ನವದೆಹಲಿ : ದೆಹಲಿಯ ಉದ್ದೇಶಿತ ಸೈನಿಕ ಶಾಲೆಗೆ ಶಹೀದ್ ಭಗತ್ ಸಿಂಗ್ ಹೆಸರಿಡುವುದಾಗಿ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (CM Arvind Kejriwal) ಘೋಷಿಸಿದ್ದಾರೆ. 14 ಎಕರೆ ಜಾಗದಲ್ಲಿ ಜರೋಡಾ ಕಲಾನ್‌ನಲ್ಲಿ ನಿರ್ಮಾಣವಾಗಲಿರುವ ಈ ಶಾಲೆ ಹಾಸ್ಟೆಲ್‌ ಸೌಲಭ್ಯ ಹೊಂದಿರಲಿದೆ. ಈ ಶಾಲೆಯ ಹೆಸರು ಶಹೀದ್ ಭಗತ್ ಸಿಂಗ್ (Bhagat Singh) ಆರ್ಮ್ಸ್ ಪ್ರಿಪರೇಟರಿ ಸ್ಕೂಲ್. ಅಲ್ಲಿ  ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಈ ವಿಶೇಷ ಸೈನಿಕ ಶಾಲೆಯ ಎಲ್ಲಾ ವೆಚ್ಚವನ್ನು ದೆಹಲಿ ಸರ್ಕಾರ (Delhi Government)ಭರಿಸಲಿದೆ.


COMMERCIAL BREAK
SCROLL TO CONTINUE READING

 200 ಸೀಟುಗಳಿಗೆ 18000 ಅರ್ಜಿಗಳು :
 ಮಾರ್ಚ್ 23   'ಭಗತ್ ಸಿಂಗ್  (Bhagat Singh) ಹುತಾತ್ಮರಾದ ದಿನ.ರಾಜಧಾನಿಯಲ್ಲಿ ಶಾಲೆಯನ್ನು ಸ್ಥಾಪಿಸುವುದಾಗಿ ಡಿಸೆಂಬರ್ 2020 ರಲ್ಲಿ  ನಮ್ಮ ಸರ್ಕಾರವು   ಘೋಷಿಸಿತ್ತು. ಆ ಶಾಲೆಯಲ್ಲಿ ವಿದ್ಯಾರ್ಥಿಗಳು ಸೈನ್ಯ, ಎನ್‌ಡಿಎ ಮತ್ತು ಇತರ ಸಶಸ್ತ್ರ ಭದ್ರತಾ ಪಡೆಗಳಿಗೆ  ಸಿದ್ದತೆ ನಡೆಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal)ತಿಳಿಸಿದ್ದಾರೆ. 


ಇದನ್ನೂ ಓದಿ : CUCET 2022-23: University ಪ್ರವೇಶಕ್ಕೆ ಇರುವ ನಿಯಮಗಳಲ್ಲಿ ಬದಲಾವಣೆ, ಹೊಸ ನಿಯಮಗಳು ನಿಮಗೂ ತಿಳಿದಿರಲಿ


ಈ ಶಾಲೆಯಲ್ಲಿ ವಿದ್ಯಾರ್ಥಿಗಳು 9 ಮತ್ತು 11 ನೇ ತರಗತಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಈ ಎರಡು ತರಗತಿಗಳಲ್ಲಿ ತಲಾ 100 ಸೀಟುಗಳಿರುತ್ತವೆ. ಈಗ ಲಭ್ಯವಿರುವ 200 ಸೀಟುಗಳಿಗೆ 18000 ಅರ್ಜಿಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ (Sainik School in Delhi).  


ಮಾರ್ಚ್ 27 ಮತ್ತು 28 ರಂದು ಪ್ರವೇಶ ಪರೀಕ್ಷೆ : 
ಅಧಿಕಾರಿಗಳ ಮೌಲ್ಯವನ್ನು ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಪರಿಣಿತ ಅಧ್ಯಾಪಕರಿದ್ದು, ಇದರಲ್ಲಿ ನಿವೃತ್ತ ಸೇನೆ  ನೌಕಾಪಡೆ (Indian Navy) ಮತ್ತು ವಾಯುಪಡೆಯ (Indian Airforce) ಅಧಿಕಾರಿಗಳನ್ನು ತರಬೇತಿಗಾಗಿ ಕರೆತರಲಾಗುತ್ತದೆ. 9ನೇ ತರಗತಿ ಪ್ರವೇಶಕ್ಕೆ ಮಾರ್ಚ್ 27ರಂದು ಪರೀಕ್ಷೆ ನಡೆಯುತ್ತಿದ್ದು, 11ನೇ ತರಗತಿಗೆ ಮಾರ್ಚ್ 28ರಂದು ಪರೀಕ್ಷೆ ನಡೆಯಲಿದೆ. ಇದು ಮೊದಲ face ಟೆಸ್ಟ್ ಆಗಿರಲಿದೆ.  ದೆಹಲಿಯ ಸರ್ಕಾರಿ ಶಾಲೆಗಳನ್ನು (Delhi Government School) ಉನ್ನತ ದರ್ಜೆಗೆ ಏರಿಸುವ ಉದ್ದೇಶದಿಂದ ಅರವಿಂದ್ ಕೇಜ್ರಿವಾಲ್ ಸರ್ಕಾರವು ದೇಶ ಮತ್ತು ವಿದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಂದ 200 ಶಿಕ್ಷಕರಿಗೆ ತರಬೇತಿ ನೀಡಿದೆ ಎನ್ನುವುದು  ಗಮನಿಸಬೇಕಾದ ಸಂಗತಿ. 


ಇದನ್ನೂ ಓದಿ : ವಿರಾಟ್ ರಾಮಾಯಣ ದೇವಾಲಯ ನಿರ್ಮಾಣಕ್ಕೆ 2.5 ಕೋಟಿ ಮೌಲ್ಯದ ಭೂಮಿ ದಾನ ನೀಡಿದ ಮುಸ್ಲಿಂ ಕುಟುಂಬ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.