Aircraft Rafale fighter jets : ಭಾರತೀಯ ವಿಮಾನವಾಹಕ ನೌಕೆಗಳಲ್ಲಿ ಬಳಸಲು ಭಾರತೀಯ ನೌಕಾಪಡೆ ಡಸಾಲ್ಟ್ ರಫೇಲ್ ಎಂ ಹಾಗೂ ಬೋಯಿಂಗ್ ಎಫ್/ಎ - 18 ಸೂಪರ್ ಹಾರ್ನೆಟ್ ವಿಮಾನಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳಲಿದೆ. ಭಾರತೀಯ ನೌಕಾಪಡೆ ವಿಮಾನವಾಹಕ ನೌಕೆಗಳಲ್ಲಿ ಬಳಸಲು 26 ವಿಮಾನಗಳ ಖರೀದಿಯನ್ನು ಘೋಷಿಸುವ ಹಂತದಲ್ಲಿದೆ.
ಭಾರತೀಯ ನೌಕಾಪಡೆಯ ಅಧಿಕಾರಿಗಳು ಅನಧಿಕೃತವಾಗಿ ನೀಡಿರುವ ಸೂಚನೆಗಳ ಪ್ರಕಾರ, ಡಸಾಲ್ಟ್ ಏವಿಯೇಷನ್ ಸಂಸ್ಥೆಯ ರಫೇಲ್ ಎಂ ವಿಮಾನಗಳು ಈ ಸ್ಪರ್ಧೆಯಲ್ಲಿ ಬೋಯಿಂಗ್ ಎಫ್/ಎ-18 ಇ/ಎಫ್ ಸೂಪರ್ ಹಾರ್ನೇಟ್ ಅನ್ನು ಸೋಲಿಸಿ, ಭಾರತದ ಪ್ರಥಮ ದೇಶೀಯ ನಿರ್ಮಿತ ವಿಮಾನವಾಹಕ ಐಎನ್ಎಸ್ ವಿಕ್ರಾಂತ್‌ಗೆ ಆಯ್ಕೆಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: Jio ಕಂಪನಿಯ ಅತ್ಯಂತ ಅಗ್ಗದ ಪ್ಲಾನ್ ಇದು, ನೆಟ್ಫ್ಲಿಕ್ಸ್-ಪ್ರೈಮ್ ವಿಡಿಯೋ ಸೇರಿದಂತೆ ಅನಿಯಮಿತ ಕರೆ ಮತ್ತು 200ಜಿಬಿ ಡೇಟಾ!
ಬೋಯಿಂಗ್ ತನ್ನ ಘೋಷಣೆಯಲ್ಲಿ ಒಂದು ವೇಳೆ ವಿದೇಶೀ ರಫ್ತಿನ ಆದೇಶ ಬರದಿದ್ದರೆ, ಸೂಪರ್ ಹಾರ್ನೇಟ್ ವಿಮಾನದ ಉತ್ಪಾದನೆಯನ್ನು 2025ರ ವೇಳೆಗೆ ನಿಲ್ಲಿಸುವುದಾಗಿ ಘೋಷಿಸಿದೆ. ಆ ಘೋಷಣೆಯಲ್ಲಿ, ಅದು ಬಹುತೇಕ ಭಾರತದ ಖರೀದಿಯ ಸಾಧ್ಯತೆಯನ್ನೇ ಉದ್ದೇಶಿಸಿ ಹೇಳಿರುವ ಸಾಧ್ಯತೆಗಳಿವೆ. ಭಾರತೀಯ ವಾಯುಪಡೆ ಈಗಾಗಲೇ 36 ರಫೇಲ್ ವಿಮಾನಗಳನ್ನು ಖರೀದಿಸಿದ್ದು, ಅದೇ ವಿಮಾನಗಳನ್ನು ವಾಯುಪಡೆ ಹಾಗೂ ನೌಕಾಪಡೆಗಳಲ್ಲಿ ಹೊಂದಿರುವುದು ಅನುಕೂಲಕರ ಎಂದು ಭಾವಿಸಲಾಗಿದೆ.
ಕಳೆದ ವರ್ಷ ಗೋವಾದ ಐಎನ್ಎಸ್ ಹನ್ಸಾ ಸಮುದ್ರ ತೀರದ ಸ್ಕೈ ಜಂಪ್ ಪ್ಲಾಟ್‌ಫಾರಂ ಹೊಂದಿರುವ ಪರೀಕ್ಷಾ ಘಟಕದಲ್ಲಿ ಎರಡೂ ವಿಮಾನಗಳನ್ನು ಪರೀಕ್ಷೆಗೊಳಪಡಿಸಲಾಯಿತು. ಈ ಘಟಕದಲ್ಲಿ 44,000 ಟನ್ ತೂಕದ ಐಎನ್ಎಸ್ ವಿಕ್ರಾಂತ್ ನೌಕೆಯಲ್ಲಿರುವ ಶಾರ್ಟ್ ಟೇಕಾಫ್ ಬಟ್ ಅರೆಸ್ಟೆಡ್ ರಿಕವರಿ (ಎಸ್‌ಟಿಒಬಿಎಆರ್) ವ್ಯವಸ್ಥೆಯೂ ಇತ್ತು.
