ವಿರಾಟ್ ರಾಮಾಯಣ ದೇವಾಲಯ ನಿರ್ಮಾಣಕ್ಕೆ 2.5 ಕೋಟಿ ಮೌಲ್ಯದ ಭೂಮಿ ದಾನ ನೀಡಿದ ಮುಸ್ಲಿಂ ಕುಟುಂಬ

Virat Ramayan Mandir Construction: ಮಹಾವೀರ ಮಂದಿರ ಟ್ರಸ್ಟ್ ಮುಖ್ಯಸ್ಥ ಆಚಾರ್ಯ ಮಾತನಾಡಿ, ಮುಸ್ಲಿಂ ಕುಟುಂಬ ಸಾಮಾಜಿಕ ಸೌಹಾರ್ದತೆ ಮತ್ತು ಸಹೋದರತ್ವಕ್ಕೆ ಅತ್ಯುತ್ತಮ ಮಾದರಿಯಾಗಿದೆ ಎಂದಿದ್ದಾರೆ. ಮುಸಲ್ಮಾನರ ಸಹಾಯವಿಲ್ಲದೆ ಮಂದಿರ ನಿರ್ಮಾಣದ ಕನಸು ನನಸಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 

Written by - Ranjitha R K | Last Updated : Mar 22, 2022, 11:12 AM IST
  • 500 ಕೋಟಿ ವೆಚ್ಚದಲ್ಲಿ ಅತಿ ದೊಡ್ಡ ದೇವಾಲಯ ನಿರ್ಮಾಣ
  • ಬಿಹಾರದ ಪೂರ್ವ ಚಂಪಾರಣ್‌ನಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯ
  • ಎತ್ತರದ ಶಿಖರಗಳೊಂದಿಗೆ 18 ದೇವಾಲಯಗಳನ್ನು ಹೊಂದಿರಲಿದೆ
ವಿರಾಟ್ ರಾಮಾಯಣ ದೇವಾಲಯ ನಿರ್ಮಾಣಕ್ಕೆ 2.5 ಕೋಟಿ ಮೌಲ್ಯದ ಭೂಮಿ ದಾನ ನೀಡಿದ  ಮುಸ್ಲಿಂ ಕುಟುಂಬ  title=
500 ಕೋಟಿ ವೆಚ್ಚದಲ್ಲಿ ಅತಿ ದೊಡ್ಡ ದೇವಾಲಯ ನಿರ್ಮಾಣ (photo zee news)

ಪಾಟ್ನಾ: ಬಿಹಾರದ ಮುಸ್ಲಿಂ ಕುಟುಂಬವೊಂದು (Muslim Family) ಕೋಮು ಸೌಹಾರ್ದತೆಗೆ ಮಾದರಿಯಾಗಿದೆ.   ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಿಶ್ವದ ಅತಿ ದೊಡ್ಡ ಹಿಂದೂ ಮಂದಿರ ವಿರಾಟ್ ರಾಮಾಯಣ ದೇವಾಲಯಕ್ಕೆ 2.5 ಕೋಟಿ ರೂ. ಮೌಲ್ಯದ ಜಮೀನನ್ನು ದಾನ  ಮಾಡಿದೆ (Virat Ramayan Mandir). 

ದೇವಸ್ಥಾನಕ್ಕೆ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ :
ಗುವಾಹಟಿಯಲ್ಲಿ ವಾಸಿಸುತ್ತಿರುವ ಪೂರ್ವ ಚಂಪಾರಣ್‌ನ ಉದ್ಯಮಿ ಇಶ್ತಿಯಾಕ್ ಅಹ್ಮದ್ ಖಾನ್ ಅವರು, ಈ ಭೂಮಿಯನ್ನು ದಾನ ಮಾಡಿದ್ದಾರೆ ಎಂದು ಮಹಾವೀರ ಮಂದಿರ ಟ್ರಸ್ಟ್‌ನ ಮುಖ್ಯಸ್ಥ ಆಚಾರ್ಯ ಕಿಶೋರ್ ಕುನಾಲ್ ( Kishore Kunal) ತಿಳಿಸಿದ್ದಾರೆ. ದೇವಸ್ಥಾನ ನಿರ್ಮಾಣಕ್ಕಾಗಿ ಭೂಮಿ ದಾನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ವ ಚಂಪಾರಣ್‌ನ ಕೇಸರಿಯಾ ಉಪವಿಭಾಗದ ರಿಜಿಸ್ಟ್ರಾರ್ ಕಚೇರಿಯಲ್ಲಿ ಇತ್ತೀಚೆಗೆ ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ (Virat Ramayan Mandir). 

