೋಧನಕಾರಿ ಹೇಳಿಕೆ ನೀಡಿದ್ದಾರೆ. ‘ಅವರು ಜಿಹಾದ್ ಸಂಪ್ರದಾಯವನ್ನು ಹೊಂದಿದ್ದಾರೆ. ಅವರು ಏನು ಮಾಡದಿದ್ದರೂ ‘ಲವ್ ಜಿಹಾದ್’ ಮಾಡುತ್ತಾರೆ. ಪ್ರೀತಿಸಿದರೂ ಅದರಲ್ಲಿ ಜಿಹಾದ್ ಮಾಡುತ್ತಾರೆ. ನಾವೂ ಹಿಂದೂಗಳು ದೇವರನ್ನು ಪ್ರೀತಿಸುತ್ತೇವೆ. ಸನ್ಯಾಸಿನಿ ತನ್ನ ದೇವರನ್ನು ಪ್ರೀತಿಸುತ್ತಾರೆ' ಎಂದು ಹೇಳಿದ್ದಾರೆ.

‘ದೇವರು ಸೃಷ್ಟಿಸಿರುವ ಈ ಜಗತ್ತಿನಲ್ಲಿ ಎಲ್ಲಾ ದಬ್ಬಾಳಿಕೆಗಾರರನ್ನು ಮತ್ತು ಪಾಪಿಗಳನ್ನು ತೊಡೆದುಹಾಕಲು ಸನ್ಯಾಸಿಗಳು ಸಲಹೆ ನೀಡುತ್ತಾರೆ. ಪ್ರೀತಿಯ ನಿಜವಾದ ವ್ಯಾಖ್ಯಾನ ಇಲ್ಲಿ ಉಳಿಯದಿದ್ದರೆ, ಅದರಲ್ಲಿ ತೊಡಗಿರುವ ಜನರಿಗೆ ಉತ್ತರಿಸಿ. ‘ಲವ್ ಜಿಹಾದ್’ನಲ್ಲಿ ಭಾಗಿಯಾಗಿರುವವರಿಗೂ ಇದೇ ರೀತಿ ಪ್ರತಿಕ್ರಿಯಿಸಿ. ನಿಮ್ಮ ಹುಡುಗಿಯರನ್ನು ರಕ್ಷಿಸಿ ಮತ್ತು ಅವರಿಗೆ ಸರಿಯಾದ ಮೌಲ್ಯಗಳನ್ನು ಕಲಿಸಿ' ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Covid-19 BF.7 Symptoms: ಈ 5 ಲಕ್ಷಣಗಳು ದೇಹದಲ್ಲಿ ಕಂಡುಬಂದರೆ ಎಚ್ಚರದಿಂದಿರಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News