ತುಮಕೂರು: ಮಾಧುಸ್ವಾಮಿ (Madhuswamy) ಪರ ಬ್ಯಾಟ್ ಬೀಸಿದ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಕಾಂಗ್ರೆಸ್ ಸೇರಲು ಬಿಜೆಪಿಯ ಹಲವು ಶಾಸಕರು, ಸಚಿವರು ತಯಾರಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ಸಚಿವ ಮಾಧುಸ್ವಾಮಿ ಒಬ್ಬ ಸಮರ್ಥ ನಾಯಕ. ಬಿಜೆಪಿ ಸರ್ಕಾರದ ಒಬ್ಬ ಕ್ರೀಯಾಶೀಲ ಸಚಿವ. ತುಮಕೂರು ಜಿಲ್ಲೆಯಲ್ಲಿ ಉಸ್ತುವಾರಿಯಾಗಿ ಒಳ್ಳೆ ಕೆಸಲ ಮಾಡಿದ್ದಾರೆ. ಅವರನ್ನು ಜಿಲ್ಲೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದು ನಮಗೆ ನಿರಾಸೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.


ಇದನ್ನೂ ಓದಿ: ಗೆಲ್ಲುವುದಕ್ಕೆ ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಸಿಎಂ ಕನಸು: ಸಿದ್ದರಾಮಯ್ಯಗೆ ತಿವಿದ ಬಿಜೆಪಿ


ಇದರಿಂದತುಮಕೂರು ಜಿಲ್ಲೆಯ ಜನತೆಗೆ ನಷ್ಟವಾಗಿದೆ. ಅವರು ಸ್ವಲ್ಪ ಕೋಪಿಷ್ಟರಾಗಿರಬಹುದು. ಆದರೆ ಸಮರ್ಥ ನಾಯಕ. ಇದು ಬಿಜೆಪಿ ಸರ್ಕಾರದಿಂದ ತುಮಕೂರು ಜನತೆಗೆ ಮಾಡಿದ ಅನ್ಯಾಯ ಎಂದಿದ್ದಾರೆ. 


ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ ನಡೆಯಲಿದೆ:


ಸಚಿವ ಸಂಪುಟ (Cabinet Expansion) ವಿಸ್ತರಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ತಾರೆ ಬೆಳವಣಿಗೆ ಆಗಲಿದೆ. ಅದು ಯಾವ ರೀತಿಯ ಬೆಳವಣಿಗೆಯೂ ಆಗಬಹುದು. ಸಚಿವ ಸ್ಥಾನ ಸಿಗದಿದ್ದಾಗ ಪಕ್ಷ ಬಿಟ್ಟು ಹೋಗೋರು ಇದ್ದಾರೆ ಎಂದು ಹೇಳಿದ್ದಾರೆ.


ಕಾಂಗ್ರೆಸ್ (Congress) ಸೇರಲು ಬಿಜೆಪಿಯ ಹಲವು ಶಾಸಕರು, ಸಚಿವರು ತಯಾರಿದ್ದಾರೆ. ಬಿಜೆಪಿಗೆ ವಲಸೆ ಹೋದವರು, ಮೂಲ ಬಿಜೆಪಿಯವರು ಕಾಂಗ್ರೆಸ್ ‌ಸೇರಲು ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬಳಿ ಕಾಂಗ್ರೆಸ್ ಗೆ ಸೇರುವವರ ಪಟ್ಟಿ ಇದೆ ಎಂದು ತಿಳಿಸಿದ್ದಾರೆ. 


ಇದನ್ನೂ ಓದಿ:  ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಬಿಲ್ ಕುಲ್ ಇಲ್ಲ: ಸಚಿವ ಈಶ್ವರಪ್ಪ


ತುಮಕೂರು ಜಿಲ್ಲೆಯಲ್ಲಿ ಹಲವು ಬಿಜೆಪಿ (BJP)ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದು ತುಮಕೂರಿನಲ್ಲಿ ಡಾ.ಜಿ.ಪರಮೇಶ್ವರ ಸ್ಪೋಟಕ ಹೇಳಿಕೆ ನೀಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.