Supreme Court on hindenburg report : ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಹಿಂಡನ್‌ಬರ್ಗ್ ವರದಿಯ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ಈ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮಿತಿಯು ಅಸ್ತಿತ್ವದಲ್ಲಿರುವ ನಿಯಂತ್ರಣ ವ್ಯವಸ್ಥೆಯನ್ನು ಸುಧಾರಿಸಲು ತನ್ನ ಸಲಹೆಗಳನ್ನು ನೀಡುತ್ತದೆ. ಒಪಿ ಭಟ್, ನ್ಯಾಯಮೂರ್ತಿ ಜೆಪಿ ದೇವಧರ್, ಕೆವಿ ಕಾಮತ್, ಸೋಮಶೇಖರ್ ಸುಂದರೇಶನ್ ಮತ್ತು ನಂದನ್ ನಿಲೇಕಣಿ ಅವರನ್ನು ಈ ಸಮಿತಿಯಲ್ಲಿ ಸೇರಿಸಲಾಗಿದೆ.


COMMERCIAL BREAK
SCROLL TO CONTINUE READING

ಎರಡು ತಿಂಗಳಲ್ಲಿ ವರದಿ ಸಲ್ಲಿಸಬೇಕು ಸೆಬಿ ಮತ್ತು ಸಮಿತಿ :
ಈ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸೆಬಿಗೆ ನ್ಯಾಯಾಲಯ ಆದೇಶಿಸಿದೆ. 2 ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೆಬಿಗೆ ನ್ಯಾಯಾಲಯ ಸೂಚಿಸಿದೆ. ಫೆಬ್ರವರಿ 17 ರಂದು ವಿಚಾರಣೆಯ ಸಂದರ್ಭದಲ್ಲಿ, ಹಿಂಡೆನ್‌ಬರ್ಗ್ ವರದಿಯ ತನಿಖೆಗಾಗಿ ರಚಿಸಲಾಗುವ ಸಮಿತಿಯಲ್ಲಿ ಸೇರ್ಪಡೆಗಾಗಿ ಕೇಂದ್ರವು ಸೂಚಿಸಿದ ತಜ್ಞರ ಹೆಸರನ್ನು ಸ್ವೀಕರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.


ಇದನ್ನೂ ಓದಿ :  Nort East Election Results Highlights: ತ್ರಿಪುರಾದಲ್ಲಿ ಮುಂದುವರೆದ ಥ್ರಿಲ್ಲರ್ ಗೇಮ್, ಬಿಜೆಪಿಗೆ ಮುನ್ನಡೆ, ಆದರೆ...!


ಸಮಿತಿಯ ತನಿಖೆಯ ವ್ಯಾಪ್ತಿ :
1. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಏರಿಳಿತಕ್ಕೆ ಕಾರಣವಾದ ಸಂದರ್ಭಗಳು ಮತ್ತು ಕಾರಣಗಳ ಸಂಪೂರ್ಣ ಮೌಲ್ಯಮಾಪನ  ಮಾಡುತ್ತದೆ. 
2. ಹೂಡಿಕೆದಾರರಲ್ಲಿ ಜಾಗೃತಿಯನ್ನು ಮೂಡಿಸಲು ಕ್ರಮಗಳನ್ನು ಸೂಚಿಸುತ್ತಾರೆ.
3. ಅದಾನಿ ಸಮೂಹ ಅಥವಾ ಇತರ ಕಂಪನಿಗಳಿಗೆ ಸಂಬಂಧಿಸಿದಂತೆ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆಗಳನ್ನು ನಿಭಾಯಿಸಲು ನಿಯಂತ್ರಣ ಸಂಸ್ಥೆ ವಿಫಲವಾಗಿದೆಯೇ ಎಂಬುದನ್ನು ಸಮಿತಿಯು ತನಿಖೆ ಮಾಡುತ್ತದೆ.
4. ಹೂಡಿಕೆದಾರರ ರಕ್ಷಣೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ಹೇಗೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂಬುದನ್ನು ಸಮಿತಿಯು ಸೂಚಿಸಲಿದೆ. 
5. ಅದೇ ಸಮಯದಲ್ಲಿ, ಸಮಿತಿಯು ಭವಿಷ್ಯದಲ್ಲಿ ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ಹೇಗೆ ಬಲಪಡಿಸಬೇಕು ಎನ್ನುವ ಬಗ್ಗೆಯೂ  ಸಲಹೆ ನೀಡುತ್ತದೆ.


ಇದನ್ನೂ ಓದಿ :  Election Results 2023: ತ್ರಿಪುರಾ & ನಾಗಾಲ್ಯಾಂಡ್‍ನಲ್ಲಿ ಬಿಜೆಪಿ, ಮೇಘಾಲಯದಲ್ಲಿ NPP ಮುನ್ನಡೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.