Election Results 2023: ತ್ರಿಪುರಾದ 60 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 16 ರಂದು ನಡೆದ ಮತದಾನಡದ ಮತ ಎಣಿಕೆ ಕಾರ್ಯ ಮುಂದುವರೆದಿದೆ.ರಾಜ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಆರಂಭಿಕ ಟ್ರೆಂಡ್‌ಗಳಲ್ಲಿ ಸ್ಥಿರವಾದ ಮುನ್ನಡೆ ಸಾಧಿಸಿದ ನಂತರ, ಎಡ-ಕಾಂಗ್ರೆಸ್ ಸ್ವಲ್ಪ ಸಮಯದವರೆಗೆ ಬಿಜೆಪಿಗಿಂತ ಮುಂದಕ್ಕೆ ಹೋಗಿದ್ದವು, ಆದರೆ ನಂತರ ಬಿಜೆಪಿ ಕಮ್ ಬ್ಯಾಕ್ ಮಾಡಿ ಮತ್ತೆ ಮುನ್ನಡೆ ಸಾಧಿಸಿದೆ.
ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಮಧ್ಯಾಹ್ನ 11.44 ಕ್ಕೆ ಬಿಜೆಪಿ 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸಿಪಿಎಂ-ಕಾಂಗ್ರೆಸ್ ಮೈತ್ರಿಕೂಟ 16 ಮತ್ತು ತಿಪ್ರಾ ಮೋಥಾ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಒಂದು ಸ್ಥಾನದಲ್ಲಿ ಮತ್ತು ಸ್ವತಂತ್ರ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮತ್ತು ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ) ನಡುವೆ ಮೈತ್ರಿ ಇದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Election Results 2023: ತ್ರಿಪುರಾ & ನಾಗಾಲ್ಯಾಂಡ್‍ನಲ್ಲಿ ಬಿಜೆಪಿ, ಮೇಘಾಲಯದಲ್ಲಿ NPP ಮುನ್ನಡೆ
ತಿಪ್ರಾ ಮೋಥಾ ಕಿಂಗ್ ಮೇಕರ್ ಆಗುವ ಸಾಧ್ಯತೆ
ಸಿಪಿಎಂ ಮತ್ತು ಕಾಂಗ್ರೆಸ್ ಮೊದಲ ಬಾರಿಗೆ ಇಲ್ಲಿ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ಫಲಿತಾಂಶಗಳ ನಂತರ, ಟಿಪ್ರಾ ಮೋಥಾ ಕಿಂಗ್ ಮೇಕರ್ ಪಾತ್ರ ನಿರ್ವಹಿಸುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ರಾಜ್ಯದಲ್ಲಿ 60 ವಿಧಾನಸಭಾ ಸ್ಥಾನಗಳಿದ್ದು, ಬಹುಮತಕ್ಕೆ ಮ್ಯಾಜಿಕ್ ನಂಬರ್ 31 ಆಗಿದೆ.
ಇದನ್ನೂ ಓದಿ-Viral Video: ಹಿಂದೆಂದೂ ಕಂಡಿರದ ಸರೀಸೃಪಗಳ ರಣಕಾಳಗ: ಈ ಭೀಕರ ಕಾದಾಟದಲ್ಲಿ ಗೆದ್ದದ್ದು….!! ವಿಡಿಯೋ ನೋಡಿ
2018 ರ ಫಲಿತಾಂಶ
2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 36 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರ ಪಕ್ಷವಾದ ಐಪಿಎಫ್‌ಟಿ 18 ಸ್ಥಾನಗಳನ್ನು ಗೆದ್ದಿದೆ. ಸಿಪಿಎಂ ನೇತೃತ್ವದ ಎಡರಂಗ 16 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಪಡೆದಿರಲಿಲ್ಲ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.