ನವದೆಹಲಿ: ದೇಶದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದಂತೆ UGC ಮಹತ್ವದ ಘೋಷಣೆ ಮಾಡಿದೆ. ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ಪ್ರಕಾರ, ಎಲ್ಲಾ 45 ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯನ್ನು (CUET) ಜುಲೈ ಮೊದಲ ವಾರದಲ್ಲಿ ನಡೆಸಲಾಗುವುದು ಎನ್ನಲಾಗಿದೆ. ಸಾಮಾನ್ಯವಾಗಿ, ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ಇದನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುತ್ತದೆ. CUET ಪರೀಕ್ಷಾ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಏಪ್ರಿಲ್ ಮೊದಲ ವಾರದಿಂದ ಆರಂಭವಾಗಲಿದೆ.
CUET ಸ್ಕೋರ್ ಆಧಾರದ ಮೇಲೆ ಪ್ರವೇಶವನ್ನು ಮಾಡಲಾಗುತ್ತದೆ
ಈ ಕುರಿತು ಮಾತನಾಡಿರುವ ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್, ವಿಶ್ವವಿದ್ಯಾಲಯದ ಪದವಿ ಕೋರ್ಸ್‌ಗಳಿಗೆ ಪ್ರವೇಶವನ್ನು CUET ಅಂಕಗಳ ಆಧಾರದ ಮೇಲೆ ನೀಡಲಾಗುವದು ಎಂದಿದ್ದಾರೆ. ಇದರಲ್ಲಿ 12 ನೇ ತರಗತಿಯ ಬೋರ್ಡ್ ಫಲಿತಾಂಶಗಳು ಯಾವುದೇ ವೆಟೆಜ್ ಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರರ್ಥ ಈಗ 12 ನೇ ತರಗತಿಯ ಫಲಿತಾಂಶವು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶಕ್ಕೆ ಆಧಾರವಾಗಿರುವುದಿಲ್ಲ. ಪರೀಕ್ಷೆಯ ನಂತರ ಎನ್‌ಟಿಎ (National Testing Agency) ಬಿಡುಗಡೆ ಮಾಡುವ ಮೆರಿಟ್ ಲಿಸ್ಟ್ ಆಧಾರದ ಮೇಲೆ ಮಾತ್ರ ವಿದ್ಯಾರ್ಥಿಗಳ ಪ್ರವೇಶ ಸಾಧ್ಯ ಎನ್ನಲಾಗಿದೆ.
ಇದನ್ನೂ ಓದಿ-UGC Big Announcement: ವಿಶ್ವವಿದ್ಯಾಲಯಗಳಲ್ಲಿ ಪಾಠ ಹೇಳಲು PhD ಅನಿವಾರ್ಯವಲ್ಲ
ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳೂ ಇರಲಿವೆ
ಎಕ್ಸಾಮ್ ಪ್ಯಾಟರ್ನ್ (Cucet 2022 Exam Date) ಕುರಿತು ಹೇಳುವುದಾದರೆ, CUET ಪ್ಯಾಟರ್ನ್ ನಲ್ಲಿ NCERT ಆಧಾರಿತ ಮಲ್ಟಿಪಲ್ ಚಾಯಿಸ್ ಪ್ರಶ್ನೆಗಳ ಜೊತೆಗೆ ಋಣಾತ್ಮಕ ಅಂಕಗಳು ಕೂಡ ಅನ್ವಯಿಸಲಿವೆ.
ಇದನ್ನೂ ಓದಿ-Board Exams 2022: ಆಫ್‌ಲೈನ್ ಬೋರ್ಡ್ ಪರೀಕ್ಷೆ ರದ್ದುಗೊಳಿಸುವ ಮನವಿ ಆಲಿಸಲು ಸುಪ್ರೀಂ ಒಪ್ಪಿಗೆ
CUET ಪಠ್ಯಕ್ರಮ ಹೇಗಿರುತ್ತದೆ? (Cucet 2022 Syllabus Pdf)
45 ಕೇಂದ್ರೀಯ ವಿಶ್ವವಿದ್ಯಾನಿಲಯಗಳು (Central University In India) ಯುಜಿಸಿಯಿಂದ ಆರ್ಥಿಕ ಸಹಾಯ ಪಡೆಯುತ್ತವೆ ಎಂಬುದು ಇಲ್ಲಿ ಗಮನಾರ್ಹ. CUETಯ ಪಠ್ಯಕ್ರಮವು (Cucet 2022 Syllabus Pdf Download) NCERTಯ 12 ನೇ ತರಗತಿಯ ಪಠ್ಯಕ್ರಮವನ್ನು ಆಧರಿಸಿ ಇರಲಿದೆ ಎಂದು ಎಂ ಜಗದೇಶ್ ಕುಮಾರ್ ಹೇಳಿದ್ದಾರೆ. CUET ವಿಭಾಗ-1A, ವಿಭಾಗ-1B, ಸಾಮಾನ್ಯ ಪರೀಕ್ಷೆ ಮತ್ತು ಕೋರ್ಸ್-ನಿರ್ದಿಷ್ಟ ವಿಷಯಗಳನ್ನು ಹೊಂದಿರಲಿದೆ. ವಿಭಾಗ-1A ಕಡ್ಡಾಯವಾಗಿರುತ್ತದೆ, ಇದು 13 ಭಾಷೆಗಳ ಇರಲಿದೆ ಮತ್ತು ಅಭ್ಯರ್ಥಿಗಳು ತಮ್ಮ ಆಯ್ಕೆಯ ಭಾಷೆಯನ್ನು ಆಯ್ದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಜೆಎನ್‌ಯು ಉಪಕುಲಪತಿ ಎಂ.ಜಗದೇಶ್ ಕುಮಾರ್ ಯುಜಿಸಿ ಅಧ್ಯಕ್ಷರಾಗಿ ನೇಮಕ
ಕೋಟಾ ಮೇಲೆ ಯಾವುದೇ ಪ್ರಭಾವವಿಲ್ಲ
ವಿಶ್ವವಿದ್ಯಾನಿಲಯದ ಮೀಸಲಾತಿ ನೀತಿಯ ಮೇಲೆ CUET ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಂ ಜಗದೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. CUET ನಂತರ ಯಾವುದೇ ಕೇಂದ್ರೀಯ ಕೌನ್ಸೆಲಿಂಗ್ ನಡೆಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆ ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ ಇರುವ ಮಾನದಂಡಗಳ ಪ್ರಕಾರವೇ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು ಎಂದು ಜಗದೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.