ನವದೆಹಲಿ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕ್ರಾಂತಿಕಾರಿ ಭಗತ್ ಸಿಂಗ್ ಅವರ ಪುಣ್ಯತಿಥಿಯಂದು ನಾಳೆ (ಮಾರ್ಚ್ 23) ರಾಜ್ಯದಲ್ಲಿ ರಜೆ ಘೋಷಿಸಿದ್ದಾರೆ.
ಪಂಜಾಬ್ನ ಜನರು ಭಗತ್ ಸಿಂಗ್(Bhagat Singh) ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್ಗೆ ಭೇಟಿ ನೀಡಿ ನಮನ ಸಲ್ಲಿಸಲು ರಜೆಯನ್ನು ಅನುಮತಿಸಲಾಗುವುದು ಎಂದು ವಿಧಾನಸೌಧದಲ್ಲಿ ಸಿಎಂ ಮಾನ್ ಹೇಳಿದರು. ಪಂಜಾಬ್ ಅಸೆಂಬ್ಲಿಯಲ್ಲಿ ಭಗತ್ ಸಿಂಗ್ ಮತ್ತು ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸುವ ನಿರ್ಣಯವನ್ನೂ ಇಂದು ಅಂಗೀಕರಿಸಲಾಗಿದೆ.
ಇದನ್ನೂ ಓದಿ : CUCET 2022-23: University ಪ್ರವೇಶಕ್ಕೆ ಇರುವ ನಿಯಮಗಳಲ್ಲಿ ಬದಲಾವಣೆ, ಹೊಸ ನಿಯಮಗಳು ನಿಮಗೂ ತಿಳಿದಿರಲಿ
ಗಮನಾರ್ಹವೆಂದರೆ, ಮಾರ್ಚ್ 16 ರಂದು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್ನಲ್ಲಿ ಆಯೋಜಿಸಲಾದ ಭವ್ಯ ಸಮಾರಂಭದಲ್ಲಿ ಭಗವಂತ್ ಮಾನ್(Bhagwant Mann) ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಮಾರಂಭದ ಮೊದಲು ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಮಾನ್(CM Mann), ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ ಜನರನ್ನು ಆಹ್ವಾನಿಸಿದ್ದಾರೆ, ಸಮಾರಂಭದಲ್ಲಿ ಪುರುಷರು 'ಬಸಂತಿ (ಹಳದಿ)' ಪೇಟಗಳನ್ನು ಮತ್ತು ಮಹಿಳೆಯರು ಹಳದಿ 'ದುಪಟ್ಟಾ (ಶಾಲು)' ಧರಿಸಲು ಒತ್ತಾಯಿಸಿದರು.
ಹಳದಿ ಬಣ್ಣವು ಕ್ರಾಂತಿ ಮತ್ತು ತ್ಯಾಗದ ಮನೋಭಾವವನ್ನು ಸೂಚಿಸುತ್ತದೆ ಮತ್ತು ಭಗತ್ ಸಿಂಗ್(Bhagat Singh) ಅವರೊಂದಿಗೆ ಗುರುತಿಸಲ್ಪಟ್ಟಿದೆ. ಇದು ವಸಂತ ಋತುವನ್ನು ಸ್ವಾಗತಿಸುವುದರೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ವಿರಾಟ್ ರಾಮಾಯಣ ದೇವಾಲಯ ನಿರ್ಮಾಣಕ್ಕೆ 2.5 ಕೋಟಿ ಮೌಲ್ಯದ ಭೂಮಿ ದಾನ ನೀಡಿದ ಮುಸ್ಲಿಂ ಕುಟುಂಬ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.