ನವದೆಹಲಿ: ವಿಸ್ತರಣಾ ಪದ್ಧತಿಗಳಿಂದ ಕುಖ್ಯಾತಿ ಪಡೆದ ಚೀನಾ ಭೂತಾನ್‌ನ ಕೆಲವು ಭಾಗಗಳನ್ನು ಆಕ್ರಮಿಸಿಕೊಳ್ಳಲು ಬಯಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಭೂತಾನ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ತಯಾರಿ ನಡೆಸುತ್ತಿದೆ. ಭಾರತವು ಈ ಇತ್ತೀಚಿನ ಬೆಳವಣಿಗೆಯನ್ನು ಭೂತಾನ್ ಸರ್ಕಾರಕ್ಕೆ ತಿಳಿಸಿದೆ. ಭೂತಾನ್ (Bhutan) ಜೊತೆಗಿನ ಗಡಿ ವಿವಾದದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಚೀನಾ ಒತ್ತಡ ಹೇರುತ್ತಿದೆ ಮತ್ತು ಪ್ರಸ್ತುತ ಸಿದ್ಧತೆಯು ಅದರ ಭಾಗವಾಗಿದೆ. 2017ರಲ್ಲಿ ಡೋಕ್ಲಾಮ್ ವಿವಾದದ ನಂತರ ಭೂತಾನ್ ಗಡಿಯ ಬಳಿ ರಸ್ತೆ, ಹೆಲಿಪ್ಯಾಡ್ ನಿರ್ಮಿಸಲು ಚೀನಾ ತಯಾರಿ ನಡೆಸುತ್ತಿದೆ, ಜೊತೆಗೆ ಅಲ್ಲಿ ಸೈನಿಕರ ನಿಯೋಜನೆಯೂ ಹೆಚ್ಚಾಗಿದೆ.
ಕರೋನವೈರಸ್ ಅನ್ನು ವುಹಾನ್ ಲ್ಯಾಬ್‌ನಲ್ಲಿಯೇ ತಯಾರಿಸಲಾಗಿದೆ- ಚೀನಾದ ವೈರಾಲಜಿಸ್ಟ್
ಕಳೆದ ಕೆಲವು ತಿಂಗಳುಗಳಲ್ಲಿ ಚೀನಾ (China) ಪಶ್ಚಿಮ ಭೂತಾನ್ ಪ್ರದೇಶಗಳ ಐದು ಪ್ರದೇಶಗಳಿಗೆ ನುಸುಳಿದೆ ಮತ್ತು ಭೂತಾನ್ ಒಳಗೆ ಸುಮಾರು 40 ಕಿಲೋಮೀಟರ್ ದೂರದಲ್ಲಿ ಹೊಸ ಗಡಿಯನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಆಗಸ್ಟ್‌ನಲ್ಲಿ ಪಿಎಲ್‌ಎ ದಕ್ಷಿಣ ಡೋಕ್ಲಾಮ್ ಪ್ರದೇಶಕ್ಕೂ ನುಸುಳಿತ್ತು. ಗೇಮೊಚೆನ್ ಪ್ರದೇಶಕ್ಕೆ ಗಡಿ ವಿಸ್ತರಣೆಯನ್ನು ಸ್ವೀಕರಿಸಲು ಚೀನಾ ಭೂತಾನ್ ಮೇಲೆ ಒತ್ತಡ ಹೇರುತ್ತಿದೆ.
ಪರಿಸ್ಥಿತಿಯ ಬಗ್ಗೆ ಭಾರತದ ನಿಲುವು?
ಭಾರತ-ಚೀನಾ ಮತ್ತು ಚೀನಾ-ಭೂತಾನ್ (China-Bhutan) ಗಡಿಯಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಾವು ನಿಗಾ ಇಡುತ್ತಿದ್ದೇವೆ ಎಂದು ಕೇಂದ್ರ ಭದ್ರತಾ ಸಂಸ್ಥೆಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡೋಕ್ಲಾಮ್ ನಿಲುಗಡೆಯ ನಂತರ ಪಿಎಲ್‌ಎ ಭೂತಾನ್-ಚೀನಾ ಗಡಿ ಮತ್ತು ರಸ್ತೆಗಳು, ಮಿಲಿಟರಿ ಮೂಲಸೌಕರ್ಯ ಮತ್ತು ಹೆಲಿಪ್ಯಾಡ್‌ಗಳನ್ನು ಭೂತಾನ್ ಗಡಿಯ ಸಮೀಪದಲ್ಲಿ ಆಕ್ರಮಣಕಾರಿಯಾಗಿ ಗಸ್ತು ತಿರುಗುತ್ತಿದೆ. ಭೂತಾನ್‌ನ ಪಶ್ಚಿಮ ವಲಯದಲ್ಲಿ 318 ಚದರ ಕಿಲೋಮೀಟರ್ ಮತ್ತು ಕೇಂದ್ರ ವಲಯದಲ್ಲಿ 495 ಚದರ ಕಿಲೋಮೀಟರ್ ಎಂದು ಚೀನಾ ಹೇಳಿಕೊಂಡಿದೆ.
