Delhi Covid: ದೆಹಲಿಯಲ್ಲಿ ಮತ್ತೆ ಕೊರೊನಾ ಏರಿಕೆ ಭೀತಿ : ಜಿನೋಮ್‌ ಟೆಸ್ಟ್‌ಗೆ 300 ಮಾದರಿ ರವಾನೆ

'XE' ತಳಿಯ  ಪ್ರಕರಣವು ನಗರದಲ್ಲಿ ಹರಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಜೀನೋಮ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಕೋವಿಡ್ -19 ಸೋಂಕಿಗೆ ಒಳಗಾದ ಜನರ ಸುಮಾರು 300 ಮಾದರಿಗಳನ್ನು ಜಿನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

Written by - Bhavishya Shetty | Last Updated : Apr 16, 2022, 10:21 AM IST
  • ದೆಹಲಿಯಲ್ಲಿ ಮತ್ತೆ ಏರಿಕೆಯಾದ ಕೊರೊನಾ
  • 300 ಜನರ ಮಾದರಿ ಜೀನೋಮ್ ಟೆಸ್ಟ್‌ಗೆ ರವಾನೆ
  • ಕೊರೊನಾ ವೈರಸ್‌ನ ಹೊಸ ರೂಪಾಂತರ 'XE' ಪ್ರಕರಣದ ಭೀತಿ
Delhi Covid: ದೆಹಲಿಯಲ್ಲಿ ಮತ್ತೆ ಕೊರೊನಾ ಏರಿಕೆ ಭೀತಿ : ಜಿನೋಮ್‌ ಟೆಸ್ಟ್‌ಗೆ 300 ಮಾದರಿ ರವಾನೆ title=
Delhi Corona

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇನ್ನೊಂದೆಡೆ ಕೊರೊನಾ ವೈರಸ್‌ನ ಹೊಸ ರೂಪಾಂತರ 'XE' ಪ್ರಕರಣದ ಭೀತಿ ನಡುವೆ, ಈಗಾಗಲೇ ಸೋಂಕಿಗೆ ತುತ್ತಾದ 300 ಜನರ ಮಾದರಿಯನ್ನು ಜೀನೋಮ್ ಟೆಸ್ಟ್‌ಗಾಗಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ಈ ಮಾಹಿತಿ ನೀಡಿವೆ. 

ಇದನ್ನು ಓದಿ: ಗುಜರಾತ್ ನ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಗೆ ಆಹ್ವಾನವಿತ್ತ ಆಪ್

'XE' ತಳಿಯ  ಪ್ರಕರಣವು ನಗರದಲ್ಲಿ ಹರಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಜೀನೋಮ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಕೋವಿಡ್ -19 ಸೋಂಕಿಗೆ ಒಳಗಾದ ಜನರ ಸುಮಾರು 300 ಮಾದರಿಗಳನ್ನು ಜಿನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಇನ್ನು ಫೆಬ್ರವರಿ 27 ರ ನಂತರ ನವದೆಹಲಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಶುಕ್ರವಾರ ದೆಹಲಿಯಲ್ಲಿ 366 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಈಗ ಸೋಂಕಿನ ಪ್ರಮಾಣ ಶೇ.3.95ಕ್ಕೆ ಏರಿಕೆಯಾಗಿದೆ. 

"ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ": 
ಪ್ರಕರಣಗಳ ಏರಿಕೆ ಬೆನ್ನಲ್ಲೇ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವಂತೆ ಎಲ್ಲಾ ಆಸ್ಪತ್ರೆಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಸೂಚನೆ ನೀಡಿದೆ. ಸದ್ಯದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಈಗಾಗಲೇ ತಿಳಿಸಿದ್ದಾರೆ. 

ಇದನ್ನು ಓದಿ: 'ನಾವು ಯಾರನ್ನೂ ದ್ವೇಷಿಸುವುದಿಲ್ಲ ಆದರೆ, ಕೈಯಲ್ಲಿ ಕೋಲು ಇಟ್ಟುಕೊಳ್ಳುತ್ತೇವೆ'

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 366 ಕೋವಿಡ್-19 ಪ್ರಕರಣಗಳು ದಾಖಲಾಗಿದೆ. ಸದ್ಯ ಸೋಂಕಿತರ ಸಂಖ್ಯೆ 18,67,572ಕ್ಕೆ ಏರಿಕೆಯಾಗಿದ್ದು, ಆ ಪೈಕಿ 26,158 ಮಂದಿ ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 2ಕ್ಕಿಂತ ಹೆಚ್ಚಾಗಿದ್ದು, ಕಳೆದೊಂದು ವಾರದಲ್ಲಿ ಮನೆಯಲ್ಲಿ ಕ್ವಾರಂಟೈನ್ ಆಗಿರುವವರ ಸಂಖ್ಯೆ ಶೇ 48 ರಷ್ಟಿದೆ ಎಂದು ಸರ್ಕಾರದ ದತ್ತಾಂಶಗಳು ತಿಳಿಸಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News