ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರ (ಜಯನಗರ, ಬಿಟಿಎಂ ಲೇಔಟ್, ಪದ್ಮನಾಭನಗರ, ಬಸನವಗುಡಿ, ವಿಜಯನಗರ, ಚಿಕ್ಕಪೇಟೆ) ಗಳಲ್ಲಿ 48 ಹೊಸ ವಾರ್ಡ್ಗಳಿದ್ದು, ಸದರಿ ವಾರ್ಡ್ ಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಆರ್ಟಿರೀಯಲ್, ಸಬ್-ಆರ್ಟಿರೀಯಲ್ ಮತ್ತು ವಾರ್ಡ್ ರಸ್ತೆಗಳಲ್ಲಿ ಇದ್ದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಹೇಳಿದೆ. 


COMMERCIAL BREAK
SCROLL TO CONTINUE READING

ಮುಂದುವರೆದಂತೆ, ದಕ್ಷಿಣ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್-ಆರ್ಟಿಯಲ್ ಹಾಗೂ ವರ್ಡ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳು ಕಂಡುಬಂದಲ್ಲಿ ನೇರವಾಗಿ ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ: 26566362/ 22975703ಗೆ ಸಾರ್ವಜನಿಕರು ದೂರನ್ನು ದಾಖಲಿಸುವಂತೆ ಬಿಬಿಎಂಪಿ ಕೋರಲಾಗಿದೆ. 


ಇದನ್ನೂ ಓದಿ: KMF : ಸಾಮಾನ್ಯ ಜನರಿಗೆ ಬಿಗ್ ಶಾಕ್ : ನಾಳೆಯಿಂದ ಹಾಲು - ಮೊಸರಿನ ದರ ಏರಿಕೆ


ಅಲ್ಲದೇ, ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ ವಾಟ್ಸಪ್ ಸಂಖ್ಯೆ: 9480685704ಗೆ ಜಿಯೋ ಲೊಕೇಷನ್/ವಿಳಾಸ ಇರುವ ರಸ್ತೆ ಗುಂಡಿಗಳ ಭಾವಚಿತ್ರವಗಳು ವಾಟ್ಸಪ್ ಸಂಖ್ಯೆಗೆ ಕಳುಹಿಸಲು ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ರವರು ನಾಗರಿಕರಲ್ಲಿ ಕೋರಿದ್ದಾರೆ. ಅಲ್ಲದೆ, ಹೆಚ್ಚಿನ ಸಂಪರ್ಕಕ್ಕಾಗಿ:  ಮೋಹನ್ ಕೃಷ್ಣಾ, ಮುಖ್ಯ ಅಭಿಯಂತರರು, ದಕ್ಷಿಣ ವಲಯ, ಬಿಬಿಎಂಪಿ. ಮೊ.ಸಂ: 9480683337 ಗೆ ಕರೆ ಮಾಡುವಂತೆ ತಿಳಿಸಿದ್ದಾರೆ.


ಇನ್ನು ಮಳೆಗಾಲದಲ್ಲಿ ರಸ್ತೆಯಲ್ಲಿ ಕರೆ ಇದೆಯೋ ಅಥವಾ ಕೆರೆಯಲ್ಲಿ ರಸ್ತೆ ಇದೆಯೋ ಅಂತ ತಲೆಕೆಡಿಸಿಕೊಂಡಿದ್ದ ಜನರಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.  ಇನ್ನು ರಸ್ತೆ ಗುಂಡಿಗೆ ಬಿದ್ದು, ಹಲವಾರು ಸವಾರರು ಸಾವನಪ್ಪಿದ್ದರು. ಬೃಹತ್‌ ಬೆಂಗಳೂರಿನಲ್ಲಿ ದಿನನಿತ್ಯ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಬೈಕ್‌ ಚಲಾಯಿಸುವಂತ ಪ್ರಸಂಗ ಎದುರಾಗಿತ್ತು. ಸದ್ಯ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮುಂದು ವರೆದಿದ್ದು, ದಕ್ಷಣ ವಲಯದಲ್ಲಿ ಕಾಮಗಾರಿ ಕಂಪ್ಲೀಟ್‌ ಆಗಿದೆ ಎಂದು ಬಿಬಿಎಂಪಿ ತಿಳಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.