Corona ಭೀತಿಯೇ? ಫುಡ್‌ ಎಂಜಾಯ್‌ ಮಾಡಲು ಈತನ ಮಾಸ್ಟರ್‌ ಪ್ಲ್ಯಾನ್‌ ನೋಡಿ! ನೀವೂ ಬೇಕಿದ್ರೆ ಟ್ರೈ ಮಾಡಿ

Trending Video : ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಕೊರೊನಾ ವೈರಸ್‌ನ ಹೊಸ ಸವಾಲಿನ ನಡುವೆ ಇದೊಂದು ಹೊಸ ಆವಿಷ್ಕಾರ ಎಂದು ಜನರು ಹೇಳುತ್ತಿದ್ದಾರೆ. ಆದಾಗ್ಯೂ, ಈ ಕೊರೊನಾ ಮಾಸ್ಕ್‌ನ್ನು ನೋಡಿ, ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಶಾಕ್‌ ಆಗಿದ್ದಾರೆ.

Written by - Chetana Devarmani | Last Updated : Dec 26, 2022, 05:18 PM IST
  • Corona ಭೀತಿಯೇ?
  • ಫುಡ್‌ ಎಂಜಾಯ್‌ ಮಾಡಲು ಈತನ ಮಾಸ್ಟರ್‌ ಪ್ಲ್ಯಾನ್‌ ನೋಡಿ!
  • ನೀವೂ ಬೇಕಿದ್ರೆ ಟ್ರೈ ಮಾಡಿ
Corona ಭೀತಿಯೇ? ಫುಡ್‌ ಎಂಜಾಯ್‌ ಮಾಡಲು ಈತನ ಮಾಸ್ಟರ್‌ ಪ್ಲ್ಯಾನ್‌ ನೋಡಿ! ನೀವೂ ಬೇಕಿದ್ರೆ ಟ್ರೈ ಮಾಡಿ  title=

Trending Video : ಕೊರೊನಾ ವೈರಸ್ ಮತ್ತೊಮ್ಮೆ ಭೀತಿ ಹರಡುತ್ತಿದೆ. ಚೀನಾ ಮತ್ತು ಇತರ ಹಲವು ದೇಶಗಳಲ್ಲಿ ಮತ್ತೆ ಕೊರೊನಾ ವಿನಾಶ ಸೃಷ್ಟಿಸುತ್ತಿದೆ. ಈ ಬಗ್ಗೆ ಜನರೂ ಜಾಗೃತರಾಗಿದ್ದಾರೆ. ಈ ನಡುವೆ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ವ್ಯಕ್ತಿಯೊಬ್ಬರು ವಿಚಿತ್ರ ಮಾಸ್ಕ್‌ ಧರಿಸಿರುವುದು ಕಂಡುಬಂದಿದೆ. ಈ ಮಾಸ್ಕ್‌ನ್ನು ನೋಡಿದ ಜನರು ಗೊಂದಲಕ್ಕೊಳಗಾದರು.

ಇದನ್ನೂ ಓದಿ: ನಟ ದರ್ಶನ ಮೇಲೆ ಚಪ್ಪಲಿ ಎಸೆತ ಪ್ರಕರಣ : ಮೂವರ ಜನರ ಬಂಧನ

ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಮಂದಿ ಶೇರ್ ಮಾಡಿದ್ದಾರೆ. ಒಬ್ಬ ವ್ಯಕ್ತಿಯು ರೆಸ್ಟೋರೆಂಟ್‌ನಲ್ಲಿ ಕುಳಿತಿರುವುದು ಮತ್ತು ಅವನು ಕೊಕ್ಕಿನಂತಹ ಮಾಸ್ಕ್‌ನ್ನು ಧರಿಸಿರುವುದು ಕಂಡುಬಂದಿದೆ. ಮುಖಕ್ಕೆ ಈ ಮಾಸ್ಕ್‌ ಹಾಕಿಕೊಂಡು ತಿನ್ನಲೂಬಹುದು, ಕುಡಿಯಲೂಬಹುದು. ಈ ಮಾಸ್ಕ್‌ ನೋಡಲು ತುಂಬಾ ಫನ್ನಿಯಾಗಿಯೂ ಕಾಣುತ್ತಿದೆ. 

 

 

ಈ ವ್ಯಕ್ತಿ ಮಾಸ್ಕ್ ಹಾಕಿಕೊಂಡು ರೆಸ್ಟೋರೆಂಟ್‌ನಲ್ಲಿ ಕುಳಿತು ತಿಂಡಿ ಹಾಗೂ ಇತರೆ ವಸ್ತುಗಳನ್ನು ತಿನ್ನುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅಲ್ಲಿಯ ರೆಸ್ಟೊರೆಂಟ್‌ನಲ್ಲಿ ಅನೇಕ ಜನರು ಹಾಜರಿರುವುದು ಕಂಡುಬರುತ್ತದೆ. ಆದರೆ, ವಿಡಿಯೋ ನೋಡಿದರೆ ಇದು ಭಾರತದ ಹೊರಗಿನಿಂದ ಬಂದದ್ದು ಎಂದು ಅನಿಸುತ್ತಿದೆ. ಸದ್ಯಕ್ಕೆ, ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ದೃಢಪಟ್ಟಿಲ್ಲ. ಆದರೆ ಕೊರೊನಾ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ವಿಡಿಯೋ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: 'ಕ್ರಾಂತಿ' ಟ್ರೈಲರ್ ರಿಲೀಸ್ ಎಂದು? ಎಲ್ಲಿ? ಯಾವಾಗ? ನಟ ದರ್ಶನ್ ಕೊಟ್ರು ಸುಳಿವು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News