ನವದೆಹಲಿ: ಯುವಕರಲ್ಲಿ ಸಿಗರೇಟ್ ಮತ್ತು ತಂಬಾಕಿನ ಬಳಕೆ ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದೆ. ಧೂಮಪಾನದ ಕಾನೂನುಬದ್ಧ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅಸ್ತಿತ್ವದಲ್ಲಿರುವ 18 ವರ್ಷ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮಸೂದೆಯನ್ನು ಸಿದ್ಧಪಡಿಸಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ತಿದ್ದುಪಡಿ ಕಾಯ್ದೆ 2020 ಅನ್ನು ಸರ್ಕಾರ ರೂಪಿಸಿದೆ.


COMMERCIAL BREAK
SCROLL TO CONTINUE READING

ಸಿಗರೇಟ್ (Cigarettes) ಧೂಮಪಾನದ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸುವ ನಿಬಂಧನೆಯು ಕೇಂದ್ರ ಆರೋಗ್ಯ ಸಚಿವಾಲಯ ಪರಿಚಯಿಸುವ ಹೊಸ ಮಸೂದೆಯ ಭಾಗವಾಗಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ವ್ಯಾಪಾರ ಮತ್ತು ವಾಣಿಜ್ಯ ನಿಷೇಧ, ಉತ್ಪಾದನೆ ಮತ್ತು ಪೂರೈಕೆ ಮತ್ತು ವಿತರಣೆ) ಕಾಯ್ದೆ, 2003 ಅನ್ನು ತಿದ್ದುಪಡಿ ಮಾಡಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.


ಇದನ್ನೂ ಓದಿ : ಮತ್ತೆ ಕದ ತಟ್ಟಿದ Bird Flu, ಕೇಂದ್ರದಿಂದ ಮಹತ್ವದ ನಿರ್ಧಾರ


ಶಿಕ್ಷಣ ಸಂಸ್ಥೆಗಳ ಬಳಿ ಸಿಗರೇಟ್ ಮಾರುವಂತಿಲ್ಲ :
ಕೇಂದ್ರ ಸರ್ಕಾರವು ಮಸೂದೆಯಲ್ಲಿ ಪ್ರಸ್ತಾಪಿಸಿರುವ ತಿದ್ದುಪಡಿಗಳ ಪ್ರಕಾರ ಯಾವುದೇ ವ್ಯಕ್ತಿ 21 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಯುವಕರಿಗೆ ಸಿಗರೇಟ್ ಅಥವಾ ಇತರ ತಂಬಾಕು ಉತ್ಪನ್ನಗಳನ್ನು (Tobacco Products) ಮಾರಾಟ ಮಾಡಲು ಅಥವಾ ಅನುಮತಿಸಲು ಸಾಧ್ಯವಿಲ್ಲ. ಇದರೊಂದಿಗೆ ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂಬ ನಿಬಂಧನೆಯೂ ಇದೆ. ಸಿಗರೇಟ್ ಅಥವಾ ಇನ್ನಾವುದೇ ತಂಬಾಕು ಉತ್ಪನ್ನ ಮೊಹರು ಮಾಡಿದ ಪ್ಯಾಕ್ ಸ್ಥಿತಿಯಲ್ಲಿರಬೇಕು ಎಂದು ಹೇಳುವ ಮೂಲಕ ಸೆಕ್ಷನ್ 7 ಅನ್ನು ತಿದ್ದುಪಡಿ ಮಾಡಲಾಗುತ್ತಿದೆ. ಅವುಗಳನ್ನು ಮೂಲ ಪ್ಯಾಕೇಜಿಂಗ್ ಹೊರಗೆ ಮಾರಾಟ ಮಾಡಲಾಗುವುದಿಲ್ಲ ಎಂದು ನಿಯಮ ರೂಪಿಸಲಾಗುತ್ತಿದೆ.


ಇದನ್ನೂ ಓದಿ : AIDS ಕಾಯಿಲೆಯ Patient Zero ಯಾರು ನಿಮಗೆ ಗೊತ್ತಾ? ನೀವೂ ನಂಬಲ್ಲ


ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ :
ಸಿಗರೇಟ್ ಅಥವಾ ಇತರ ಯಾವುದೇ ತಂಬಾಕು (Tobacco) ಉತ್ಪನ್ನಗಳಿಗೆ ಉತ್ಪಾದನೆ, ಪೂರೈಕೆ ಹೊರತು ಯಾವುದೇ ವ್ಯಕ್ತಿ ನೇರವಾಗಿ ಅಥವಾ ಪರೋಕ್ಷವಾಗಿ ಸಿಗರೇಟ್ ಅಥವಾ ಇತರ ತಂಬಾಕು ಉತ್ಪನ್ನಗಳನ್ನು ಉತ್ಪಾದಿಸಬಾರದು, ವಿತರಿಸಬಾರದು ಎಂದು ಕರಡು ಹೇಳುತ್ತದೆ. ಅದಾಗ್ಯೂ ವಿತರಣೆಗೆ ಕನಿಷ್ಠ ಪ್ರಮಾಣವನ್ನು ನಿಗದಿಪಡಿಸಿಲ್ಲ. ಈ ಸೆಕ್ಷನ್ 7 ರ ಉಲ್ಲಂಘನೆಯು ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಗಳ ದಂಡಕ್ಕೆ ಕಾರಣವಾಗಬಹುದು. ಆದರೆ ಗರಿಷ್ಠ ಶಿಕ್ಷೆ ಐದು ವರ್ಷ ಜೈಲು ಶಿಕ್ಷೆ ಅಥವಾ ಐದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದು ಎಂದು ಹೇಳಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.