ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆ ವಿರುದ್ಧ ಚೀನಾ ಆರೋಪ
ಚೀನಾದ ಸೈನ್ಯದ ವೆಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರರು ಭಾರತೀಯ ಸೈನ್ಯದ ವಿರುದ್ಧವೇ ಆರೋಪ ಮಾಡಿದ್ದು ಭಾರತೀಯ ಸೈನ್ಯವು ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದೆ ಎಂದರಲ್ಲದೆ ಭಾರತೀಯ ಸೇನೆ ಬೆದರಿಕೆ ಹಾಕಿರುವ ಬಗ್ಗೆಯೂ ಆರೋಪ ಮಾಡಿದ್ದಾರೆ.
ನವದೆಹಲಿ: ಲಡಾಖ್‌ನಲ್ಲಿ ಇಂಡೋ-ಚೀನಾ (Indo-China) ಗಡಿ ವಿವಾದ ಉಲ್ಬಣಗೊಂಡಿರುವ ಮಧ್ಯೆ ಭಾರತೀಯ ಸೇನೆಯು ವಾಸ್ತವ ನಿಯಂತ್ರಣ ರೇಖೆಯನ್ನು (LAC) ದಾಟಿದೆ ಎಂದು ಚೀನಾ ಸೇನೆಯು ಆರೋಪಿಸಿದೆ. ಇದಕ್ಕಾಗಿಯೇ ಚೀನಾದ ಸೇನೆಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರರು ಭಾರತೀಯ ಸೈನ್ಯವನ್ನು ಪ್ರಚೋದನೆ ಮಾಡಿದ್ದಾರೆ ಎಂದು ಆರೋಪಿಸಿದರು ಮತ್ತು ಭಾರತೀಯ ಸೈನ್ಯವು ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದೆ. ಅದರೊಂದಿಗೆ ಬೆದರಿಕೆಯನ್ನು ಹಾಕಲಾಗಿದೆ ಎಂದವರು ಆರೋಪಿಸಿದರು.
ಚೀನಾದ (China) ವೆಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರ ಕರ್ನಲ್ ಜಾಂಗ್ ಶಿಯುಲಿ (ಜಾಂಗ್ ಶೂಯಿಲಿ), ಭಾರತವು ಪ್ರಚೋದನಕಾರಿಯಾಗಿ ವರ್ತಿಸುವಾಗ, ಪಾಂಗೊಂಗ್ ಸರೋವರದ ಬಳಿಯ ಎಲ್‌ಎಸಿಯನ್ನು ತಪ್ಪಾಗಿ ದಾಟಿದೆ. ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸೇನೆಯು ಗುಂಡು ಹಾರಿಸಿತು ಮತ್ತು ನಮ್ಮ ಸೈನಿಕರಿಗೆ ಬೆದರಿಕೆ ಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಕೂಡ ಪ್ರತಿಕ್ರಿಯಿಸಿತು. ಈ ಹಿನ್ನೆಲೆಯಲ್ಲಿ ಭಾರತವು ಎರಡೂ ಕಡೆಯ ನಡುವಿನ ಒಪ್ಪಂದಗಳನ್ನು ತೀವ್ರವಾಗಿ ಉಲ್ಲಂಘಿಸಿ ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಲು ಕೆಲಸ ಮಾಡಿತು. ಇದು ಪ್ರಚೋದನೆಯ ಕ್ರಿಯೆ ಮತ್ತು ಇದು ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಎಂದಿದ್ದಾರೆ.
ಭಾರತ - ಚೀನಾ ಗಡಿ ಉದ್ವಿಗ್ನತೆ ಹಿನ್ನಲೆಯಲ್ಲಿ ಎರಡೂ ದೇಶಗಳ ರಕ್ಷಣಾ ಸಚಿವರ ಸಭೆ
ಈ ಅಪಾಯಕಾರಿ ಆಟವನ್ನು ತಕ್ಷಣ ನಿಲ್ಲಿಸುವಂತೆ ನಾವು ಭಾರತಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು. ಕೂಡಲೇ ಭಾರತೀಯ ಸೈನಿಕರನ್ನು ತಮ್ಮ ಗಡಿಗೆ ಮರಳಲು ಹೇಳಿ. ಇದರೊಂದಿಗೆ ಈ ಬಗ್ಗೆ ತನಿಖೆ ನಡೆಸಿ ಅಂತಹ ಘಟನೆ ಮತ್ತೆ ಸಂಭವಿಸದಂತೆ ಗುಂಡು ಹಾರಿಸಿದ ಸೈನಿಕರ ವಿರುದ್ಧ ಕ್ರಮಕೈಗೊಳ್ಳಿ ಎಂದವರು ಆಗ್ರಹಿಸಿದ್ದಾರೆ.
ಚೀನಾದ ಈ ಆರೋಪದ ನಂತರ ಭಾರತೀಯ ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಚೀನಾದೊಂದಿಗೆ ಹೆಚ್ಚಿದ ಉದ್ವಿಗ್ನತೆ; ಅಲರ್ಟ್ ಆಗಿರುವಂತೆ ಸೇನೆಗೆ ಗೃಹ ಸಚಿವಾಲಯದ ಆದೇಶ
ಆದರೆ ಪೂರ್ವ ಲಡಾಖ್‌ನಲ್ಲಿ (Ladakh) ಎಲ್‌ಎಸಿಯನ್ನು ವಜಾ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಕಳೆದ ಮೂರು ತಿಂಗಳಿನಿಂದ ಭಾರತ ಮತ್ತು ಚೀನಾ ನಡುವೆ ಸಂಘರ್ಷದ ಪರಿಸ್ಥಿತಿ ನಡುವೆ ಚೀನಾದ ಈ ಹೇಳಿಕೆ ಬಂದಿದೆ.
ಭಾರತ-ಚೀನಾ ಉದ್ವಿಗ್ನತೆಯ ನಡುವೆ 'ಸಂಬಂಧ ಮುಖ್ಯ' ಎಂದು ವಿದೇಶಾಂಗ ಸಚಿವರು ಹೇಳಿದ್ದೇಕೆ?
ರಕ್ಷಣಾ ತಜ್ಞರ ಪ್ರಕಾರ ಬಲಿಪಶುಗಳಾಗುವ ಮೂಲಕ ಇತರರನ್ನು ಗೊಂದಲಗೊಳಿಸುವ ಚೀನಾದ ಬಹಳ ಹಳೆಯ ತಂತ್ರದ ಭಾಗ ಇದು ಎನ್ನಲಾಗಿದೆ.