ನವದೆಹಲಿ: ದಕ್ಷಿಣ ಏಷ್ಯಾದಲ್ಲಿ ಚೀನಾದ (China) ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಹೊಸ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಭಾರತ ಮತ್ತು ಜಪಾನ್ (Japan) ಡ್ರ್ಯಾಗನ್‌ನೊಂದಿಗೆ ಸ್ಪರ್ಧಿಸಲು ಮೂರನೇ ದೇಶಗಳನ್ನು ಒಟ್ಟುಗೂಡಿಸುವ ಸಾಧ್ಯತೆಗಳನ್ನು ಅನ್ವೇಷಿಸುತ್ತಿವೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar)  ಮೂರನೇ ರಾಷ್ಟ್ರಗಳ ಸಹಭಾಗಿತ್ವದ ಪ್ರಾಯೋಗಿಕ ಅಂಶಗಳನ್ನು ನಾವು ಪರಿಗಣಿಸುತ್ತಿದ್ದೇವೆ ಎಂದು  ಗುರುವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇಂಡಸ್ಟ್ರಿ ಚೇಂಬರ್ ಎಫ್‌ಐಸಿಸಿಐ ಆಯೋಜಿಸಿದ್ದ ವರ್ಚುವಲ್ ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ಸಚಿವರು, ರಷ್ಯಾದ ದೂರದ ಪೂರ್ವ ಪ್ರದೇಶ ಮತ್ತು ಪೆಸಿಫಿಕ್ ಮಹಾಸಾಗರದ ಪೆಸಿಫಿಕ್ ದ್ವೀಪ ದೇಶಗಳಲ್ಲಿ ಭಾರತ ಮತ್ತು ಜಪಾನ್ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಾವು ಒಟ್ಟಾಗಿ ಕೆಲಸ ಮಾಡುವಂತಹ ಪ್ರದೇಶಗಳನ್ನು ನೋಡಬೇಕಾಗಿದೆ ಎಂದು ಅವರು ಹೇಳಿದರು. 


  • ಮೊದಲ ಆಯ್ಕೆ: ರಷ್ಯಾದ (Russia) ದೂರದ ಪೂರ್ವದಲ್ಲಿ ಆರ್ಥಿಕ ಸಹಕಾರದ ಸಾಧ್ಯತೆ, ಏಕೆಂದರೆ ಅಲ್ಲಿನ ಆರ್ಥಿಕ ಯೋಜನೆಗಳಲ್ಲಿ ಭಾಗವಹಿಸಲು ಭಾರತ ಆಸಕ್ತಿ ತೋರಿಸಿದೆ. 

  • ಎರಡನೆಯ ಆಯ್ಕೆ: ಪೆಸಿಫಿಕ್ ಮಹಾಸಾಗರದ ದ್ವೀಪ ರಾಜ್ಯಗಳು, ಅಲ್ಲಿ ಭಾರತವು ತನ್ನ ಅಭಿವೃದ್ಧಿ ಪಾಲುದಾರಿಕೆ ಮತ್ತು ರಾಜಕೀಯ ವ್ಯಾಪ್ತಿಯನ್ನು ಹೆಚ್ಚಿಸಿದೆ.


ಭಾರತೀಯ ಸೈನಿಕರ ಗಮನವನ್ನು ಬೇರೆಡೆ ಸೆಳೆಯಲು ಪಂಜಾಬಿ ಹಾಡುಗಳ ಮೊರೆಹೋದ ಚೀನಾ


ಭಾರತವು ವ್ಯಾಪ್ತಿಯನ್ನು ಬಲಪಡಿಸುತ್ತಿದೆ :
ಕಳೆದ ವರ್ಷ ನಡೆದ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ವ್ಲಾಡಿವೋಸ್ಟಾಕ್‌ಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಈ ಸಮಯದಲ್ಲಿ ಅವರು ರಷ್ಯಾದ ದೂರದ ಪೂರ್ವ ಪ್ರದೇಶದ ಅಭಿವೃದ್ಧಿ ಯೋಜನೆಗಳಿಗಾಗಿ 1 ಬಿಲಿಯನ್ ಸಾಲವನ್ನು ಘೋಷಿಸಿದರು. ಭಾರತ-ಪೆಸಿಫಿಕ್ ದ್ವೀಪ ಸಹಕಾರ ಅಥವಾ ಎಫ್‌ಐಪಿಐಸಿ ಮುಂತಾದ ವೇದಿಕೆಗಳ ಮೂಲಕ ಪೆಸಿಫಿಕ್ ದ್ವೀಪ ದೇಶಗಳಿಗೆ ತನ್ನ ವ್ಯಾಪ್ತಿಯನ್ನು ಬಲಪಡಿಸಲು ಎಲ್ಲರ ಚಿತ್ತ ಸದ್ಯ ನವದೆಹಲಿಯತ್ತ ನೆಟ್ಟಿದೆ. ಈ ವೇದಿಕೆಯಲ್ಲಿ ಭಾರತ ಸೇರಿದಂತೆ 14 ಪೆಸಿಫಿಕ್ ದ್ವೀಪ ದೇಶಗಳಿವೆ.


