ನವದೆಹಲಿ: ಒಂದೆಡೆ ಮಾತುಕತೆ ನಡೆಸುತ್ತಲೇ ಇನ್ನೊಂದೆಡೆ ಮಲ್ಲಯುದ್ದಕ್ಕೆ ಮುಂದಾಗಿರುವ ಚೀನಾ ಬಗ್ಗೆ ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಲು ಇಂದು  ಪ್ರಧಾನಿ  ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದೆ.


COMMERCIAL BREAK
SCROLL TO CONTINUE READING

ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಜೆ 5ಗಂಟೆಗೆ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದ್ದು, ಸಭೆಯಲ್ಲಿ ಭಾರತ ಮತ್ತು ಚೀನಾ ಗಡಿ (India-China Border) ಯಲ್ಲಿ ಉಂಟಾಗಿರುವ ಉದ್ವಿಘ್ನತೆ ಹಾಗೂ ಇದ್ದಕ್ಕಿದ್ದಂತೆ ಸೃಷ್ಟಿಯಾದ ಸೇನೆಗಳ ಸಂಘರ್ಷದ ಬಗ್ಗೆ ಚರ್ಚಿಸಲಾಗುತ್ತದೆ.


ಗಡಿಯಲ್ಲಿ ವಾಯುಪಡೆ ಅಲರ್ಟ್: ಚೀನಾಕ್ಕೆ ಭಾರತದ ಖಡಕ್ ಸಂದೇಶ ರವಾನೆ


ಜೂನ್ 6ರಿಂದ ಭಾರತ ಮತ್ತು ಚೀನಾ (China) ದೇಶಗಳ ಸೇನಾ ಅಧಿಕಾರಿಗಳು‌ ಹಾಗೂ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಯುತ್ತಿದ್ದವು. ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಉಪಶಮನ ಮಾಡುವ ಬಗ್ಗೆ ಚರ್ಚೆ ಆಗುತ್ತಿದ್ದವು. ಈ ನಡುವೆ ಜೂನ್ 15ರಂದು ರಾತ್ರಿ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷ ಉಂಟಾಗಿದೆ. ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದೆ ಚೀನಾ ಬಗ್ಗೆ ಯಾವ ನಿಲುವು ಹೊಂದಬೇಕು ಎಂದು ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.


ಲಡಾಖ್ ವಿವಾದ: ಚೀನಾವನ್ನು ಆರ್ಥಿಕವಾಗಿ ಸದೆಬಡೆಯಲು ಭಾರತದ ನಿರ್ಧಾರ


ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi), ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಸೀತಾರಾಮ್ ಯೆಚೂರಿ, ಸಿಪಿಐನ ಡಿ. ರಾಜ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ (Sharad Pawar) ಶಿವಸೇನೆ ವತಿಯಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray), ತೃಣಮೂಲ ಕಾಂಗ್ರೆಸ್ ವತಿಯಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜೆಡಿಯು ವತಿಯಿಂದ ಬಿಹಾರ ಮುಖ್ಯಮಂತ್ರಿ‌ ನಿತೀಶ್ ಕುಮಾರ್, ಸಮಾಜವಾದಿ ಪಕ್ಷದ ವತಿಯಿಂದ ರಾಮ್ ಗೋಪಾಲ್ ಯಾದವ್, ಅಕಾಲಿ ದಳದ ಸುಖ್ವೀರ್ ಸಿಂಗ್ ಬಾದಲ್ ಹಾಗೂ ಎಲ್ ಜೆಪಿ ಪಕ್ಷದಿಂದ ಚಿರಾಗ್ ಪಾಸ್ವಾನ್ ಭಾಗವಹಿಸಲಿದ್ದಾರೆ.