ಬೆಂಗಳೂರು : ಆಪರೇಷನ್‌ ಗಂಗಾ ಹೆಸರಿನಲ್ಲಿ ಭಾರತ ಸರ್ಕಾರ ಉಕ್ರೇನಿನ ಯುದ್ದ ಭೂಮಿಯಲ್ಲಿ ಸಿಲುಕಿರುವವರನ್ನು ಹೊರ ತರಲು ಪ್ರಯತ್ನ ಮಾಡುತ್ತಿದ್ದರೆ ಇಲ್ಲೊಬ್ಬ ಭೂಪ ನಾನು ಈ ದೇಶ ಬಿಟ್ಟು ಬರೋಲ್ಲ ಅಂತ ಕುಳಿತುಬಿಟ್ಟಿದ್ದಾನೆ. ಅರೇ ಇವನಿಗೇನಾಯ್ತು? ಯುದ್ದ ಪೀಡಿತ ಭೂಮಿಯಲ್ಲಿ ಯಾಕೆ ಉಳಿಯಲು ಬಯಸುತ್ತಾನೆ ಅಂದ್ಕೊಳ್ತೀರಾ? ಹೌದು ಅದಕ್ಕೂ ಒಂದು ನಿಖರವಾದ ಕಾರಣವಿದೆ. ಅವನೊಳಗೂ ಒಂದು ಬಾಂದವ್ಯದ ಬೆಸುಗೆ ಇದೆ. ಯಾರಿಗೂ ಅರಿಯದ ಮುಗ್ದ ಜೀವಿಗಳ ಕುರಿತಾದ ಅಗಾಧ ಕಾಳಜಿ ಇದೆ.


COMMERCIAL BREAK
SCROLL TO CONTINUE READING

ಆತನ ಹೆಸರು ಕುಮಾರ ಬಂಧಿ(Jaguar Kumar). ತೆಲಂಗಾಣದಿಂದ MBBS ವ್ಯಾಸಂಗ ಮಾಡಲೆಂದು ಉಕ್ರೇನ್‌ಗೆ ಹೋದಾತ ಡಾಕ್ಟರ್‌ ಆಗಿ ಅಲ್ಲೇ ಉಳಿದ. ಹೀಗೆ ಉಳಿಯುವುದರ ಜೊತೆ ಒಂದಿಷ್ಟು ಪ್ರಾಣಿಗಳನ್ನೂ ಆತ ಸಾಕಿಕೊಂಡಿದ್ದಾನೆ. ಉಕ್ರೇನಿನ ರಾಜಧಾನಿ ಕೀವ್‌ ನಗರದಿಂದ 84 ಕಿ.ಮೀ ದೂರದಲ್ಲಿರುವ ಡೊಂಬಾಸ್‌ ನಗರದಲ್ಲಿ ಉಳಿದುಕೊಂಡಿದ್ಧಾನೆ. ಈತನಿರುವ ನಗರವನ್ನು ಈಗ ಸಂಪೂರ್ಣ ರಷ್ಯಾ ಆಕ್ರಮಿಸಿದೆ. ಈತನ ಮನೆಯವರೀಗ ಆ ನಗರ ಬಿಟ್ಟು ಬರುವಂತೆ ಒತ್ತಾಯಿಸುತ್ತಿದ್ದಾರೆ. ಆದರೂ ಅಲ್ಲೇ ಕುಳಿತು ಸಾಯುವುದಾದರೆ ಇಲ್ಲೇ ಎಂದು ಕುಳಿತಿರುವುದಕ್ಕೆ ಕಾರಣ ಆತ ಸಾಕಿರುವ ಸಾಕು ಪ್ರಾಣಿಗಳು.


