ನವದೆಹಲಿ: ಒಂದು ವೇಳೆ ನೀವು ಸರ್ಕಾರಿ ಬ್ಯಾಂಕಿನಲ್ಲಿ ಕೆಲಸ ಪಡೆಯಲು ಬಯಸಿದ್ದಾರೆ, ದೇಶದ ಸಾರ್ವತ್ರಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಮಗಾಗಿ ಸಾಕಷ್ಟು ಅವಕಾಶಗಳನ್ನು ತಂದಿದೆ. ಎಸ್‌ಬಿಐ ಅನೇಕ ಹುದ್ದೆಗಳಲ್ಲಿ ಜನರನ್ನು ನೇಮಕ ಮಾಡಿಕೊಳ್ಳುತ್ತಿದೆ. ನೀವು ಸಹ ಸಿದ್ಧರಾಗಿದ್ದರೆ, ನೀವು ತಕ್ಷಣ ಎಸ್‌ಬಿಐ ಪೋರ್ಟಲ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹಾಗಾದರೆ ಬನ್ನಿ SBI ಯಾವ ಯಾವ ಹುದೆಗಳಿಗೆ ಅರ್ಜಿ ಆಹ್ವಾನಿಸಿದೆ ಹಾಗೂ ಅವುಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಯೋಣ.
ಇದನ್ನು ಓದಿ- ಅಗ್ಗದ ದರದಲ್ಲಿ ಮನೆ, ಅಂಗಡಿ ಹಾಗೂ ಪ್ಲಾಟ್ ಖರೀದಿಸಲು ಶೀಘ್ರದಲ್ಲಿಯೇ SBI ನಿಂದ ಯೋಜನೆ ಜಾರಿ
ಅಕ್ಟೋಬರ್ 8 ಕೊನೆಯ ದಿನಾಂಕ
ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳು ಖಾಲಿ ಇರುವ ಕುರಿತು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪಟ್ಟಿ ಬಿಡುಗಡೆ ಮಾಡಿದೆ. ನೀವು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ಅದರ ಕೊನೆಯ ದಿನಾಂಕ ಅಕ್ಟೋಬರ್ 8 ಆಗಿದೆ. ಇದಕ್ಕಾಗಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಇದನ್ನು ಓದಿ- ತನ್ನ ಖಾತೆದಾರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟಿಸಿದ SBI
SBI ನಲ್ಲಿ ಈ ಹುದ್ದೆಗಳು ಖಾಲಿ ಇವೆ
ಖಾಲಿಇರುವ ಹುದ್ದೆಗಳು ಸಂಖ್ಯೆ
- ಡೆಪ್ಯೂಟಿ ಮ್ಯಾನೇಜರ್ ಸೆಕ್ಯುರಿಟಿ 28
- ವ್ಯವಸ್ಥಾಪಕ (ಚಿಲ್ಲರೆ ಉತ್ಪನ್ನಗಳು) 05
- ಡೇಟಾ ತರಬೇತುದಾರ 01
- ಡೇಟಾ ಅನುವಾದಕ 01
- ಹಿರಿಯ ಸಲಹೆಗಾರ ವಿಶ್ಲೇಷಕ 01
- ಎಜಿಎಂ (ಎಂಟರ್‌ಪ್ರೈಸ್ ಮತ್ತು ಟೆಕ್ನಾಲಜಿ ಆರ್ಕಿಟೆಕ್ಚರ್) 01
- ಡೇಟಾ ಸಂರಕ್ಷಣಾ ಅಧಿಕಾರಿ 01
- ಡೆಪ್ಯೂಟಿ ಮ್ಯಾನೇಜರ್ (ಡೇಟಾ ಸೈಂಟಿಸ್ಟ್) 11
- ಮ್ಯಾನೇಜರ್ (ಡೇಟಾ ಸೈಂಟಿಸ್ಟ್) 11
- ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ ಆಫೀಸರ್) 05
- ಅಪಾಯ ತಜ್ಞ - ವಲಯ (ಸ್ಕೇಲ್ -3) 05
- ಅಪಾಯ ತಜ್ಞ - ವಲಯ (ಸ್ಕೇಲ್ -2) 05
- ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್ (ಸ್ಕೇಲ್ -2) 03
- ರಿಸ್ಕ್ ಸ್ಪೆಷಲಿಸ್ಟ್-ಕ್ರೆಡಿಟ್ (ಸ್ಕೇಲ್ -3) 02
- ಅಪಾಯ ತಜ್ಞ - ಕ್ರೆಡಿಟ್ (ಸ್ಕೇಲ್ -2) 02
- ಅಪಾಯ ತಜ್ಞ - ಉದ್ಯಮ (ಸ್ಕೇಲ್ -2) 01
- ರಿಸ್ಕ್ ಸ್ಪೆಷಲಿಸ್ಟ್-ಐಎನ್ಡಿ ಎಎಸ್ (ಸ್ಕೇಲ್ -3) 04
ಈ ಹುದ್ದೆಗಳಲ್ಲಿ ನೇಮಕ ರೆಗ್ಯುಲರ್ ಆಗಿದೆ ಎಂಬುದನ್ನು ನೆನಪಿನಲ್ಲಿಡಿ, ಆದರೆ ಡೇಟಾ ಸಂರಕ್ಷಣಾ ಅಧಿಕಾರಿಯ ನೇಮಕವು ಕಾಂಟ್ರಾಕ್ಟ್ ಆಧಾರದ ಮೇಲೆ ಇರುತ್ತದೆ.
ಹೇಗೆ ಅರ್ಜಿ ಸಲ್ಲಿಸಬೇಕು?
1. ಮೊದಲು ನೀವು ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಆಗಿರುವ https://bank.sbi/web/careers ಗೆ ಭೇಟಿ ನೀಡಿ.
2. ಇಲ್ಲಿ ನೀವು ಕರಿಯರ್ ಲಿಂಕ್ ಅನ್ನು ಕ್ಲಿಕ್ ಮಾಡಿ
3. ಇತ್ತೀಚಿನ ಪ್ರಕಟಣೆ ವಿಭಾಗದಲ್ಲಿ, ನೀವು ಅರ್ಜಿ ಸಲ್ಲಿಸಲು ಬಯಸುವ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ.
4. ನಂತರ ಅಪ್ಲೈ ಆನ್‌ಲೈನ್‌ನಲ್ಲಿ ಕ್ಲಿಕ್ ಮಾಡಿ, ನಂತರ ಹೊಸ ನೋಂದಣಿ ಕ್ಲಿಕ್ ಮಾಡಿ
5. ನೀವು ಈಗಾಗಲೇ ನೋಂದಾಯಿಸಿಕೊಂಡಿದ್ದರೆ, ಲಾಗಿನ್ ಕ್ಲಿಕ್ ಮಾಡಿ
6. ಲಾಗ್ ಇನ್ ಮಾಡಿದ ನಂತರ, ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಓದಿ- SBI Recruitment 2020: ಎಸ್‌ಬಿಐನಲ್ಲಿ CBO ಹುದ್ದೆಗೆ ಇಂಟರ್ವ್ಯೂ
ಶುಲ್ಕ
ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ, ಅದರ ಕೊನೆಯ ದಿನಾಂಕ ಅಕ್ಟೋಬರ್ 8 ಆಗಿದೆ. ಇದರೊಂದಿಗೆ ಜನರಲ್, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 750 ರೂ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.