ನವದೆಹಲಿ: ಒಂದು ವೇಳೆ ನೀವು ಪಿಎಚ್‌ಡಿ ಅಥವಾ ಡಾಕ್ಟರೇಟ್ ಪದವಿ ಹೊಂದಿದ್ದರೆ, ನೀವು ಎಸ್‌ಬಿಐ (SBI) ಬ್ಯಾಂಕಿನ ಆಫರ್ ಲಾಭವನ್ನು ಪಡೆಯಬಹುದು. ವಾಸ್ತವವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಿಎಚ್‌ಡಿ ಮಾಡಿದ ಭಾರತೀಯ ನಾಗರಿಕರಿಂದ ಡಾಕ್ಟರೇಟ್ ಸಂಶೋಧನಾ ಫೆಲೋಶಿಪ್ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಸೆಪ್ಟೆಂಬರ್ 18 ರಿಂದ ಬ್ಯಾಂಕಿನಿಂದ ಆನ್‌ಲೈನ್ ಅರ್ಜಿಗಳನ್ನು ಕೋರಲಾಗಿದ್ದು, ಇದು ಇನ್ನೂ ಪ್ರಗತಿಯಲ್ಲಿದೆ. ಆದರೆ,  ಆನ್‌ಲೈನ್ ನೋಂದಣಿಗೆ ಇದೀಗ ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿವೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ SBIನಲ್ಲಿ ಕೆಲಸ ಮಾಡಲು ಇಲ್ಲಿದೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ


2 ವರ್ಷಗಳ ಕಾಂಟ್ರಾಕ್ಟ್
ಫೆಲೋಶಿಪ್ನಲ್ಲಿ ಆಯ್ಕೆಯಾದ ಪ್ರತಿ ಸ್ಕಾಲರ್ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳನ್ನು ಬ್ಯಾಂಕಿನಿಂದ ಸ್ಟೈಫಂಡ್ ಆಗಿ ಪಡೆಯಲಿದ್ದಾರೆ. ಇದಕ್ಕಾಗಿ ಬ್ಯಾಂಕ್‌ನಿಂದ 2 ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗುವುದು. ನೀವು ಸಹ ಈ ಫೆಲೋಶಿಪ್ನ ಲಾಭವನ್ನು ಪಡೆಯಲು ಬಯಸಿದರೆ, ನಿಮ್ಮ ಬಳಿ ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದೆ. ಬ್ಯಾಂಕಿನ ಈ ಪ್ರಸ್ತಾಪದ ಲಾಭವನ್ನು ಪಡೆಯಲು ನೀವು ಬಯಸಿದರೆ,  ಅಕ್ಟೋಬರ್ 8 ರೊಳಗೆ ನಿಮ್ಮ ಅರ್ಜಿಯನ್ನು ಸಲ್ಲಿಸಿ.


ಇದನ್ನು ಓದಿ- ಈಗ ಗ್ರಾಹಕರಿಗೆ ಚೆಕ್‌ಬುಕ್‌ಗೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ ಸಿಗಲಿದೆ ಈ ವಿಶೇಷ ಸೌಲಭ್ಯ