ಭಾರತೀಯ ನೌಕಾಪಡೆ ತನ್ನ ಬಳಿ ಪ್ರಸ್ತುತ ಬಳಕೆಯಲ್ಲಿರುವ, ಕೀವ್ ಕ್ಲಾಸ್ ವಿಮಾನವಾಹಕ ನೌಕೆಯಾದ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬಳಸಲಾಗುತ್ತಿರುವ ಮಿಗ್-29ಕೆ ವಿಮಾನಗಳನ್ನು 2034ರ ವೇಳೆಗೆ ನಿವೃತ್ತಿಗೊಳಿಸುವ ಸಾಧ್ಯತೆಗಳಿವೆ. ಈ ಕುರಿತು ಸರ್ಕಾರ - ಸರ್ಕಾರದ ಒಪ್ಪಂದಕ್ಕಾಗಿ ಕಾಯಲಾಗುತ್ತಿದೆ. 2017ರಲ್ಲಿ ಭಾರತೀಯ ನೌಕಾಪಡೆ ಕೈಗೊಂಡ ಆರ್‌ಎಫ್ಎಲ್ ಪ್ರಕಾರ, 57 ಬಹುಪಾತ್ರಗಳ ವಿಮಾನಗಳನ್ನು ಕೊಳ್ಳಲು ನಿರ್ಧರಿಸಿತ್ತು. ಇದನ್ನು ಬಳಿಕ 26 ವಿಮಾನಗಳಿಗೆ ಇಳಿಸಲಾಯಿತು.
ಇದನ್ನೂ ಓದಿ: ಫ್ಲೈಟ್ ಅಕ್ಸೆಪ್ಟೆನ್ಸ್ ಹಾಟ್ ಟೆಸ್ಟ್‌ನಲ್ಲಿ ಉತ್ತೀರ್ಣಗೊಂಡ ಭಾರತದ ಸಿಇ-20 ಕ್ರಯೋಜೆನಿಕ್ ಇಂಜಿನ್
ಫೆಬ್ರವರಿ ತಿಂಗಳಲ್ಲಿ, ಎಚ್ಎಎಲ್ ತೇಜಸ್ ಲೈಟ್ ಕಾಂಬ್ಯಾಟ್ ವೆಹಿಕಲ್‌ನ ನೌಕಾಪಡೆಯ ಆವೃತ್ತಿ ಐಎನ್ಎಸ್ ವಿಕ್ರಾಂತ್ ಮೇಲಿಳಿಯಿತು. ಇದನ್ನು ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಈ ಬೆಳವಣಿಗೆ ದೇಶೀಯ ನಿರ್ಮಾಣದ, 28 ಟನ್ ತೂಕದ, 16.3 ಉದ್ದದ ಟ್ವಿನ್ ಇಂಜಿನ್ ಡೆಕ್ ಬೇಸ್ಡ್ ಫೈಟರ್ (ಟಿಇಡಿಬಿಎಫ್) ಬಳಸುವ ಕುರಿತು ಸೂಕ್ತ ಹೆಜ್ಜೆಯಾಗಿದೆ ಎಂದಿದ್ದರು. ಭಾರತೀಯ ನೌಕಾಪಡೆ 100 ಟಿಇಡಿಬಿಎಫ್ ಖರೀದಿಸಲು ಎದುರು ನೋಡುತ್ತಿದೆ. "ಗುಣಮಟ್ಟದ ಸಂಬಂಧಿತ ಅವಶ್ಯಕತೆಗಳನ್ನು ಇದು ಪೂರೈಸುತ್ತಿದ್ದು, ಪ್ರಸ್ತುತ ನಾವು ಸುರಕ್ಷತೆಯ ಸಂಸದೀಯ ಸಮಿತಿಯ ಒಪ್ಪಿಗೆಗೆ ಎದುರು ನೋಡುತ್ತಿದ್ದೇವೆ" ಎಂದಿದ್ದರು.
ಟಿಇಡಿಬಿಎಫ್ ವಿಮಾನದ ಮೊದಲ ಮೂಲ ಮಾದರಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿಂದ 2032ರಲ್ಲಿ ಹೊರಬರುವ ಸಾಧ್ಯತೆಗಳಿವೆ. ಸದ್ಯದ ಪ್ರಕಾರ, ಮಿಗ್-29ಕೆಗಳು ಡೆಕ್ ನಿಂದ ಹಾರಾಟ ನಡೆಸಲಿವೆ ಎಂದು ಅಡ್ಮಿರಲ್ ರವಿ ಕುಮಾರ್ ಹೇಳಿದ್ದಾರೆ. ಪ್ರಸ್ತುತ ಸಾಕಷ್ಟು ಮಿಗ್-29ಕೆಗಳು ಲಭ್ಯವಿಲ್ಲದಿರುವುದರಿಂದ, ಸೂಪರ್ ಹಾರ್ನೇಟ್ ಅಥವಾ ರಫೇಲ್ ವಿಮಾನಗಳು ಅವುಗಳ ಸ್ಥಾನ ಪೂರೈಸಲಿವೆ. ಭಾರತ ಪ್ರಸ್ತುತ 45 ಮಿಗ್-29ಕೆ ವಿಮಾನಗಳನ್ನು ಬಳಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.