ಭಾರತ - ಚೀನಾ ಗಡಿ ಉದ್ವಿಗ್ನತೆ ಹಿನ್ನಲೆಯಲ್ಲಿ ಎರಡೂ ದೇಶಗಳ ರಕ್ಷಣಾ ಸಚಿವರ ಸಭೆ

ರಷ್ಯಾದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಆಯೋಜಿಸಿರುವ ಈ ಮಹತ್ವದ ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಬುಧವಾರ ರಷ್ಯಾಕ್ಕೆ ತೆರಳಿದರು. 

Last Updated : Sep 2, 2020, 11:20 AM IST
  • ಭಾರತ ಮತ್ತು ಚೀನಾ ದೇಶಗಳ ರಕ್ಷಣಾ ಸಚಿವರ ಸಭೆ
  • ಮೂರು ದಿನಗಳ ರಷ್ಯಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಮಾಸ್ಕೋ ತಲುಪಲಿದ್ದಾರೆ.
  • ರಷ್ಯಾ ಭೇಟಿಯ ಸಮಯದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ
ಭಾರತ - ಚೀನಾ ಗಡಿ ಉದ್ವಿಗ್ನತೆ ಹಿನ್ನಲೆಯಲ್ಲಿ ಎರಡೂ ದೇಶಗಳ ರಕ್ಷಣಾ ಸಚಿವರ ಸಭೆ title=

ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನತೆ ಹಿನ್ನಲೆಯಲ್ಲಿ ಭಾರೀ ಮಹತ್ವದ ಭಾರತ ಮತ್ತು ಚೀನಾ ದೇಶಗಳ ರಕ್ಷಣಾ ಸಚಿವರ ಸಭೆ (Diffence Ministers Meet) ರಷ್ಯಾದಲ್ಲಿ ನಡೆಯಲಿದೆ. ಇದು ಭಾರತ ಮತ್ತು ಚೀನಾ (India China) ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯ ಬಳಿಕ ನಡೆಯುತ್ತಿರುವ ಮೊದಲ ಸಭೆಯಾಗಿದೆ.

ರಷ್ಯಾದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಆಯೋಜಿಸಿರುವ ಈ ಮಹತ್ವದ ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಬುಧವಾರ ರಷ್ಯಾಕ್ಕೆ ತೆರಳಿದರು. 

ಮೂರು ದಿನಗಳ ರಷ್ಯಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಮಾಸ್ಕೋ ತಲುಪಲಿದ್ದಾರೆ. ತಮ್ಮ ರಷ್ಯಾ ಭೇಟಿಯ ಸಮಯದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಕ್ಷಣಾ  ಸಚಿವಾಲಯದ ಮೂಲಗಳು ತಿಳಿಸಿವೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಸಭೆಯು ಪ್ರಾದೇಶಿಕ ಭದ್ರತಾ ಸನ್ನಿವೇಶದ ಕುರಿತು ಉದ್ದೇಶಪೂರ್ವಕವಾಗಿ ನಡೆಯುವ ನಿರೀಕ್ಷೆಯಿದೆ. ಭಾರತ ಮತ್ತು ಚೀನಾ ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಹಲವಾರು ರಕ್ಷಣಾ ಖರೀದಿ ಕಾರ್ಯಕ್ರಮಗಳ ಅನುಷ್ಠಾನವನ್ನು ತ್ವರಿತಗೊಳಿಸುವ ಉದ್ದೇಶದಿಂದ ರಾಜನಾಥ್ ಸಿಂಗ್ ತಮ್ಮ ರಷ್ಯಾದ ಸಹವರ್ತಿ ಸೆರ್ಗೆ ಶೋಯಿಗು ಮತ್ತು ಹಲವಾರು ಉನ್ನತ ಮಿಲಿಟರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಚೀನಾದೊಂದಿಗೆ ಹೆಚ್ಚಿದ ಉದ್ವಿಗ್ನತೆ; ಅಲರ್ಟ್ ಆಗಿರುವಂತೆ ಸೇನೆಗೆ ಗೃಹ ಸಚಿವಾಲಯದ ಆದೇಶ

ಭಾರತ-ಚೀನಾ ರಕ್ಷಣಾ ಮಂತ್ರಿಗಳ ಸಭೆ ಪೂರ್ವ ಲಡಾಕ್‌ನಲ್ಲಿ ಎರಡು ರಾಷ್ಟ್ರಗಳಿಗೆ ಹೊಂದಿಕೊಂಡಿರುವ ಕಡಿದಾದ ಗಡಿ ನಿಲುಗಡೆಗೆ ಸಂಬಂಧಿಸಿದಂತೆ ನಡೆಯುತ್ತಿದೆ. ಸಭೆಯಲ್ಲಿ ಚೀನಾದ ರಕ್ಷಣಾ ಸಚಿವ ಜನರಲ್ ವೀ ಫೆಂಗ್ ಅವರು ಭಾಗವಹಿಸಲಿದ್ದಾರೆ. ಆದರೆ ಪಾಕಿಸ್ತಾನದ ರಕ್ಷಣಾ ಸಚಿವರ ಜತೆಗಿನ ಸಭೆ ನಿರ್ಧಾರವಾಗಿಲ್ಲ ಎನ್ನಲಾಗಿದೆ.

ಶಾಂಘೈ ಸಹಕಾರ ಸಂಸ್ಥೆ (SCO) ಘಟನೆಯ ಹೊರತಾಗಿ‌ ರಾಜನಾಥ್ ಸಿಂಗ್ ಮತ್ತು ವೀ ಫೆಂಗ್ ನಡುವೆ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಅಂತಹ ಯಾವುದೇ ಯೋಜನೆ ಇಲ್ಲ ಎಂದು ರಕ್ಷಣಾ ಇಲಾಖೆ ಅಭಿಪ್ರಾಯಪಟ್ಟಿರುವುದಾಗಿ ಪಿಟಿಐ ವರದಿ ಮಾಡಿದೆ.

ಭಾರತ-ಚೀನಾ ವ್ಯಾಪಾರ ಸಂಬಂಧಗಳಲ್ಲಿನ ಕಹಿ, ಬಂದರುಗಳಲ್ಲಿನ ಉದ್ವಿಗ್ನತೆಗೆ ಪುರಾವೆ

ಜೂನ್‌ ತಿಂಗಳಲ್ಲೂ ಕೂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ರಷ್ಯಾಕ್ಕೆ ಭೇಟಿ ನೀಡಿದ್ದರು. ಜೂನ್ ಬಳಿಕ ಇದು ಅವರ ಎರಡನೇ ಭೇಟಿಯಾಗಿದೆ. ಎರಡನೇ ವಿಶ್ವಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸೋವಿಯತ್ ಜಯಗಳಿಸಿದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಜೂನ್ 24ರಂದು ಮಾಸ್ಕೋದಲ್ಲಿ ನಡೆದ ವಿಜಯ ದಿನದ ಮೆರವಣಿಗೆಯಲ್ಲಿ ರಾಜನಾಥ್ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು.

ಸೆಪ್ಟೆಂಬರ್ 10ರಂದು ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO)  ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳುವಂತೆ ರಷ್ಯಾವು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಆಹ್ವಾನಿಸಿದೆ.

Trending News