ಇದನ್ನೂ ಓದಿ : Good News: ಮೆಡಿಕಲ್ ಅಧ್ಯಯನ ನಡೆಸಲು ಬಯಸುವ ವಿದ್ಯಾರ್ಥಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ Modi Government


ಅಷ್ಟಕ್ಕೂ ಆತ ಸಾಕಿರುವುದು ಅಂತಿಂಥ ಪ್ರಾಣಿಗಳನ್ನಲ್ಲ. ಭಯಾನಕ ಹುಲಿ, ಚಿರತೆಗಳನ್ನು. ಉಕ್ರೇನ್‌(Ukrine)ನಲ್ಲಿ ಈ ಪ್ರಾಣಿಗಳನ್ನು ಸಾಕುವುದಕ್ಕಾಗಿ ಅನುಮತಿ ಇರೋದ್ರಿಂದಾಗಿ ಈತ ಸಾಕಿಕೊಂಡಿದ್ದಾನೆ. ಸಾಕಿಕೊಂಡಿದ್ದಾನೆ ಅನ್ನುವುದಕ್ಕಿಂತಲೂ ಅವುಗಳೊಂದಿಗೇ ಬದುಕಿಕೊಂಡಿದ್ದಾನೆ. ತನ್ನ ಹೆಸರನ್ನು ಜಾಗ್ವಾರ್‌ ಕುಮಾರ್‌ ಅಂತ ಬದಲಿಸಿಕೊಂಡಿರುವ ಈ ಕುಮಾರ ಬಂಧಿ ಅದೇ ಹೆಸರಿನಲ್ಲಿ ಒಂದು ಯೂಟ್ಯೂಬ್‌ ಚಾನೆಲ್‌ ಕೂಡ ತೆರೆದಿದ್ದಾನೆ. 85k SUBSCRIBERS ಇರುವ ಈ ಚಾನೆಲ್‌ನಲ್ಲಿ ಈ ವ್ಯಾಘ್ರ ಪ್ರಾಣಿಗಳು ಬೆಕ್ಕಿನ ಮರಿಗಳಂತೆ ಆಟವಾಡುತ್ತಿರುವ ವಿಡಿಯೋಗಳಿವೆ. 


Jaguar) ಪ್ರಭೇದವಿದೆ. ವಿಶ್ವದಲ್ಲಿ ಈ ಪ್ರಭೇಧ ಉಳಿದಿರೋದು ಕೇವಲ 21 ಚೀತಾಗಳು ಮಾತ್ರ. ಅವುಗಳಲ್ಲಿ ಒಂದು ಕುಮಾರನ ಬಳಿ ಇದೆ. ಲಿಯೋಪಾರ್ಡ್‌ ಮತ್ತು ಜಾಗ್ವಾರ್‌ ಮಿಶ್ರ ತಳಿಯಾಗಿರುವ ಈ ಪ್ರಭೇದವನ್ನು ಕುಮಾರ್‌  ಯಗ್ವಾರ್‌ ಎಂದು ಕರೆಯುತ್ತಾರೆ. ಇದೀಗ ಕುಮಾರ್‌ ಹೇಳುವ ಪ್ರಕಾರ ಭಾರತ ಸರ್ಕಾರ ಕರೆಸಿಕೊಳ್ಳುವುದಾದರೆ ನನ್ನ ಜೊತೆ ನನ್ನ ಪ್ರಾಣಿಗಳನ್ನೂ ಕರೆಸಿಕೊಳ್ಳಬೇಕು ಎಂದಿದ್ದಾರೆ. ಆದರೆ ಭಾರತದಲ್ಲಿ ಈ ರೀತಿ ಪ್ರಾಣಿಗಳನ್ನು ಸಾಕುವುದು ಅನಧಿಕೃತ. ಹಾಗಾಗಿ ಭಾರತೀಯ ರಾಯಭಾರ ಕಚೇರಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. 


ನಾನೀಗ ಉಕ್ರೇನ್‌(Ukrine) ತೊರೆದು ಬಂದರೆ ನನ್ನ ಪ್ರೀತಿಯ ಪ್ರಾಣಿಗಳು ಬಲಿಯಾಗುತ್ತವೆ ಎಂದು ಹಠ ಹಿಡಿದು, ಹೋಗುವುದಾದರೆ ನನ್ನ ಪ್ರಾಣವೂ ಜೊತೆಗೇ ಹೋಗಲಿ ಎನ್ನುವ ಕುಮಾರ್‌ ಪ್ರಾಣಿ ಪ್ರೀತಿಗೊಂದು ಸಲಾಂ ಹೇಳಲೇ ಬೇಕು.


ಇದನ್ನೂ ಓದಿ : ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಕನ್ನಡಿಗ ಯೋಧ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.