ಮಹಾರಾಷ್ಟ್ರ ರಾಜಕೀಯ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಶಿವಸೇನೆ ಹಿರಿಯ ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಬಂಡಾಯ ನಾಯಕರನ್ನು ಮರಳಿ ಪಕ್ಷಕ್ಕೆ ಕರೆತರಬೇಕು ಎಂದು ಶತಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ ದಾವೂದ್‌ ಇಬ್ರಾಹಿಂ ಹೆಸರು ಮಹಾ ಬಿಕ್ಕಟ್ಟಿನಲ್ಲಿ ಸೇರಿಕೊಂಡಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Maharashtra Political crisis : ಉದ್ಧವ್ ಠಾಕ್ರೆಗೆ ಬಿಗ್ ಶಾಕ್ : ಶಿಂಧೆ ಬಣ ಸೇರಲು ಗುವಾಹಟಿ ತಲುಪಿದ ಮತ್ತೆ 4 ಜನ ಶಾಸಕರು!


ಹಲವಾರು ದುಷ್ಕೃತ್ಯಗಳನ್ನು ಮಾಡಿ, ಅಮಾಯಕರ ಬಲಿ ಪಡೆದ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ನೇರ ಸಂಪರ್ಕ ಹೊಂದಿರುವ ಜನರನ್ನು ಬಾಳ್ ಠಾಕ್ರೆ ಅವರ ಪಕ್ಷವು ಹೇಗೆ ಬೆಂಬಲಿಸುತ್ತದೆ ಎಂದು ಏಕನಾಥ್ ಶಿಂಧೆ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಇಂತಹ ಬೆಂಬಲವನ್ನು ವಿರೋಧಿಸಿ ತಮ್ಮ ಮತ್ತು ಇತರ ಶಾಸಕರಿಂದ ಬಂಡಾಯದ ಬಾವುಟ ಹಾರಿಸಿದ ಶಿಂಧೆ, ಬಾಳ್ ಠಾಕ್ರೆಯವರ ಶಿವಸೇನೆಯನ್ನು ಉಳಿಸಲು ತಮ್ಮ ಪ್ರಾಣವನ್ನು ಕೊಡಲು ಸಿದ್ಧ ಎಂದು ಅವರು ಹೇಳಿದ್ದಾರೆ. ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ಭಾನುವಾರ ರಾತ್ರಿ ಟ್ವೀಟ್‌ಗಳನ್ನು ಮಾಡಿದ್ದಾರೆ. 


ಏಕನಾಥ್ ಶಿಂಧೆ ಟ್ವೀಟ್ ಮಾಡಿ, "ಮುಂಬೈನಲ್ಲಿ ಬಾಂಬ್‌ ದಾಳಿಗಳನ್ನು ನಡೆಸಿ ಅಮಾಯಕ ಮುಂಬೈ ಜನರನ್ನು ಕೊಂದ ದಾವೂದ್‌ನೊಂದಿಗೆ ನೇರ ಸಂಪರ್ಕ ಹೊಂದಿರುವವರನ್ನು ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಹೇಗೆ ಬೆಂಬಲಿಸುತ್ತಾರೆ? ಇದನ್ನು ವಿರೋಧಿಸಲು ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಹೆಜ್ಜೆ ನಮ್ಮನ್ನು ಸಾವಿನ ಅಂಚಿಗೆ ಕೊಂಡೊಯ್ದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ. 


ಮತ್ತೊಂದು ಟ್ವೀಟ್‌ನಲ್ಲಿ, ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ಅವರು "ಶಿವಸೇನೆ ಮತ್ತು ಬಾಳ್ ಠಾಕ್ರೆ ಅವರ ಸಿದ್ಧಾಂತವನ್ನು ರಕ್ಷಿಸಲು ಸತ್ತರೆ ನಾನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ" ಎಂದು ಹೇಳಿದ್ದಾರೆ. ಈ ಎರಡೂ ಟ್ವೀಟ್‌ಗಳಲ್ಲಿ ಅವರು ಶಿವಸೇನೆ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರನ್ನು ಟ್ಯಾಗ್ ಮಾಡಿದ್ದಾರೆ. 


ಇದನ್ನೂ ಓದಿ: ʼHow Can You Stopʼ, ಪೊಲೀಸರಿಗೇ ಅವಾಜ್‌ ಹಾಕಿದ ಈ ಪಕ್ಷದ ಅಭ್ಯರ್ಥಿ: ವಿಡಿಯೋ ವೈರಲ್‌


ಶಿವಸೇನೆಯ ಹಿರಿಯ ನಾಯಕ ಮತ್ತು ಕ್ಯಾಬಿನೆಟ್ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ 40 ಬಂಡಾಯ ಶಾಸಕರು ಜೂನ್ 22 ರಿಂದ ಅಸ್ಸಾಂ ರಾಜಧಾನಿ ಗುವಾಹಟಿಯ ಹೋಟೆಲ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದಕ್ಕೂ ಮುನ್ನ ಬಂಡಾಯ ಶಾಸಕರು ಸೂರತ್‌ನ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದರು. ರಾಜ್ಯದ ಮಹಾ ವಿಕಾಸ್ ಅಘಾಡಿ (ಎಂವಿಎ) ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಶಾಸಕರು ಕಣಕ್ಕಿಳಿದ ನಂತರ ಸರ್ಕಾರ ಪತನದ ಭೀತಿಯಲ್ಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.