ಶ್ರೀನಗರ : ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಜಮ್ಮು - ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಅವರು ಭಾನುವಾರ ಜಮ್ಮುವಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಫಾರೂಕ್ ಅಬ್ದುಲ್ಲಾ (Farooq Abdullah) ಅವರ ಹಾಸ್ಯ ಚಟಾಕಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿತು. ಇದೀಗ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

'ಹೆಂಡತಿಗೆ ಮುತ್ತಿಡಲೂ ಭಯ ಹುಟ್ಟಿಸಿದ ಕರೋನಾ' :
ಕಾರ್ಯಕ್ರಮದಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಕೊರೊನಾವೈರಸ್ (Coronavirus) ಬಹಳ ವಿಚಿತ್ರವಾದ ಸನ್ನಿವೇಶವನ್ನು ಉಂಟುಮಾಡಿದೆ ಮತ್ತು ಸಾಂಕ್ರಾಮಿಕ ರೋಗದ ನಂತರ ನಾನು ನನ್ನ ಹೆಂಡತಿಗೆ ಮುತ್ತು ಕೂಡ ಕೊಟ್ಟಿಲ್ಲ ಎಂದು ಹೇಳಿದರು. ಇದನ್ನು ಕೇಳಿದೊಡನೆ ಅಲ್ಲಿದ್ದ ಜನರು ಜೋರಾಗಿ ನಗಲು ಪ್ರಾರಂಭಿಸಿದರು.


ಇದನ್ನೂ ಓದಿ - Coronavirus : ಸಸ್ಯಾಹಾರಿಗಳು, ಧೂಮಪಾನಿಗಳಿಗೆ ಕೊರೊನಾ ಕಾಟ ಕಡಿಮೆ - ಸಮೀಕ್ಷೆ


ಕೋವಿಡ್ - 19 (Covid 19) ಬಳಿಕ ಪರಿಸ್ಥಿತಿ ಬದಲಾಗಿದೆ, ಒಬ್ಬರು ಮತ್ತೊಬ್ಬರ ಕೈಕುಲುಕಲು ಅಥವಾ ತಬ್ಬಿಕೊಳ್ಳಲು ಹೆದರುತ್ತಾರೆ. ನಾನು ಸ್ವತಃ ನನ್ನ ಹೆಂಡತಿಯನ್ನು ತಬ್ಬಿಕೊಳ್ಳುವುದಿರಲಿ ಒಂದು ಕಿಸ್ ಮಾಡಲೂ ಹೆದರುತ್ತೇನೆ ಎಂಬುದನ್ನು ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಎಂದು ಫಾರೂಕ್ ಅಬ್ದುಲ್ಲಾ ಕರೋನಾ ತಂದೊಡ್ಡಿರುವ ಪರಿಸ್ಥಿತಿಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ.


ಬ್ರಿಟನ್‌ನಲ್ಲಿ ಹೈ ಸ್ಪೀಡ್ Corona ಹಾವಳಿ : ಪ್ರತಿ 30 ಸೆಕೆಂಡಿಗೆ ಓರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲು


'ಅಲ್ಲಾಹನು ಶೀಘ್ರದಲ್ಲೇ ರೋಗವನ್ನು ಗುಣಪಡಿಸಲಿ' :
ಕಾರ್ಯಕ್ರಮದಲ್ಲಿ, ಫಾರೂಕ್ ಅಬ್ದುಲ್ಲಾ, 'ಕೊರೊನಾವೈರಸ್ ಬಹಳಷ್ಟು ತೊಂದರೆಗಳನ್ನು ಉಂಟುಮಾಡಿದೆ. ಅಲ್ಲಾಹನು ಶೀಘ್ರದಲ್ಲೇ ಈ ರೋಗವನ್ನು ಗುಣಪಡಿಸಲಿ. 'ಕರೋನಾ ಲಸಿಕೆ ಬಂದಿದೆ, ಆದರೆ ಈ ಲಸಿಕೆ ಎಷ್ಟು ಪರಿಣಾಮಕಾರಿ ಎಂದು ಸಮಯ ಮಾತ್ರ ಹೇಳುತ್ತದೆ' ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.