Washington Sunder: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ತಂಡದ ಡ್ಯಾಶಿಂಗ್ ಆಲ್‌ರೌಂಡರ್ ರವೀಂದ್ರ ಜಡೇಜಾ ಏಷ್ಯಾ ಕಪ್ 2022 ರಿಂದ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಜಡೇಜಾ ಬದಲಿಗೆ ಈ ಸರಣಿಯಲ್ಲಿ ಆಡುತ್ತಿರುವ ಆಟಗಾರನೊಬ್ಬ ತಮ್ಮ ಬ್ಯಾಟ್ ನಿಂದ ಬಿರುಸಿನ ಇನ್ನಿಂಗ್ಸ್ ಆಟವಾಡಿದ್ದು, ಜಡೇಜಾ ಆಟವನ್ನು ನೆನಪಿಸಿದ್ದಾರೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: FIFA Japanese Fans Video: ಫಿಫಾ ಸ್ಟೇಡಿಯಂ ಸ್ವಚ್ಛಗೊಳಿಸಿದ ಜಪಾನ್ ಫ್ಯಾನ್ಸ್: ಈ ಸೇವೆಗೆ ಕಾರಣ ಏನು ಗೊತ್ತಾ?
ಇನ್ನು ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅಬ್ಬರ ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ಮನರಂಜನೆಯೂಟ ಬಡಿಸಿದ್ದು, ವಾಷಿಂಗ್ಟನ್ ಸುಂದರ್. ಏಳನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಸುಂದರ್ ಅಬ್ಬರಿಸಿದ್ದರು. ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಸುಂದರ್ ಸ್ಟಂಟ್ ಗಳ ಮೂಲಕ ರನ್ ಕಲೆಹಾಕಿದ್ದಾರೆ.
ಮ್ಯಾಟ್ ಹೆನ್ರಿ ಎಸೆದ ಬಾಲ್ ನ್ನು ಬೌಂಡರಿ ದಾಟಿಸಲು ಸುಂದರ್ ವೈಡ್ ಗೆರೆಯ ಮೇಲೆ ಬಿದ್ದು, ಬ್ಯಾಟ್ ಮಾಡಿದರು. ಇದರ ವಿಡಿಯೋವನ್ನು PRIME Video IN ಟ್ವಿಟರ್ ಅಧಿಕೃತ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
can you blame us for making the obvious '𝐀𝐭𝐢 𝐒𝐮𝐧𝐝𝐚𝐫' pun for this Washi batting video? 😅
Watch the 1st #NZvIND ODI, LIVE & EXCLUSIVE on Prime Video: https://t.co/3btfvTeRUG@Sundarwashi5 #NZvINDonPrime #CricketOnPrime pic.twitter.com/pBVvRBAmZP
— prime video IN (@PrimeVideoIN) November 25, 2022
ಇನ್ನು 2022ರ ಏಷ್ಯಾಕಪ್‌ನಿಂದ ರವೀಂದ್ರ ಜಡೇಜಾ ಗಾಯದ ಸಮಸ್ಯೆ ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಟಿ20 ವಿಶ್ವಕಪ್‌ನಲ್ಲೂ ಅವರು ತಂಡದ ಭಾಗವಾಗಿರಲಿಲ್ಲ. ಇನ್ನು ಬಾಂಗ್ಲಾದೇಶ ಪ್ರವಾಸದಲ್ಲೂ ಜಡೇಜಾ ಟೀಂ ಇಂಡಿಯಾ ಪರ ಆಡುವುತ್ತಿಲ್ಲ. ಇದೀಗ, ನ್ಯೂಜಿಲೆಂಡ್ ವಿರುದ್ಧ ಜಡೇಜಾ ಅನುಪಸ್ಥಿತಿಯಲ್ಲಿ, ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಫಿನಿಶರ್ ಪಾತ್ರದಲ್ಲಿ ಅವರ ಬಿರುಸಿನ ಇನ್ನಿಂಗ್ಸ್ ನ್ಯೂಜಿಲ್ಯಾಂಡ್ ಗೆ ಚಳಿ ಹಿಡಿಸಿದಂತಾಗಿದೆ.
ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ವಾಷಿಂಗ್ಟನ್ ಸುಂದರ್ 16 ಎಸೆತಗಳಲ್ಲಿ 231.25 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 37 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು. ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಗರಿಷ್ಠ 80 ರನ್, ಶಿಖರ್ ಧವನ್ 72 ಮತ್ತು ಶುಭಮನ್ ಗಿಲ್ 50 ರನ್ ಗಳಿಸಿದರು. ಮತ್ತೊಂದೆಡೆ, ಟಿಮ್ ಸೌಥಿ ಮತ್ತು ಲಾಕಿ ಫರ್ಗುಸನ್ ನ್ಯೂಜಿಲೆಂಡ್‌ನಿಂದ ಹೆಚ್ಚು 3-3 ವಿಕೆಟ್ ಪಡೆದರು.
ಇದನ್ನೂ ಓದಿ: IND vs NZ 1st ODI: ಟೀಂ ಇಂಡಿಯಾಗೆ ಲಗ್ಗೆ ಇಟ್ಟ ಈ ಮಾರಕ ಆಟಗಾರ: ಎದುರಾಳಿಗೆ ನಡುಕ ಶುರು!
ಇದೀಗ ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲ್ಯಾಂಡ್ 25 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 115 ರನ್ ಕಲೆ ಹಾಕಿದೆ. ಸದ್ಯ ಮೊದಲ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂದು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