Shikhar Dhawan Record: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ನಾಯಕತ್ವ ವಹಿಸಿರುವ ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಅಪರೂಪದ ಸಾಧನೆ ಮಾಡಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ 12000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಏಳನೇ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ಈ ಮೂಲಕ ನಿರ್ಮಿಸಿದ್ದಾರೆ.
ಇದನ್ನೂ ಓದಿ: FIFA Japanese Fans Video: ಫಿಫಾ ಸ್ಟೇಡಿಯಂ ಸ್ವಚ್ಛಗೊಳಿಸಿದ ಜಪಾನ್ ಫ್ಯಾನ್ಸ್: ಈ ಸೇವೆಗೆ ಕಾರಣ ಏನು ಗೊತ್ತಾ?
ಇಂದು ಬೆಳಗ್ಗೆ 7 ಗಂಟೆಗೆ ಆಕ್ಲೆಂಡ್ ಮೈದಾನದಲ್ಲಿ ಪ್ರಾರಂಭವಾದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧವನ್ 43 ರನ್‌ಗಳ ವೈಯಕ್ತಿಕ ರನ್ ಕಲೆ ಹಾಕಿದರು. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಜವಾಬ್ದಾರಿಯನ್ನು ಧವನ್ ನಿಭಾಯಿಸುತ್ತಿದ್ದಾರೆ.
ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಶಿಖರ್ ಧವನ್ 12,000 ರನ್ ಗಡಿ ತಲುಪಿದ್ದಾರೆ. 297 ಪಂದ್ಯಗಳಲ್ಲಿ 12025 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಇದರಲ್ಲಿ 167 ಏಕದಿನ ಪಂದ್ಯಗಳು ಸೇರಿವೆ. ಏಕದಿನ ಪಂದ್ಯಗಳಲ್ಲಿ 17 ಶತಕ ಮತ್ತು 39 ಅರ್ಧಶತಕಗಳೊಂದಿಗೆ 6,744 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಎಲ್ಲರಿಗಿಂತ ಮುಂದಿದ್ದಾರೆ. ಸಚಿನ್ ತಮ್ಮ ವೃತ್ತಿ ಜೀವನದ 551 ಪಂದ್ಯಗಳಲ್ಲಿ 21999 ರನ್ ಗಳಿಸಿದ್ದಾರೆ. ಸೌರವ್ ಗಂಗೂಲಿ (437 ಪಂದ್ಯಗಳಲ್ಲಿ 15,622), ರಾಹುಲ್ ದ್ರಾವಿಡ್ (449 ಪಂದ್ಯಗಳಲ್ಲಿ 15,271), ವಿರಾಟ್ ಕೊಹ್ಲಿ (296 ಪಂದ್ಯಗಳಲ್ಲಿ 13,786), ಎಂಎಸ್ ಧೋನಿ (423 ಪಂದ್ಯಗಳಲ್ಲಿ 13,353) ಮತ್ತು ಯುವರಾಜ್ ಸಿಂಗ್ (12,633 ರಲ್ಲಿ 423 ಪಂದ್ಯಗಳಲ್ಲಿ) ನಂತರದ ಸ್ಥಾನದಲ್ಲಿದ್ದಾರೆ.
FIFTY for @SDhawan25 - his 3⃣9⃣th ODI half-century! 👍 👍#TeamIndia inching closer to the 100-run mark
Follow the match 👉 https://t.co/jmCUSLdeFf #NZvIND
📸 Courtesy: Photosport NZ pic.twitter.com/x8a89Un404
— BCCI (@BCCI) November 25, 2022
ಮೊದಲ ಏಕದಿನ ಪಂದ್ಯದಲ್ಲಿ ಭಾರತ ಬೃಹತ್ ಸ್ಕೋರ್ ಮಾಡಿದೆ. ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿದೆ. ನಾಯಕ ಶಿಖರ್ ಧವನ್ (72), ಶ್ರೇಯಸ್ ಅಯ್ಯರ್ (80) ಮತ್ತು ಶುಭಮನ್ ಗಿಲ್ (50) ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ನ್ಯೂಜಿಲೆಂಡ್ ಬೌಲರ್‌ಗಳ ಪೈಕಿ ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: IND vs NZ 1st ODI: ಕ್ರೀಸ್ ನಲ್ಲಿ ಬಿದ್ದು ಸಖತ್ ಶಾಟ್ ಹೊಡೆದ ವಾಷಿಂಗ್ಟನ್ ಸುಂದರ್: ವಿಡಿಯೋ ನೋಡಿ
ಸದ್ಯ ಗುರಿ ಬೆನ್ನಟ್ಟಿದ ಕಿವೀಸ್ 38 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 211 ರನ್ ಗಳಿಸಿದೆ. ನ್ಯೂಜಿಲೆಂಡ್ ಗೆಲುವಿಗೆ 12 ಓವರ್ ಗಳಲ್ಲಿ 96 ರನ್ ಗಳ ಅಗತ್ಯವಿದೆ. ಲಾಥಮ್ (73) ಮತ್ತು ಕೇನ್ ವಿಲಿಯಮ್ಸನ್ (72) ಕ್ರೀಸ್‌ನಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.