ನವದೆಹಲಿ: ಮುಂಬರುವ ದಿನಗಳಲ್ಲಿ ದೇಶದ ಪ್ರತಿ ರೈಲ್ವೆ ನಿಲ್ದಾಣಗಳಲ್ಲಿ ಕುಲ್ಹಾದ್‌ನಲ್ಲಿ ಅಂದರೆ ಮಣ್ಣಿನ ಕುಡಿಕೆಯಲ್ಲಿ ಚಹಾ ಲಭ್ಯವಾಗಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಭಾನುವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಜಸ್ಥಾನದ ಅಲ್ವಾರ್‌ನ ಧಿಗವಾಡ ರೈಲ್ವೆ ನಿಲ್ದಾಣದಲ್ಲಿರುವ ಧಿಗವಾಡ - ಬಂಡಿಕುಯಿ ರೈಲ್ವೆ ಬ್ಲಾಕ್‌ನಲ್ಲಿ ವಿದ್ಯುದ್ದೀಕೃತ ರೈಲ್ವೆ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಪಿಯೂಷ್ ಗೋಯಲ್ (Piyush Goyal), ಇಂದು ದೇಶದಲ್ಲಿ ಸುಮಾರು 400 ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಮಣ್ಣಿನ ಕುಡಿಕೆಯಲ್ಲಿ ಚಹಾ (Tea) ಲಭ್ಯವಿದೆ. ಆದರೆ ಮುಂದಿನ ದಿನಗಳಲ್ಲಿ ಇದು ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಿದರು.


ನಿಲ್ದಾಣಗಳಲ್ಲಿ ಕುಲ್ಹಾದ್‌ನಲ್ಲಿ ಮಾತ್ರ ಚಹಾ ಲಭ್ಯ:
ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ರೈಲ್ವೆ ಸಹಕರಿಸಲಿದೆ.  ರೈಲ್ವೆ ನಿಲ್ದಾಣಗಳಲ್ಲಿ ಕುಲ್ಹಾರ್‌ನಲ್ಲಿ (Kulhad) ಚಹಾ ನೀಡುತ್ತಿದ್ದ ಕಾಲವೊಂದಿತ್ತು. ಪರಿಸರದ ದೃಷ್ಟಿಯಿಂದಲೂ ಇದು ಉತ್ತಮವಾಗಿತ್ತು ಮತ್ತು ಕೊಳಕು ಕೂಡ ಕಡಿಮೆ ಇತ್ತು. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ದೇಶದ ಪ್ರತಿ ರೈಲ್ವೆ ನಿಲ್ದಾಣಗಳಲ್ಲಿ ಚಹಾವನ್ನು ಕುಲ್ಹಾದ್‌ನಲ್ಲಿ ಅಂದರೆ ಮಣ್ಣಿನ ಕುಡಿಕೆಯಲ್ಲಿ ಮಾತ್ರ ಮಾರಾಟ ಮಾಡುವುದು ನಮ್ಮ ಯೋಜನೆ.  ಇದು ಲಕ್ಷಾಂತರ ಕಂಬಾರರಿಗೆ ಉದ್ಯೋಗವನ್ನು ಒದಗಿಸುತ್ತದೆ. ಜೊತೆಗೆ ಪರಿಸರ ಸಂರಕ್ಷಣೆಯಿಂದಲೂ ಒಳ್ಳೆಯದು ಎಂದರು. 


ರೈಲ್ವೆ ಪ್ರಯಾಣಿಕರೇ ಎಚ್ಚರ! ನಿಲ್ದಾಣಕ್ಕೆ ತೆರಳುವ ಮುನ್ನ ನಿಮ್ಮ ಟಿಕೆಟ್ ಅಸಲಿಯೇ/ನಕಲಿಯೇ ಪರಿಶೀಲಿಸಿ


ಖಾದಿ ಗ್ರಾಮೋದ್ಯೋಗ ಇಲಾಖೆ ಒಟ್ಟಾಗಿ ಕೆಲಸ ಮಾಡುತ್ತದೆ :
2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ. ರೈಲ್ವೆ ಜೊತೆಗೆ ಖಾದಿ ಗ್ರಾಮೋದ್ಯೋಗ ಇಲಾಖೆ (ಕೆವಿಐಸಿ) ಈ ಕಾರ್ಯಕ್ಕೆ ಉತ್ತೇಜನ ನೀಡುತ್ತಿದೆ ಎಂದು ರೈಲ್ವೆ ಸಚಿವರು ತಿಳಿಸಿದರು. 


ಮಣ್ಣಿನ ಪಾತ್ರೆಯಲ್ಲಿ ಆಹಾರ ತಯಾರಿಸುವುದರಿಂದ ಏನೆಲ್ಲಾ ಪ್ರಯೋಜನ!


ಭಾರತೀಯ ರೈಲ್ವೆ (INDIAN RAILWAYS) 2030ರ ವೇಳೆಗೆ "ಗ್ರೀನ್ ರೈಲ್ವೆ" ಆಗಲು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುತ್ತಿದೆ. ರೈಲ್ವೆ 2030 ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ನಿಗದಿಪಡಿಸಿದೆ. ರೈಲ್ವೆ ಡಿಸೆಂಬರ್ 2023 ರೊಳಗೆ ಎಲ್ಲಾ ಬ್ರಾಡ್ ಗೇಜ್ ಮಾರ್ಗಗಳ ವಿದ್ಯುದ್ದೀಕರಣವನ್ನು ಘೋಷಿಸಿದೆ. ಅದೇ ಸಮಯದಲ್ಲಿ ಗಾಳಿ ಮತ್ತು ಸೂರ್ಯನ ಬೆಳಕಿನಿಂದ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆಯಲ್ಲೂ ರೈಲ್ವೆ ಕೆಲಸ ಮಾಡುತ್ತಿದೆ. 


ಕರೋನಾ ಸೋಂಕಿನ ಅಪಾಯವನ್ನು ಕಡಿಮೆ ಮಾಡಲಿದೆ 1 ಕಪ್ ಚಹಾ


ರೈಲ್ವೆ ಒದಗಿಸಿದ ಮಾಹಿತಿಯ ಪ್ರಕಾರ ಭಾರತೀಯ ರೈಲ್ವೆ 40,000ಕ್ಕೂ ಹೆಚ್ಚು ಕಿಲೋಮೀಟರ್‌ಗಳನ್ನು ಪೂರ್ಣಗೊಳಿಸಿದೆ (ಕಾರ್ಯನಿರತ ಮಾರ್ಗಗಳ 63% ವಿದ್ಯುದೀಕರಣ). 2009 ರಿಂದ 2014 ರವರೆಗೆ 3,835 ಕಿ.ಮೀ.ಗೆ ಹೋಲಿಸಿದರೆ ರೈಲ್ವೆ 2014-20ರ ಅವಧಿಯಲ್ಲಿ 18,605 ಕಿ.ಮೀ ರೈಲು ಮಾರ್ಗವನ್ನು ವಿದ್ಯುದ್ದೀಕರಿಸಿದೆ. ಕೋವಿಡ್ ಸಮಯದಲ್ಲಿ 365 ಕಿ.ಮೀ ಪ್ರಮುಖ ರೈಲ್ವೆ ಹಳಿಗಳು ಪೂರ್ಣಗೊಂಡಿವೆ.