ಮುಂಬೈ: ಇಂದು ಮಧ್ಯಾಹ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಸರ್ಕಾರದ ಬಹುಮತ ಸಾಬೀತು ಪಡಿಸಲು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ನಂದೇಡ್‌ನ ಬಿಜೆಪಿ (BJP) ಸಂಸದ ಪ್ರತಾಪ್ ರಾವ್ ಭೇಟಿಯಾಗಿದ್ದಾರೆ. ಶನಿವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ಉದ್ಧವ್ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುವ ಕೆಲವೇ ಗಂಟೆಗಳ ಮೊದಲು ಈ ಸಭೆ ನಡೆಯಿತು.


COMMERCIAL BREAK
SCROLL TO CONTINUE READING

ಸಭೆಯ ನಂತರ, ಅಜಿತ್ ಪವಾರ್(Ajit Pawar), ಇದು ಸದ್ಭಾವನೆಯ ಅರ್ಪಣೆಯಾಗಿದೆ. ಇಂತಹ ಸಭೆಗಳು ರಾಜಕೀಯದಲ್ಲಿ ನಡೆಯುತ್ತವೆ. ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನು ಭೇಟಿಯಾಗುವುದು ಸಾಮಾನ್ಯ. ಇದಕ್ಕೆ ವಿಶೇಷಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.


ಉದ್ಧವ್ ಸರ್ಕಾರದ ಬಹುಮತ ಸಾಬೀತು, ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ಮಹಾರಾಷ್ಟ್ರ (Maharashtra) ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.


ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಶಾಸಕರ ಬೆಂಬಲದ ಅಗತ್ಯವಿದೆ. ಆಡಳಿತಾರೂಢ ಶಿವಸೇನೆ(Shiv Sena) - ಎನ್‌ಸಿಪಿ(NCP) - ಕಾಂಗ್ರೆಸ್(Congress) 'ಮಹಾ ವಿಕಾಸ್ ಅಘಾಡಿ' ಸರ್ಕಾರ ತನಗೆ 170 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದೆ. 


ಇಂದು ವಿಧಾನಸಭೆಯಲ್ಲಿ ಏನಾಗಲಿದೆ?
ವಿಧಾನಸಭೆಯ ಪ್ರಕ್ರಿಯೆಗಳು ಶನಿವಾರ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿವೆ. ಮೊದಲು ಸದನದಲ್ಲಿ ಹಂಗಾಮಿ ಸ್ಪೀಕರ್ ಹೆಸರನ್ನು ಪ್ರಕಟಿಸಲಾಗುವುದು. ಪ್ರೊಟೆಮ್ ಸ್ಪೀಕರ್ ಆದೇಶದ ನಂತರ, ಶಿವಸೇನೆಯ ಉದ್ಧವ್ ಠಾಕ್ರೆ ಸರ್ಕಾರದ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹೊಸ ಮಂತ್ರಿಗಳನ್ನು ಮೊದಲು ಸದನದಲ್ಲಿ ಪರಿಚಯಿಸಲಾಗುವುದು.


ಅದರ ನಂತರ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav thackeray) ಅವರು ಮಹಾರಾಷ್ಟ್ರ ಸದನದಲ್ಲಿ ಹೊಸ ಪ್ರೋಟೀಮ್ ಸ್ಪೀಕರ್ ಸಮ್ಮುಖದಲ್ಲಿ ಸರ್ಕಾರದ ಬಹುಮತವನ್ನು ಸಾಬೀತು ಪಡಿಸಲಿದ್ದಾರೆ. 


ದಿಲೀಪ್ ವಾಲ್ಸೆ-ಪಾಟೀಲ್ ಪ್ರೊಟೆಮ್ ಸ್ಪೀಕರ್:
ಹಿರಿಯ ಎನ್‌ಸಿಪಿ ಮುಖಂಡ ದಿಲೀಪ್ ವಾಲ್ಸೆ-ಪಾಟೀಲ್ ಅವರು ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್ (ಪ್ರೊ-ಟೆಮ್ ಸ್ಪೀಕರ್) ಆಗಿರುತ್ತಾರೆ. ಶುಕ್ರವಾರ ಈ ಮಾಹಿತಿ ನೀಡುವಾಗ, ಶನಿವಾರ ಕರೆಯಲಾದ ಸದನದ ವಿಶೇಷ ಅಧಿವೇಶನಕ್ಕೆ ದಿಲೀಪ್ ವಾಲ್ಸೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.