'ಎಲ್‌ಎಸಿಯಿಂದ ಬೀಜಿಂಗ್'ವರೆಗೆ ಕಣ್ಣಿಟ್ಟಿರುವ ದೋವಲ್, ಇಂದು ಮಹತ್ವದ ಸಭೆ ಸಾಧ್ಯತೆ
ಇಲ್ಲಿಯೂ ಹಕ್ಕು ಸಾಧಿಸಲಾಗಿದೆ:
ಜೂನ್‌ನಲ್ಲಿ ಚೀನಾ ಭೂತಾನ್‌ನ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿತು. ಇದನ್ನು ವಿವಾದಿತ ಪ್ರದೇಶ ಎಂದು ಕರೆದ ಡ್ರ್ಯಾಗನ್, ಗ್ಲೋಬಲ್ ಎನ್ವಿರಾನ್ಮೆಂಟ್ ಫೆಸಿಲಿಟಿ ಕೌನ್ಸಿಲ್ (ಜಿಇಎಫ್ ಕೌನ್ಸಿಲ್) ಗೆ ಹಣವನ್ನು ಒದಗಿಸದಂತೆ ಕೇಳಿಕೊಂಡಿದ್ದರು. ಈ ಅಭಯಾರಣ್ಯವು ಭಾರತ ಮತ್ತು ಚೀನಾದ ಗಡಿಯ ಹತ್ತಿರ 750 ಚದರ ಕಿಲೋಮೀಟರ್ ವಿಸ್ತಾರವಾಗಿದೆ ಮತ್ತು ಇದು ಅರುಣಾಚಲ ಪ್ರದೇಶದ ಸಮೀಪದಲ್ಲಿದೆ.
ಚೀನಾದಿಂದ ಭಾರತದ ಭೂಮಿ ವಾಪಸ್ ಪಡೆಯುವುದು ಕೂಡ ಆ್ಯಕ್ಟ್ ಆಫ್ ಗಾಢ್ ಗೆ ಬಿಟ್ಟಿದ್ದಾ?: ರಾಹುಲ್ ಗಾಂಧಿ ವ್ಯಂಗ್ಯ
2017ರಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ:-
ಚೈನೀಸ್ ಭಾಷೆಯಲ್ಲಿ ಡಾಂಗ್ಲಾಂಗ್ ಎಂದೂ ಕರೆಯಲ್ಪಡುವ ಡೋಕ್ಲಾಮ್ ಪ್ರಸ್ಥಭೂಮಿ ಚೀನಾ ಮತ್ತು ಭೂತಾನ್ ನಡುವಿನ 2017ರ ಮಿಲಿಟರಿ ನಿಲುಗಡೆಗೆ ಮುಖ್ಯ ಕಾರಣವಾಗಿದೆ. ಡೋಕ್ಲಾಮ್ ಪ್ರಸ್ಥಭೂಮಿ ಸಿಲಿಗುರಿ ಕಾರಿಡಾರ್‌ಗೆ ಹತ್ತಿರದಲ್ಲಿದೆ, ಇದನ್ನು ಚಿಕನ್ ನೆಕ್ ಎಂದೂ ಕರೆಯುತ್ತಾರೆ. ಸಿಲಿಗುರಿ ಕಾರಿಡಾರ್ ಭಾರತಕ್ಕೆ ಆಯಕಟ್ಟಿನ ಮಹತ್ವದ್ದಾಗಿದೆ. ಗ್ರೇಟ್ ಬ್ರಿಟನ್ ಮತ್ತು ಕ್ವಿಂಗ್ ರಾಜವಂಶದ ನಡುವಿನ 1890ರ ಸಮಾವೇಶದ ಆಧಾರದ ಮೇಲೆ ಚೀನಾ ತನ್ನ ಹಕ್ಕು ಸಾಧಿಸುತ್ತದೆ.