Good News: ಮೆಡಿಕಲ್ ಅಧ್ಯಯನ ನಡೆಸಲು ಬಯಸುವ ವಿದ್ಯಾರ್ಥಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ Modi Government

Medical Education - ವೈದ್ಯಕೀಯ ವಿಜ್ಞಾನದಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರದ ಈ ನಿರ್ಧಾರ ತುಂಬಾ ಮಹತ್ವದ್ದಾಗಿದೆ. ಇದರಿಂದ ಮಧ್ಯಮ ವರ್ಗದಿಂದ ಬರುವ ವಿದ್ಯಾರ್ಥಿಗಳೂ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ವ್ಯಾಸಂಗ ಮಾಡಲು ಸಾಧ್ಯವಾಗಲಿದೆ.

Written by - Nitin Tabib | Last Updated : Mar 7, 2022, 05:08 PM IST
  • ವೈದ್ಯಕೀಯ ಶಿಕ್ಷಣ ಪಡೆಯ ಬಯಸುವ ವಿದ್ಯಾರ್ಥಿಗಳಿಗೊಂದು ಸಂತಸದ ಸುದ್ದಿ.
  • ಖಾಸಗಿ ಕಾಲೇಜುಗಳ ಶೇ.50 ಸೀಟ್ ಗಳಿಗೆ ಸರ್ಕಾರಿ ಶುಲ್ಕ ಪಡೆಯಲಾಗುವುದು
  • ಭಾರಿ ಶುಲ್ಕದ ಕಾರಣ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುವ ಬಡ ವಿದ್ಯಾರ್ಥಿಗಳಿಗೆ ಲಾಭ
Good News: ಮೆಡಿಕಲ್ ಅಧ್ಯಯನ ನಡೆಸಲು ಬಯಸುವ ವಿದ್ಯಾರ್ಥಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ Modi Government title=
Medical Education (File Photo)

ನವದೆಹಲಿ: Medical College Fees - ವೈದ್ಯಕೀಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರದ ಪ್ರಕಾರ, ಇದೀಗ ಖಾಸಗಿ ವೈದ್ಯಕೀಯ (Private Medical College) ಕಾಲೇಜುಗಳಲ್ಲಿ (Medical College) ಅರ್ಧದಷ್ಟು ಸೀಟುಗಳು ಸರ್ಕಾರಿ ವೈದ್ಯಕೀಯ ಕಾಲೇಜಿನಷ್ಟೇ ಶುಲ್ಕವನ್ನು ಹೊಂದಲಿವೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ.

ಇದನ್ನೂ ಓದಿ-Russia-Ukraine Crisis: ಮೋದಿ ಸರ್ಕಾರದ ವಿದೇಶಾಂಗ ನೀತಿಗೆ Shashi Tharoor ಫಿದಾ, ಹೇಳಿದ್ದೇನು ಗೊತ್ತಾ?

ಇದಕ್ಕೆ ಸಂಬಂಧಿಸಿದಂತೆ PMO ಟ್ವೀಟ್ ಮಾಡಿದ್ದು, 'ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಅರ್ಧದಷ್ಟು ಸೀಟುಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಶುಲ್ಕವನ್ನು ವಿಧಿಸಲು ನಾವು ನಿರ್ಧರಿಸಿದ್ದೇವೆ' ಎಂದು ಹೇಳಲಾಗಿದೆ.  ಹಣಕಾಸಿನ ಸಮಸ್ಯೆಯ ಕಾರಣ ಮೆಡಿಕಲ್ (Doctors) ಶಿಕ್ಷಣದಿಂದ ವಂಚಿತರಾಗುವ ಬಡ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಿರ್ಧಾರದಿಂದ ಲಾಭವಾಗಲಿದೆ. 

ಇದನ್ನೂ ಓದಿ-Ayushman Bharat ಲಾಭಾರ್ಥಿಗಳಿಗೊಂದು ಸಂತಸದ ಸುದ್ದಿ!