ಅರ್ಜಿ ಸಲ್ಲಿಕೆಗೆ ಷರತ್ತುಗಳು
ಬ್ಯಾಂಕ್ ಪ್ರಕಾರ, ಆನ್‌ಲೈನ್ ಅರ್ಜಿಯ ಹಾರ್ಡ್ ನಕಲು 2020 ರ ಅಕ್ಟೋಬರ್ 15 ರೊಳಗೆ ಮುಂಬೈನ ಎಸ್‌ಬಿಐನ ಕಾರ್ಪೊರೇಟ್ ಕಚೇರಿಗೆ ತಲುಪಬೇಕು. ಫೆಲೋಶಿಪ್ಗಾಗಿ ಅರ್ಜಿ ಸಲ್ಲಿಸಲು, 31 ಜುಲೈ 2020 ರಂದು ನಿಮ್ಮ ವಯಸ್ಸು 40 ಕ್ಕಿಂತ ಹೆಚ್ಚಿರಬಾರದು. ಇದೇ ವೇಳೆ, ಈ ಕಾರ್ಯಕ್ರಮವು 2 ವರ್ಷಗಳ ಒಪ್ಪಂದದ ಅವಧಿಯನ್ನು ಹೊಂದಿರುತ್ತದೆ. ಈ ಕಾರ್ಯಕ್ರಮಕ್ಕಾಗಿ ಪ್ರಸ್ತುತ 5 ಖಾಲಿ ಹುದ್ದೆಗಳನ್ನು ಬ್ಯಾಂಕ್ ಘೋಷಿಸಿದೆ. ಕಿರುಪಟ್ಟಿ ಮತ್ತು ಸಂದರ್ಶನದ ಮೂಲಕ ಫೆಲೋಶಿಪ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಹಾಗೂ ಸಂದರ್ಶಕರ ಕರೆ ಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು. 


ಇದನ್ನು ಓದಿ- SBI YONO ತನ್ನ ಗ್ರಾಹಕರಿಗೆ ನೀಡುತ್ತಿದೆ ಈ ವಿಶೇಷ ಸೌಲಭ್ಯ


ಈ ವಿಷಯಗಳಲ್ಲಿ Ph.D ಇರಬೇಕು
ಬ್ಯಾಂಕ್ ವತಿಯಿಂದ ಆಯ್ಕೆಯಾದ ಸ್ಕಾಲರ್ ಅಭ್ಯರ್ಥಿಗಳನ್ನೂ  ಕೋಲ್ಕತ್ತಾದ ಸ್ಟೇಟ್ ಬ್ಯಾಂಕ್ ಇನ್ಸ್ಟಿಟ್ಯೂಟ್ ಆಫ್ ಲೀಡರ್ಶಿಪ್ಗೆ ಕಳುಹಿಸಲಾಗುವುದು.  ಅರ್ಜಿದಾರರು ಬ್ಯಾಂಕಿಂಗ್, ಹಣಕಾಸು, ಐಟಿ ಅಥವಾ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ವಿಷಯದಲ್ಲಿ ಪಿಎಚ್‌ಡಿ ಹೊಂದಿರಬೇಕು. ಇದಲ್ಲದೆ, ಅವರ ಶೈಕ್ಷಣಿಕ ದಾಖಲೆಯೂ ಉತ್ತಮವಾಗಿರಬೇಕು. ಎ ಕ್ಯಾಟಗರಿ ಜರ್ನಲ್ಸ್‌ನಲ್ಲಿ ಲೇಖಕ ಅಥವಾ ಸಹ ಲೇಖಕರಾಗಿ ಕಾಗದವನ್ನು ಪ್ರಕಟಿಸಿದರೆ, ನಂತರ ಅರ್ಜಿದಾರರಿಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಐಐಎಂ, ಐಐಟಿ, ಐಎಸ್‌ಬಿ, ಎಕ್ಸ್‌ಎಲ್‌ಆರ್‌ಐ ಅಥವಾ ಅವರ ಸಮಾನ ಸಂಸ್ಥೆ ಅಥವಾ ಕನ್ಸಲ್ಟೆನ್ಸಿಯಲ್ಲಿ ಬೋಧನೆ / ಸಂಶೋಧನಾ ಕಾರ್ಯಗಳಲ್ಲಿ ಕನಿಷ್ಠ 3 ವರ್ಷಗಳ ನಂತರದ ಅರ್ಹತಾ ಅನುಭವವನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು  https://bank.sbi/careers ಹಾಗೂ  https://www.sbi.co.in/careers ವೆಬ್ ಸೈಟ್ ಘೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಬೇಕು.


ಇದನ್ನು ಓದಿ- ಇಂದಿನಿಂದ ಬದಲಾಗಿವೆ DEBIT ಹಾಗೂ CREDIT ಕಾರ್ಡ್ ನಿಯಮಗಳು... ನಿಮಗೂ ಗೊತ್ತಿರಲಿ