ಭಾರತದೊಂದಿಗಿನ ಉದ್ವಿಗ್ನತೆಯ ಮಧ್ಯೆ ಈ ದೇಶದ ಮೇಲೆ ಕಣ್ಣಿಟ್ಟ ಚೀನಾ


ಶ್ರೀಲಂಕಾದಲ್ಲಿ ಜಂಟಿ ಯೋಜನೆ:
ಮೂಲಸೌಕರ್ಯ ಮತ್ತು ಯೋಜನಾ ಅಭಿವೃದ್ಧಿಗಾಗಿ ಉಭಯ ದೇಶಗಳು ಈಗಾಗಲೇ ಮೂರನೇ ರಾಷ್ಟ್ರಗಳ ಸಾಧ್ಯತೆಯ ಬಗ್ಗೆ ಕೆಲಸ ಮಾಡುತ್ತಿವೆ. ಶ್ರೀಲಂಕಾದಲ್ಲಿ ಜಂಟಿ ಯೋಜನೆಗಳು ನಡೆಯುತ್ತಿವೆ ಮತ್ತು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳನ್ನು ಒಂದೇ ರೀತಿಯಲ್ಲಿ ಒಗ್ಗೂಡಿಸಬಹುದೇ ಎಂದು ನೋಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ. ಭಾರತ ಮತ್ತು ಜಪಾನ್ 'ಆಕ್ಟ್ ಈಸ್ಟ್ ಫೋರಂ' ಮೂಲಕ ಪಾಲುದಾರಿಕೆಯನ್ನು ಮುಂದುವರಿಸುತ್ತಿವೆ. ಇದರ ಅಧ್ಯಕ್ಷತೆಯನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ಮತ್ತು ದೆಹಲಿಯ ಜಪಾನಿನ ರಾಯಭಾರಿ ವಹಿಸಿದ್ದಾರೆ.


ಕರೋನವೈರಸ್ ಅನ್ನು ವುಹಾನ್ ಲ್ಯಾಬ್‌ನಲ್ಲಿಯೇ ತಯಾರಿಸಲಾಗಿದೆ- ಚೀನಾದ ವೈರಾಲಜಿಸ್ಟ್


ಬೆಳೆಯುತ್ತಿರುವ ಸಂಬಂಧಗಳು:
ಜಪಾನ್ ಅನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಪಾಲುದಾರ ಮತ್ತು ಏಷ್ಯಾದ ಆಧುನೀಕರಣದ ಸ್ಫೂರ್ತಿ ಎಂದು ಬಣ್ಣಿಸಿದ ಜೈಶಂಕರ್, ಮಾರುತಿ ಕ್ರಾಂತಿ, ಮೆಟ್ರೋ ಕ್ರಾಂತಿ ಮತ್ತು ಬುಲೆಟ್ ಕ್ರಾಂತಿ ಯಶಸ್ವಿಯಾದದ್ದು ಜಪಾನ್‌ನ ಇತಿಹಾಸ ಮತ್ತು ಅದರ ಸಾಮರ್ಥ್ಯದಿಂದಾಗಿ ಮಾತ್ರ. ಜಪಾನ್‌ನ ಮಾಜಿ ಪ್ರಧಾನಿ ಅಬೆ ಶಿಂಜೊ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಪರಸ್ಪರ ಮಾತುಕತೆ ಮತ್ತು ಸಂಬಂಧವನ್ನು ಸುಧಾರಿಸುವ ಪ್ರಯತ್ನದಿಂದಾಗಿ ಉಭಯ ದೇಶಗಳು ಇಷ್ಟು ಹತ್ತಿರ ಬಂದಿವೆ. ಉಭಯ ದೇಶಗಳ ನಡುವಿನ ಸಂಬಂಧವು ತುಂಬಾ ಪ್ರಬಲವಾಗಿದೆ ಮತ್ತು ಬಲಗೊಳ್ಳುತ್ತಿದೆ ಎಂದು ಹೇಳಿದರು. ನಮ್ಮ ಆಲೋಚನೆಯು ಪ್ರಾದೇಶಿಕ ಮತ್ತು ಜಾಗತಿಕ ಕಾರ್ಯತಂತ್ರದ ವಿಷಯಗಳಿಗೆ ಹೋಲುತ್ತದೆ ಎಂದು ಅವರು ಬಣ್ಣಿಸಿದರು.