ದೇಶದಲ್ಲಿ MBBS ವ್ಯಾಸಂಗವನ್ನು ಅತ್ಯಂತ ದುಬಾರಿ ಎಂದು ಪರಿಗಣಿಸಲಾಗುತ್ತದೆ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯದ ಸಂದರ್ಭದಲ್ಲಿ, ಹೆಚ್ಚಿನ ಶುಲ್ಕದ (Medical College Fees) ಕಾರಣದಿಂದಾಗಿ ಅನೇಕ ಬಡ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸರ್ಕಾರದ ಈ ನಿರ್ಧಾರದ ಲಾಭ ಇಂತಹ ಬಡ ವಿದ್ಯಾರ್ಥಿಗಳಿಗೆ ಸಿಗಲಿದ್ದು, ಖಾಸಗಿ ಕಾಲೇಜುಗಳಲ್ಲಿ ಅರ್ಧದಷ್ಟು ಸೀಟುಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜಿನಷ್ಟೇ ಶುಲ್ಕ ವಿಧಿಸಲಾಗುವುದು ಎನ್ನಲಾಗಿದೆ.

ಕಾಲೇಜುಗಳು  ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ
ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಫೆಬ್ರವರಿಯಲ್ಲಿ ಭಾರತ ಸರ್ಕಾರ ನೀಡಿದ ಆದೇಶದ ಪ್ರಯೋಜನವನ್ನು ವೈದ್ಯರಾಗುವ ಕನಸು ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ನೀಡಲಾಗುವುದು ಎಂದಿದ್ದರು.

ಫೆಬ್ರವರಿ 3 ರಂದು ಅಧಿಸೂಚನೆಯನ್ನು ಹೊರಡಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC), ದೇಶದ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಶೇಕಡಾ 50 ರಷ್ಟು ಸೀಟುಗಳ ಶುಲ್ಕವು ಆ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕಕ್ಕೆ ಸಮಾನವಾಗಿರುತ್ತದೆ ಎಂದು ಹೇಳಿದೆ. ಶುಲ್ಕದ ಮೇಲೆ ಇತರ ಯಾವುದೇ ಶುಲ್ಕವನ್ನು ವಿಧಿಸುವ ಹಾಗಿಲ್ಲ.

ಈ ಆಧಾರದ ಮೇಲೆ ಲಾಭ ಸಿಗಲಿದೆ
ಇದರೊಂದಿಗೆ ಖಾಸಗಿ ಕಾಲೇಜುಗಳಲ್ಲಿ  ಬಾಕಿ ಉಳಿಯುವ ಶೇ.50ರಷ್ಟು ಸೀಟುಗಳ ಮೇಲಿನ ಶುಲ್ಕದ ನಿರ್ಧಾರವನ್ನು ಆಯಾ ರಾಜ್ಯಗಳಲ್ಲಿನ ಫೀಸ್ ರೆಗ್ಯುಲೇಟರಿ ಅಥಾರಿಟಿ ನಿರ್ಧರಿಸಲಿದೆ.

ಖಾಸಗಿ ಕಾಲೇಜುಗಳ ಯಾವ ಶೇ.50ರಷ್ಟು ಸೀಟುಗಳ ಮೇಲೆ ಸರ್ಕಾರಿ ಕಾಲೇಜುಗಳ ಶುಲ್ಕ ಅನ್ವಯಿಸುತ್ತದೆಯೋ, ಅವುಗಳನ್ನು ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಅಂದರೆ, ನೀಟ್ ಪರೀಕ್ಷೆಗಳ ಶ್ರೇಯಾಂಕದ ಆಧಾರದ ಮೇಲೆ ಅವುಗಳಿಗೆ ಪ್ರವೇಶ ನೀಡಲಾಗುವುದು. ಹೀಗಿರುವಾಗ ಖಾಸಗಿ ಕಾಲೇಜುಗಳ ಅಧಿಕ ಶುಲ್ಕ ಮತ್ತು ಉಕ್ರೇನ್ ಕಾಲೇಜುಗಳಲ್ಲಿ ಕಡಿಮೆ ಶುಲ್ಕದ ಕಾರಣ ಅಲ್ಲಿಗೆ ವ್ಯಾಸಂಗಕ್ಕೆ ತರಳುವ ವಿದ್ಯಾರ್ಥಿಗಳು ಭಾರತದ ಮೆಡಿಕಲ್ ಕಾಲೇಜುಗಳಲ್ಲಿಯೇ ತಮ್ಮ ಶಿಕ್ಷಣವನ್ನು ಪಡೆಯಬಹುದು ಎನ್ನಲಾಗಿದೆ.

ಇದನ್ನೂ ಓದಿ-Malya-Modi ಹೆಸರನ್ನು ಉಲ್ಲೇಖಿಸಿ ತನ್ನದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ Varun Gandhi

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News