Black Panther And Leopard Video: ಸಾಮಾಜಿಕ ಜಾಲತಾಣಗಳಲ್ಲಿ ಕಾಡು ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಇವುಗಳಲ್ಲಿ ಕೆಲವು ವೀಡಿಯೋಗಳು ಅತ್ಯಂತ ಭಯಾನಕವಾಗಿರುತ್ತವೆ (Animal video).   ಇವುಗಳನ್ನು ವೀಕ್ಷಿಸುತ್ತಿದ್ದರೆ ಎದೆ ಝಲ್ಲೆನ್ನುತ್ತದೆ. ಕೆಲವೊಮ್ಮೆ ಪ್ರಾಣಿಗಳು ಹೀಗೂ  ಕಾದಾಡುತ್ತವೆಯಾ ಎಂಬ ಸಂದೇಹವು ಮೂಡುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ (Viarl Video).


COMMERCIAL BREAK
SCROLL TO CONTINUE READING

ಚಿರತೆಯ ಮೇಲೆ ದಾಳಿ ಮಾಡಲು ಮರವೇರಿದ ಕರಿ ಚಿರತೆ : 
ಚಿರತೆಯನ್ನು ಬೇಟೆಯಾಡುವ ಸಲುವಾಗಿ ಇಲ್ಲಿ ಕರಿ ಚಿರತೆ (Balck Panther ) ಅದೆಷ್ಟು ವೇಗವಾಗಿ ಮರ ಏರುತ್ತದೆ ಎಂದರೆ ನೋಡುಗರು ನಿಬ್ಬೆರಗಾಗಬೇಕು. ಅದೇನೋ ಸಿಟ್ಟಿನಲ್ಲಿ ಓಡೋಡಿ ಬಂದ ಕರಿಚಿರತೆ ಸರಸರನೆ ಮರವೇರಿ ಬಿಡುತ್ತದೆ. ಮರ ಏರುವ ಹೊತ್ತಿಗೂ ಅದು ಘರ್ಜಿಸುವ ಸದ್ದು ಕೇಳಿದರೆ ಅದೆಷ್ಟು ಕೋಪದಲ್ಲಿದೆ ಎನ್ನುವುದನ್ನು ಅಂದಾಜಿಸಿಕೊಳ್ಳಬಹುದು (Animal Viral Video).  


ಇದನ್ನೂ ಓದಿ :  Amazing Theft Video: ಚಲಿಸುತ್ತಿರುವ ವಾಹನದಲ್ಲಿ ಕೈಚಳಕ ತೋರಿಸಿದ ಕಳ್ಳ, Video ನೋಡಿ


ಮರವನ್ನು ವೇಗವಾಗಿ ಏರುವ ಮೂಲಕ ಕರಿ ಚಿರತೆ, ಚಿರತೆ ಇದ್ದ ಜಾಗವನ್ನು ತಲುಪುತ್ತದೆ. ಮರದ ತುತ್ತ ತುದಿಯಲ್ಲಿ ಚಿರತೆ ಮತ್ತು ಕರಿ ಚಿರತೆ ಮುಖಾ ಮುಖಿಯಾಗಿ ಬಿಡುತ್ತವೆ. ಇಲ್ಲಿ ಕರಿ ಚಿರತೆ, ಚಿರತೆ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಆದರೆ, ಚಿರತೆ ಒಮ್ಮೆಲೇ ಘರ್ಜಿಸಿ ಬಿಡುತ್ತದೆ, ಚಿರತೆಯ ಒಂದೇ ಘರ್ಜನೆಗೆ ಕರಿ ಚಿರತೆ ತನ್ನ ಹೆಜ್ಜೆ ಹಿಂದೆ ಸರಿಸಿ ಬಿಡುತ್ತದೆ (Viral video).  ಅದೆಷ್ಟು ವೇಗವಾಗಿ ಮರವೆರಿತ್ತೋ ಅಷ್ಟೇ ವೇಗವಾಗಿ ಮರದಿಂದ ಕೆಳಗಿಳಿದು ಬರುತ್ತದೆ ಕರಿ ಚಿರತೆ.


 


Watch Video: ರೈಲು ಪ್ರಯಾಣಿಕನ ಪಾಲಿಗೆ ಆಪತ್ಬಾಂಧವನಾಗಿ ಬಂದ ಪೊಲೀಸಪ್ಪ..!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.