ನವದೆಹಲಿ: ತಾಂತ್ರಿಕ ಆಚರಣೆಯ ಭಾಗವಾಗಿ ತನ್ನ ನೆರೆಹೊರೆಯವರ 10 ವರ್ಷದ ಮಗನನ್ನು ಕೊಂದು ಅವನ ರಕ್ತವನ್ನು ಕುಡಿದಿದ್ದ 33 ವರ್ಷದ ಮಕ್ಕಳಿಲ್ಲದ ಮಹಿಳೆಗೆ ಬರೇಲಿಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಇದು ಮಗುವನ್ನು ಗರ್ಭಧರಿಸಲು ಸಹಾಯ ಮಾಡುತ್ತದೆ ಎಂದು ಮಹಿಳೆ ನಂಬಿದ್ದರು.


COMMERCIAL BREAK
SCROLL TO CONTINUE READING

ಅಪರಾಧಕ್ಕೆ ಸಹಾಯ ಮಾಡಿದ ಮಹಿಳೆಯ ಪರಮಾಪ್ತ ಮತ್ತು ಆಕೆಯ ಸೋದರಸಂಬಂಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವರದಿಗಳ ಪ್ರಕಾರ, ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಜಮುಕಾ ಗ್ರಾಮದಲ್ಲಿ ಡಿಸೆಂಬರ್ 5, 2017 ರಂದು ಅಪರಾಧ ನಡೆದಿದೆ.


ಇದನ್ನೂ ಓದಿ: IND vs NZ 1st ODI: ಕ್ರೀಸ್ ನಲ್ಲಿ ಬಿದ್ದು ಸಖತ್ ಶಾಟ್ ಹೊಡೆದ ವಾಷಿಂಗ್ಟನ್ ಸುಂದರ್: ವಿಡಿಯೋ ನೋಡಿ


ಧನ್ ದೇವಿ ತನ್ನ ಪರಪುರುಷ ಸೂರಜ್ ಮತ್ತು ಸೋದರಸಂಬಂಧಿ ಸುನೀಲ್ ಕುಮಾರ್ ಸಹಾಯದಿಂದ ತನ್ನ ನೆರೆಹೊರೆಯವರ ಮಗನನ್ನು ಅಪಹರಿಸಿ ಕೊಂದಿದ್ದಾಳೆ. ಘಟನೆಯ ಮೂರು ದಿನಗಳ ನಂತರ ಡಿಸೆಂಬರ್ 8 ರಂದು ಆಕೆಯನ್ನು ಬಂಧಿಸಲಾಯಿತು. ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ವಿನೋದ್ ಶುಕ್ಲಾ, "ಇದು ಭಯಾನಕ ಅಪರಾಧ, ಮಹಿಳೆ ಮೊದಲು ಹುಡುಗನ ರಕ್ತವನ್ನು ಹೊರತೆಗೆದು, ಅವಳ ಮುಖದ ಮೇಲೆ ಲೇಪಿಸಿ ಮತ್ತು ಕೆಲವು ಹನಿಗಳನ್ನು ಕುಡಿದಿದ್ದಾಳೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: Shikhar Dhawan Record: ನ್ಯೂಜಿಲೆಂಡ್ ವಿರುದ್ಧ ಅರ್ಧಶತಕ ಬಾರಿಸಿ ದಿಗ್ಗಜರ ದಾಖಲೆ ಪುಟ ಸೇರಿದ ಶಿಖರ್ ಧವನ್


ಇದೆ ವೇಳೆ ಆಕೆಯನ್ನು ತನಿಖೆಗೆ ಒಳಪಡಿಸಿದಾಗ ಮಹಿಳೆಗೆ ಆರು ವರ್ಷಗಳ ನಂತರವೂ ಮಕ್ಕಳಾಗದ ಕಾರಣ ಆಕೆ ತಾಂತ್ರಿಕರನ್ನು ಭೇಟಿ ಮಾಡಿ ಕಳಂಕವನ್ನೆಲ್ಲವನ್ನು ತೆಗೆದುಹಾಕಲು ಆಕೆ ನಿರ್ಧರಿಸಿದಳು.ತನ್ನ ಅತ್ತಿಗೆಯ ಮನೆಯಲ್ಲಿ ನಿಂದಿಸುವಿಕೆಯಿಂದ ಬೇಸತ್ತು, ಧನ್ ದೇವಿ ತನ್ನ ಪತಿ, ಪಿಲಿಭಿತ್ ಜಿಲ್ಲೆಯ ಮಧೋತಂಡಾ ನಿವಾಸಿ ಧರಂಪಾಲ್ ಅವರನ್ನು ತೊರೆದರು ಮತ್ತು ಶಾಜಹಾನ್‌ಪುರದಲ್ಲಿ ತನ್ನ ಸಂಬಂಧಿಕರೊಂದಿಗೆ ವಾಸಿಸಲು ಪ್ರಾರಂಭಿಸಿದರು, ಅಲ್ಲಿ ಅವರು ತಂತ್ರಿಯನ್ನು ಭೇಟಿಯಾಗಿದ್ದರು ಎನ್ನಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.