IND vs NZ 1st ODI: ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲು: ಕೀವಿಸ್ ಬ್ಯಾಟಿಂಗ್ ಅಬ್ಬರಕ್ಕೆ ತತ್ತರಿಸಿದ ಟೀಂ ಇಂಡಿಯಾ

IND vs NZ 1st ODI: ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಕಲೆ ಹಾಕಿದೆ. ಟೀಂ ಇಂಡಿಯಾ ಪರವಾಗಿ ನಾಯಕ ಶಿಖರ್ ಧವನ್ (72), ಶ್ರೇಯಸ್ ಅಯ್ಯರ್ (80) ಮತ್ತು ಶುಭಮನ್ ಗಿಲ್ (50) ಅರ್ಧ ಶತಕ ಬಾರಿಸಿದ್ದಾರೆ. ಇನ್ನೊಂದೆಡೆ ನ್ಯೂಜಿಲೆಂಡ್ ಪರವಾಗಿ ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಪಡೆದಿದ್ದಾರೆ.

Written by - Bhavishya Shetty | Last Updated : Nov 25, 2022, 02:51 PM IST
    • ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋಲು
    • ಕೀವಿಸ್ ಬ್ಯಾಟಿಂಗ್ ಗೆ ತತ್ತರಿಸಿದ ಟೀಂ ಇಂಡಿಯಾ
    • ಟೀಂ ಇಂಡಿಯಾದ ತ್ರಿಮೂರ್ತಿಗಳ ಅರ್ಧ ಶತಕ ವ್ಯರ್ಥ
IND vs NZ 1st ODI: ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲು: ಕೀವಿಸ್ ಬ್ಯಾಟಿಂಗ್ ಅಬ್ಬರಕ್ಕೆ ತತ್ತರಿಸಿದ ಟೀಂ ಇಂಡಿಯಾ title=
Team India

IND vs NZ 1st ODI: ಇಂದು ಬೆಳಗ್ಗೆ 7 ಗಂಟೆಗೆ ಆಕ್ಲೆಂಡ್‌ ಮೈದಾನದಲ್ಲಿ ಪ್ರಾರಂಭವಾದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡಿದೆ. ನ್ಯೂಜಿಲ್ಯಾಂಡ್ 309 ರನ್ ಕಲೆ ಹಾಕಿ ಭರ್ಜರಿ ಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಜವಾಬ್ದಾರಿಯನ್ನು ಧವನ್ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: Shikhar Dhawan Record: ನ್ಯೂಜಿಲೆಂಡ್ ವಿರುದ್ಧ ಅರ್ಧಶತಕ ಬಾರಿಸಿ ದಿಗ್ಗಜರ ದಾಖಲೆ ಪುಟ ಸೇರಿದ ಶಿಖರ್ ಧವನ್

ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಕಲೆ ಹಾಕಿದೆ. ಟೀಂ ಇಂಡಿಯಾ ಪರವಾಗಿ ನಾಯಕ ಶಿಖರ್ ಧವನ್ (72), ಶ್ರೇಯಸ್ ಅಯ್ಯರ್ (80) ಮತ್ತು ಶುಭಮನ್ ಗಿಲ್ (50) ಅರ್ಧ ಶತಕ ಬಾರಿಸಿದ್ದಾರೆ. ಇನ್ನೊಂದೆಡೆ ನ್ಯೂಜಿಲೆಂಡ್ ಪರವಾಗಿ ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಪಡೆದಿದ್ದಾರೆ.

ಶಿಖರ್ ದಾಖಲೆ:

ಟೀಂ ಇಂಡಿಯಾ ಸೋಲು ಕಂಡಿದ್ದರೂ ಸಹ ಭಾರತದ ಪರವಾಗಿ ಅದ್ಭುತ ಬ್ಯಾಟಿಂಗ್ ಮಾಡಲಾಗಿತ್ತು. ಶಿಖರ್ ಧವನ್, ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಅರ್ಧ ಶತಕ ಸಿಡಿಸಿದ್ದರು. ಇನ್ನೊಂದೆಡೆ ಶಿಖರ್ ಧವನ್ ಈ ಪಂದ್ಯದಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ 12000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಏಳನೇ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ವಾಷಿಂಗ್ಟನ್ ಸುಂದರ್ ಸ್ಟಂಟ್:

ಏಳನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಸುಂದರ್, ಟೀಂ ಇಂಡಿಯಾದ ಟಾರ್ಗೆಟ್ 306 ರನ್ ದಾಟುವಂತೆ ಮಾಡಿದರು. ಇನ್ನು ಮಾಟ್ ಹೆನ್ಸಿ ಎಸೆದ ಬಾಲ್ ನ್ನು ಬೌಂಡರಿ ಶಾಟ್ ಹೊಡೆಯಬೇಕೆಂದು ವೈಡ್ ಲೈನ್ ಗೆ ಬಿದ್ದು ಬ್ಯಾಟಿಂಗ್ ಮಾಡಿದರು. ಈ ಸ್ಟಂಟ್ ವಿಡಿಯೋ ಅಮೆಜಾನ್ ಪ್ರೈಮ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: IND vs NZ 1st ODI: ಕ್ರೀಸ್ ನಲ್ಲಿ ಬಿದ್ದು ಸಖತ್ ಶಾಟ್ ಹೊಡೆದ ವಾಷಿಂಗ್ಟನ್ ಸುಂದರ್: ವಿಡಿಯೋ ನೋಡಿ

ನ್ಯೂಜಿಲ್ಯಾಂಡ್ ಪರವಾಗಿ ಟಾಮ್ ಲಾಥಮ್ ಶತಕ ಸಿಡಿಸಿದ್ದಾರೆ. ಇನ್ನುಳಿದಂತೆ ಕೇನ್ ವಿಲಿಯಮ್ಸನ್ ಕೂಡ 90ರ ಗಡಿ ದಾಟಿದ್ದಾರೆ. ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಬೌಲಿಂಗ್ ನಲ್ಲಿ ಇನ್ನಷ್ಟು ಸುಧಾರಿಸುವ ಅವಶ್ಯಕತೆಯಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News