Rabbit Snake Fight video : ಅಪಾಯಕಾರಿ ಹಾವಿನೊಂದಿಗೆ ಭಯಂಕರವಾಗಿ ಗುದ್ದಾಡಿದ ಪುಟ್ಟ ಮೊಲ

  ಚಿಕ್ಕ ಮೊಲವೊಂದು ಹೊಲದಲ್ಲಿ ಅಪಾಯಕಾರಿ ಹಾವಿನೊಂದಿಗೆ ಕಾದಾಡುತ್ತಿರುವ ದೃಶ್ಯ ಕಂಡು ಬಂದಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಚಿಕ್ಕ ಮೊಲವು ಅಂತಹ ಬೃಹತ್ ಮತ್ತು ವಿಷಕಾರಿ ಹಾವಿಗೆ ಕಿಂಚಿತ್ತೂ ಹೆದರುವುದಿಲ್ಲ . 

Written by - Ranjitha R K | Last Updated : Apr 16, 2022, 01:26 PM IST
  • ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಕಾದಾಟದ ಹಲವು ವಿಡಿಯೋ
  • ಹಾವಿನೊಂದಿಗೆ ಕಾದಾಟಕ್ಕಿಳಿದ ಪುಟ್ಟ ಮೊಲ
  • ಹಾವಿನ ದಾಳಿಗೆ ,ಮೊಲದ ಪ್ರತಿದಾಳಿ
Rabbit Snake Fight video : ಅಪಾಯಕಾರಿ ಹಾವಿನೊಂದಿಗೆ ಭಯಂಕರವಾಗಿ ಗುದ್ದಾಡಿದ ಪುಟ್ಟ ಮೊಲ  title=
Viral video (photo instagram)

 Rabbit Snake Fight Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಸೋಶಿಯಲ್ ಮೀಡಿಯಾದಲ್ಲಿ ಹಾವು ಮತ್ತು ಮುಂಗುಸಿಗಳ ಕಾದಾಟದ ಅದೆಷ್ಟೋ ವಿಡಿಯೋಗಳು ಕಾಣಸಿಗುತ್ತವೆ. ಆದರೆ ಮೊಲ ಮತ್ತು ಹಾವಿನ ಕಾದಾಟದ ವಿಡಿಯೋಗಳನ್ನು ಎಂದಾದರೂ ನೋಡಿದ್ದೀರಾ? ಅಂತಹ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ವೈರಲ್ ಆಗಿದೆ. 

ಹಾವಿನೊಂದಿಗೆ ಕಾದಾಟಕ್ಕಿಳಿದ ಪುಟ್ಟ ಮೊಲ :
ಚಿಕ್ಕ ಮೊಲವೊಂದು ಗದ್ದೆಯಲ್ಲಿ ಅಪಾಯಕಾರಿ ಹಾವಿನೊಂದಿಗೆ ಕಾದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಳೆದ ಕೆಲವು ದಿನಗಳಿಂದ ಈ ವಿಡಿಯೋ ವೈರಲ್ ಆಗುತ್ತಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಚಿಕ್ಕ ಮೊಲವು ವಿಷಕಾರಿ ಹಾವಿಗೆ ಹೆದರದೆ ಅದರೊಂದಿಗೆ ಗುದ್ದಾಡುತ್ತಿರುವುದನ್ನು ಇಲ್ಲಿ ಕಾಣಬಹುದು.  ಒಂದು ಸಲಕ್ಕೆ ಈ ವಿಡಿಯೋವನ್ನು ನೋಡಿದರೆ ಇದು ಮೊಲವೋ ಮುಂಗುಸಿಯೋ ಎಂದು ಸಂದೇಹ ಬರುವಷ್ಟರ ಮಟ್ಟಿಗೆ ಮೊಲ ಹಾವಿನೊಂದಿಗೆ ಕಾದಾಡುತ್ತದೆ. 

ಇದನ್ನೂ ಓದಿ :   Viral Video: ಪಂಕ್ಚರ್ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಏನಾಗಿದೆ ನೋಡಿ..!

ಹಾವಿನ ದಾಳಿಗೆ ಮೊಲ ಪ್ರತಿದಾಳಿ ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹಾವಿನ ದಾಳಿಗೆ ಕಿಂಚಿತ್ತೂ ಹೆದರದ ಮೊಲ, ಪದೇ ಪದೇ ಪ್ರತಿದಾಳಿ ಮಾಡುತ್ತದೆ. ಕೊನೆಯಲ್ಲಿ, ಈ ಪುಟ್ಟ ಮೊಲವು ಆ ವಿಷಕಾರಿ ಪ್ರಾಣಿಯನ್ನು ಅಲ್ಲಿಂದ ಓಡಿಸುವುದರಲ್ಲಿ ಯಶಸ್ವಿಯಾಗುತ್ತದೆ. 

 

instagram ನಲ್ಲಿ ವಿಡಿಯೋ  : 
ವೈರಲ್ ವೀಡಿಯೊವನ್ನು predator.unity ಹೆಸರಿನ Instagram ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೋ ಎಷ್ಟು ಅದ್ಭುತವಾಗಿದೆ ಎಂದರೆ ಅದನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಸಾವಿರಾರು ಮಂದಿ ವಿಡಿಯೋವನ್ನು ಲೈಕ್ ಕೂಡ ಮಾಡಿದ್ದಾರೆ. ಮೊಲ ಮತ್ತು ಹಾವಿನ ಕಾದಾಟದ ವಿಶಿಷ್ಟ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತುಂಬಾ ಇಷ್ಟಪಡುತ್ತಿದ್ದಾರೆ. 

ಇದನ್ನೂ ಓದಿ :  Shanghai Lockdown: ಕೊರೊನಾ ಲಾಕ್ಡೌನ್ ನಲ್ಲಿ ಮನೆಯಲ್ಲಿ ಬಂಧಿಯಾದ ಜನರ ಕಿರುಚಾಟ, Viral Video

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News