ಇದನ್ನೂ ಓದಿ : ರಾತ್ರಿ ಕೆಲಸ ಮುಗ್ಸಿ ಮನೆಗೆ 10 ಕಿ.ಮೀ. ಓಡಿಕೊಂಡೇ ಹೋಗ್ತಾನೆ ಈತ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

ಎರಡು ಸಮುದಾಯಗಳ ನಡುವಿನ ಸಾಮಾಜಿಕ ಸಾಮರಸ್ಯದ ಉದಾಹರಣೆ :
ಇಶ್ತಿಯಾಕ್ ಅಹ್ಮದ್ ಖಾನ್ ಮತ್ತು ಅವರ ಕುಟುಂಬದವರ ಈ ದೇಣಿಗೆಯು ಎರಡು ಸಮುದಾಯಗಳ ನಡುವಿನ ಸಾಮಾಜಿಕ ಸಾಮರಸ್ಯ ಮತ್ತು ಸಹೋದರತ್ವಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಆಚಾರ್ಯ ಕಿಶೋರ್ ಕುನಾಲ್ ಹೇಳಿದ್ದಾರೆ. ಮುಸ್ಲಿಮರ ಸಹಾಯವಿಲ್ಲದೇ ಈ ಮಹತ್ವಾಕಾಂಕ್ಷೆಯ ಯೋಜನೆ ಸಾಕಾರಗೊಳ್ಳುವುದು ಕಷ್ಟಸಾಧ್ಯ ಎಂದಿದ್ದಾರೆ . 

ಮಂದಿರ ನಿರ್ಮಾಣಕ್ಕೆ 125 ಎಕರೆ ಭೂಮಿ  :
ಈ ದೇವಾಲಯ ನಿರ್ಮಾಣಕ್ಕಾಗಿ ಮಹಾವೀರ ಮಂದಿರ ಟ್ರಸ್ಟ್ ಇಲ್ಲಿಯವರೆಗೆ 125 ಎಕರೆ ಭೂಮಿಯನ್ನು ಪಡೆದುಕೊಂಡಿದೆ. ಟ್ರಸ್ಟ್‌ಗೆ ಶೀಘ್ರದಲ್ಲೇ ಈ ಪ್ರದೇಶದಲ್ಲಿ ಇನ್ನೂ 25 ಎಕರೆ ಭೂಮಿ ಸಿಗಲಿದೆ ಎಂದು ಕಿಶೋರ್ ಕುನಾಲ್ ಹೇಳಿದ್ದಾರೆ. 

ಇದನ್ನೂ ಓದಿ : SBI ನೀಡುತ್ತಿದೆ ಉತ್ತಮ ಅವಕಾಶ! ಈ ದಾಖಲೆಗಳನ್ನು ಸಲ್ಲಿಸಿ, ಪ್ರತಿ ತಿಂಗಳು ₹80 ಸಾವಿರ ಗಳಿಸಿ!

ವಿರಾಟ್ ರಾಮಾಯಣ ದೇವಾಲಯವು  (Virat Ramayana Mandir) 215 ಅಡಿ ಎತ್ತರವಿರುವ ಕಾಂಬೋಡಿಯಾದ ವಿಶ್ವಪ್ರಸಿದ್ಧ 12 ನೇ ಶತಮಾನದ ಅಂಕೋರ್ ವಾಟ್ ಸಂಕೀರ್ಣಕ್ಕಿಂತ ಎತ್ತರವಾಗಿರಲಿದೆ ಎಂದು ಹೇಳಲಾಗುತ್ತದೆ. ಪೂರ್ವ ಚಂಪಾರಣ್‌ನ ಸಂಕೀರ್ಣವು ಎತ್ತರದ ಶಿಖರಗಳೊಂದಿಗೆ 18 ದೇವಾಲಯಗಳನ್ನು ಹೊಂದಿರುತ್ತದೆ. ಅದರ ಶಿವ ದೇವಾಲಯವು (Shiva Temple) ವಿಶ್ವದ ಅತಿದೊಡ್ಡ ಶಿವಲಿಂಗವನ್ನು ಹೊಂದಿರುತ್ತದೆ ಎನ್ನಲಾಗಿದೆ.  ಈ ಮಂದಿರದ ಒಟ್ಟು ನಿರ್ಮಾಣ ವೆಚ್ಚ ಸುಮಾರು 500 ಕೋಟಿ ಎಂದು ಅಂದಾಜಿಸಲಾಗಿದೆ. ದೆಹಲಿಯ ನೂತನ ಸಂಸತ್ ಭವನ ನಿರ್ಮಾಣದಲ್ಲಿ ತೊಡಗಿರುವ ತಜ್ಞರಿಂದ ಟ್ರಸ್ಟ್ ಶೀಘ್ರದಲ್ಲೇ ಈ ಬಗ್ಗೆ ಸಲಹೆ ಪಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News