DKS: `ಆ ಮಹಾನಾಯಕರನ್ನು ತೋರಿಸಲಿ, ಯಾರು ಬೇಡ ಎಂದಿದ್ದಾರೆ?`
ಶಿವಮೊಗ್ಗದಲ್ಲಿ ಹರ್ಷನ ಕೊಲೆ ಆದ ಮೇಲೆ ಒಂದು ದೊಡ್ಡ ಷಡ್ಯಂತ್ರ ನಡೆದಿತ್ತು. ಟ್ರಸ್ಟ್‌ವೊಂದು ರಚನೆಯಾಗಿದ್ದು, ಅದರಲ್ಲಿ ದೊಡ್ಡ ಮನುಷ್ಯರ ಕೈವಾಡವಿದೆ. ಇವರೆಲ್ಲ ಸೇರಿ ಕೊಲೆ ಮಾಡಲು ಸ್ಕೆಚ್ ಹಾಕುತ್ತಾರೆ. ಆದರೆ ಶಿವಮೊಗ್ಗ ಪೊಲೀಸರು ಬುದ್ದಿವಂತಿಕೆಯಿಂದ ತನಿಖೆ ಮಾಡಿ ಅಂತವರನ್ನು ತಕ್ಷಣ ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಸಂತೋಷ ಪಾಟೀಲ್ ಪ್ರಕರಣದ ಹಿಂದೆ ಮಹಾನಾಯಕರು ಇದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, "ಆ ಮಹಾನಾಯಕರನ್ನು ತೋರಿಸಲಿ, ಯಾರು ಬೇಡ ಎಂದಿದ್ದಾರೆ. ನಾನೇನು 300 ಕೋಟಿ ಕೆಲಸವನ್ನ 800 ಕೋಟಿ ರೂಗೆ ಮಾಡಿಸಿಕೊಂಡಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಇದನ್ನು ಓದಿ: Rabbit Snake Fight video : ಅಪಾಯಕಾರಿ ಹಾವಿನೊಂದಿಗೆ ಭಯಂಕರವಾಗಿ ಗುದ್ದಾಡಿದ ಪುಟ್ಟ ಮೊಲ
ಶಿವಮೊಗ್ಗದಲ್ಲಿ ಹರ್ಷನ ಕೊಲೆ ಆದ ಮೇಲೆ ಒಂದು ದೊಡ್ಡ ಷಡ್ಯಂತ್ರ ನಡೆದಿತ್ತು. ಟ್ರಸ್ಟ್‌ವೊಂದು ರಚನೆಯಾಗಿದ್ದು, ಅದರಲ್ಲಿ ದೊಡ್ಡ ಮನುಷ್ಯರ ಕೈವಾಡವಿದೆ. ಇವರೆಲ್ಲ ಸೇರಿ ಕೊಲೆ ಮಾಡಲು ಸ್ಕೆಚ್ ಹಾಕುತ್ತಾರೆ. ಆದರೆ ಶಿವಮೊಗ್ಗ ಪೊಲೀಸರು ಬುದ್ದಿವಂತಿಕೆಯಿಂದ ತನಿಖೆ ಮಾಡಿ ಅಂತವರನ್ನು ತಕ್ಷಣ ಅರೆಸ್ಟ್ ಮಾಡಿದ್ದಾರೆ. ಇಲ್ಲದಿದ್ದರೆ ಕೋಮುಗಲಭೆ ಸೃಷ್ಟಿಸಲು, ಪ್ರಕರಣವನ್ನು ಡೀವಿಯೇಟ್ ಮಾಡಲು ಹುನ್ನಾರ ನಡೆಸಲಾಗಿತ್ತು ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಮಾರ್ಚ್ 20 ರಿಂದ ಏಪ್ರಿಲ್ 14 ರವರೆಗೂ ಏನೇನು ಸಂಚು ನಡೆದಿತ್ತು ಎಂಬುದನ್ನು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಸದ್ಯ ಹರ್ಷ ಕೊಲೆ ಪ್ರಕರಣದಲ್ಲಿ ರಾಕಿ, ವಿಶ್ವ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದರು. ಇನ್ನು ಏಪ್ರಿಲ್ 17ರಂದು ಶಿವಮೊಗ್ಗ ಪ್ರವಾಸವಿತ್ತು. ಆದರೆ ಸದ್ಯ ಅದನ್ನು ಮುಂದಕ್ಕೆ ಹಾಕಲಾಗಿದೆ ಎಂದರು.
ಇದನ್ನು ಓದಿ: ನಟಿ ಸೌಂದರ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಂಸ್ಟಿಂಗ್ ಮಾಹಿತಿ..!
ಸಣ್ಣ ಗುತ್ತಿಗೆದಾರರಿಂದ ಹಣ ಕಲೆಕ್ಟ್ ಮಾಡಲು ತೊಂದರೆ ಆಗುತ್ತದೆ ಎಂದು ದೊಡ್ಡವರಿಗೆ ಪ್ಯಾಕೇಜ್ ಕೊಡಲು ಹೊರಟ್ಟಿದ್ದಾರೆ. ಕೆಂಪಣ್ಣ ಎಂಬವರು ದೂರು ನೀಡಿದ ಮೇಲೆ ಸಣ್ಣ ಗುತ್ತಿಗೆದಾರರನ್ನ ಮಟ್ಟ ಹಾಕಲು ಸಂಚು ಮಾಡುತ್ತಿದ್ದಾರೆ. ಸಣ್ಣ ಗುತ್ತಿಗೆದಾರರು ಬದುಕಬೇಕು. ಎಲ್ಲರೂ ಬದುಕಬೇಕು ಎಂದರು.
ಈಶ್ವರಪ್ಪ ಪ್ರಕರಣ ಸಂಬಂಧ ಮಾತನಾಡಿದ ಅವರು, ತನಿಖೆ ನಡೆಯಬೇಕಾದರೆ ಸಿಎಂ ಮತ್ತು ಯಡಿಯೂರಪ್ಪನವರು ಈಶ್ವರಪ್ಪ ಏನು ತಪ್ಪು ಮಾಡಿಲ್ಲ ಎಂದು ಹೇಗೆ ಹೇಳಿಕೆ ನೀಡಿದ್ದಾರೆ. ಕೊಲೆ ಮಾಡಿರೋರನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ. ಸಿಎಂ ಪ್ರಜ್ಞಾವಂತರು ಎಂದು ತಿಳಿದಿದ್ದೆ, ಕರ್ನಾಟಕದ ಈ ಎಲ್ಲ ಅವಾಂತರಗಳಿಗೆ ಸಿಎಂ ಕಾರಣ ಎಂದು ಗಂಭೀರವಾಗಿ ಆರೋಪಿಸಿದರು.