ಬ್ರಿಟನ್‌ನಲ್ಲಿ ಹೈ ಸ್ಪೀಡ್ Corona ಹಾವಳಿ : ಪ್ರತಿ 30 ಸೆಕೆಂಡಿಗೆ ಓರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲು

ರಾಷ್ಟ್ರೀಯ ಆರೋಗ್ಯ ಸೇವೆಯ ಮುಖ್ಯ ಕಾರ್ಯನಿರ್ವಾಹಕ ಸೈಮನ್ ಸ್ಟೀವನ್ಸ್ ಅವರ ಪ್ರಕಾರ, ಆರೋಗ್ಯ ಕಾರ್ಯಕರ್ತರ ಮೇಲಿನ ಒತ್ತಡವು ಅಪಾಯಕಾರಿ ಹಂತ ತಲುಪುತ್ತಿದೆ. 'ಸತ್ಯಗಳು ಬಹಳ ಸ್ಪಷ್ಟವಾಗಿವೆ ಮತ್ತು ನಾನು ಅವುಗಳನ್ನು ಸಕ್ಕರೆ ಕೋಟ್ ಮಾಡಲು ಹೋಗುತ್ತಿಲ್ಲ. ಆಸ್ಪತ್ರೆಗಳು ತೀವ್ರ ಒತ್ತಡದಲ್ಲಿವೆ ಮತ್ತು ಸಿಬ್ಬಂದಿ ತೀವ್ರ ಒತ್ತಡದಲ್ಲಿದ್ದಾರೆ" ಎಂದು ಅವರು ಹೇಳಿದ್ದಾರೆ.

Written by - Yashaswini V | Last Updated : Jan 18, 2021, 10:00 AM IST
  • 'ಪರಿಸ್ಥಿತಿ ಇನ್ನೂ ಕೆಟ್ಟದಾಗಿರಬಹುದು' ಎಂದು ಎಚ್ಚರಿಸಿರುವ ರಾಷ್ಟ್ರೀಯ ಆರೋಗ್ಯ ಸೇವೆ
  • ಕ್ರಿಸ್‌ಮಸ್ ದಿನದಿಂದ ಹೆಚ್ಚಾಗಿ ಹರಡುತ್ತಿರುವ ಹೊಸ ಸ್ವರೂಪದ ಕೊರೋನಾ ವೈರಸ್
  • ಇಂಗ್ಲೆಂಡ್ ಪ್ರವೇಶಕ್ಕೆ ಕೋವಿಡ್ -19 ನೆಗೆಟೀವ್ ರಿಪೋರ್ಟ್ ತೋರಿಸುವುದು ಕಡ್ಡಾಯ
ಬ್ರಿಟನ್‌ನಲ್ಲಿ ಹೈ ಸ್ಪೀಡ್ Corona ಹಾವಳಿ : ಪ್ರತಿ 30 ಸೆಕೆಂಡಿಗೆ ಓರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲು title=
One coronavirus patient getting admitted in hospitals

ಬ್ರಿಟನ್ : ಹೊಸ ಸ್ವರೂಪದ ಕೊರೋನಾವೈರಸ್ (Mutant Corona Virus) ಹಾವಳಿಯಿಂದ ಬ್ರಿಟನ್ (Britain) ನಲುಗಿಹೋಗುತ್ತಿದೆ.‌ ಹೊಸ ರೂಪಾಂತರದ ಕೊರೋನಾ ವೈರಸ್ ಶರವೇಗದಲ್ಲಿ ಹರಡುತ್ತಿರುವುದರಿಂದ ಭಾರೀ ಆತಂಕ ನಿರ್ಮಾಣವಾಗಿದೆ.

ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ನೇತೃತ್ವದ ಬ್ರಿಟನ್ ಸರ್ಕಾರವು ಜನ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಇನ್ನಿಲ್ಲದಂತೆ ಮನವಿ ಮಾಡಿಕೊಂಡಿದೆ. ಸರ್ಕಾರದ ಮನವಿಯನ್ನು ಧಿಕ್ಕರಿಸಿ‌ ಹೊರಬಂದವರನ್ನು ಬಂಧಿಸಲು ಪ್ರಯತ್ನಿಸುತ್ತಿದೆ. ಆದರೂ ರಾಷ್ಟ್ರೀಯ ಆರೋಗ್ಯ ಸೇವೆಯ (National Health Service) ಮಾಹಿತಿ ಪ್ರಕಾರ ಇಂಗ್ಲೇಡಿನಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಹರಡುವುದು ಕಡಿಮೆ ಆಗಿಲ್ಲ. ಬದಲಿಗೆ ಇನ್ನಷ್ಟು ತೀವ್ರಗೊಂಡಿದೆ. ಸದ್ಯ 'ಪ್ರತಿ 30 ಸೆಕೆಂಡಿಗೆ ಒಬ್ಬರು ಕೊರೋನಾ ವೈರಸ್ ಪೀಡಿತರು ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದಾರೆ' ಕೇಳಿದರೆ ಭಯ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಷ್ಟ್ರೀಯ ಆರೋಗ್ಯ ಸೇವೆಯು 'ಪರಿಸ್ಥಿತಿ ಇನ್ನೂ ಕೆಟ್ಟದಾಗಿರಬಹುದು' ಎಂದು ಎಚ್ಚರಿಸಿದೆ. ರಾಷ್ಟ್ರೀಯ ಆರೋಗ್ಯ ಸೇವೆಯ ಮುಖ್ಯ ಕಾರ್ಯನಿರ್ವಾಹಕ ಸೈಮನ್ ಸ್ಟೀವನ್ಸ್ ಅವರ ಪ್ರಕಾರ, ಆರೋಗ್ಯ ಕಾರ್ಯಕರ್ತರ ಮೇಲಿನ ಒತ್ತಡವು ಅಪಾಯಕಾರಿ ಹಂತ ತಲುಪುತ್ತಿದೆ. 'ಸತ್ಯಗಳು ಬಹಳ ಸ್ಪಷ್ಟವಾಗಿವೆ ಮತ್ತು ನಾನು ಅವುಗಳನ್ನು ಸಕ್ಕರೆ ಕೋಟ್ ಮಾಡಲು ಹೋಗುತ್ತಿಲ್ಲ. ಆಸ್ಪತ್ರೆಗಳು ತೀವ್ರ ಒತ್ತಡದಲ್ಲಿವೆ ಮತ್ತು ಸಿಬ್ಬಂದಿ ತೀವ್ರ ಒತ್ತಡದಲ್ಲಿದ್ದಾರೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ - ಈ ರಾಜ್ಯದಲ್ಲಿ COVID-19 ಲಸಿಕೆಗೆ ತಾತ್ಕಾಲಿಕ ಸ್ಥಗಿತ..! ಕಾರಣವೇನು ಗೊತ್ತಾ?

ಕ್ರಿಸ್‌ಮಸ್ ರಜಾದಿನಗಳ ನಂತರ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. "ಕ್ರಿಸ್‌ಮಸ್ ದಿನದಿಂದ ಇಂಗ್ಲೆಂಡ್‌ನಾದ್ಯಂತ ಆಸ್ಪತ್ರೆಗಳಲ್ಲಿನ 15,000 ರೋಗಿಗಳು ಹೆಚ್ಚಾಗಿದ್ದಾರೆ. 30 ಆಸ್ಪತ್ರೆಗಳು ಕೊರೋನಾವೈರಸ್ (Coronavirus) ಪೀಡಿತ ರೋಗಿಗಳಿಂದ ತುಂಬಿಹೋಗಿವೆ" ಎಂದು ಸ್ಟೀವನ್ಸ್ ಹೇಳಿದ್ದಾರೆ.

ಕಳೆದ ಕೆಲವು ತಿಂಗಳುಗಳಿಗಿಂತ ಹೆಚ್ಚು ಜನರು ಮಾರಣಾಂತಿಕ ವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ ನಂತರ ಅಪಾಯಕಾರಿ ಹಂತ ತಲುಪುತ್ತಿರುವುದು ಗೊತ್ತಾಗುತ್ತಿದೆ. ಈಗಾಗಲೇ ಸುಮಾರು 37,000 ಜನರನ್ನು ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತರನ್ನು ದಾಖಲಿಸಲಾಗಿದೆ. ಈ ಅಂಕಿ ಅಂಶಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ ಕೆಲವೇ ದಿನಗಳ ನಂತರ ಸ್ಟೀವನ್ಸ್ ಅನುಮೋದಿಸಿದ್ದಾರೆ.

ಏತನ್ಮಧ್ಯೆ ಬ್ರಿಟನ್ (Britain) ಸರ್ಕಾರವು ವಾರಕ್ಕೆ ಕನಿಷ್ಠ ಎರಡು ಮಿಲಿಯನ್ ಜನರಿಗೆ ಲಸಿಕೆ ಹಾಕುವ ಯೋಜನೆಯನ್ನು ಪ್ರಕಟಿಸಿದೆ, ವೃದ್ಧರು, ಪ್ರಾಯೋಗಿಕವಾಗಿ ದುರ್ಬಲ ಮತ್ತು ಮುಂಚೂಣಿಯ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ - Good News : ದೇಶವಾಸಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಇನ್ನೂ 4 Corona vaccine

ಹೊಸ ರೀತಿಯ ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ದೇಶಕ್ಕೆ ಬರುವವರು ಕೋವಿಡ್ -19 (COVID-19) ಪರೀಕ್ಷೆ ಮಾಡಿಸಿಕೊಳ್ಳುವುದು, ನೆಗೆಟೀವ್ ರಿಪೋರ್ಟ್ (Negative Report) ತೋರಿಸುವುದನ್ನು ಕಡ್ಡಾಯ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G 

Apple Link - https://apple.co/3loQYe  

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News